Home Local ಕಸಾಪ ಹಾಗೂ ಜನತಾವಿದ್ಯಾಲಯದ ಸಹಯೋಗದಲ್ಲಿ ಭಾಷಣ ಹಾಗೂ ಪ್ರಬಂಧ ಸ್ಪರ್ಧೆ.

ಕಸಾಪ ಹಾಗೂ ಜನತಾವಿದ್ಯಾಲಯದ ಸಹಯೋಗದಲ್ಲಿ ಭಾಷಣ ಹಾಗೂ ಪ್ರಬಂಧ ಸ್ಪರ್ಧೆ.

SHARE

ಕೆನರಾ ವೆಲ್ಫೇರ ಟ್ರಸ್ಟನ ಜನತಾವಿದ್ಯಾಲಯ ಮುರ್ಡೇಶ್ವರ ಇದರ ಸುವರ್ಣ ಮಹೋತ್ಸವದ ಎರಡನೇ ಹಂತದ ಕಾರ್ಯಕ್ರಮದ ಅಂಗವಾಗಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜನತಾವಿದ್ಯಾಲಯದ ಸಹಯೋಗದಲ್ಲಿ ಪ್ರೌಢಶಾಲಾ ವಿದ್ಯಾಥಿಗಳಿಗಾಗಿ ತಾಲೂಕಾ ಮಟ್ಟದ ಭಾಷಣ ಹಾಗೂ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ದಿನಕರ ದೇಸಾಯಿಯವರ ಬದುಕು ಬರೆಹ ಎಂಬ ವಿಷಯದ ಪ್ರಬಂಧ ಸ್ಪರ್ಧೆಯಲ್ಲಿ ಸರ್ಕಾರಿ ಪ್ರೌಢಶಾಲೆ ಸೋನಾರಕೇರಿಯ ವಿಧ್ಯಾರ್ಥಿನಿ ಅಂಕಿತಾ ಎನ್.ದೇವಾಡಿಗ ಪ್ರಥಮ, ಆನಂದಶ್ರಮ ಪ್ರೌಢಶಾಲೆಯ ಶ್ರೇಯಾ ವಿ.ನಾಯ್ಕ ದ್ವಿತೀಯ, ಶ್ರೀವಲಿ ಪ್ರೌಢಶಾಲೆಯ ಚೈತ್ರಾ ಎಮ್.ನಾಯ್ಕ ತ್ರತೀಯ ಸ್ಥಾನ ಪಡೆದುಕೊಂಡಿದ್ದಾರೆ. ಉರ್ದು ಪ್ರಬಂಧ ಸ್ಪರ್ದೆಯಲ್ಲಿ ಮುರ್ಡೇಶ್ವರದನ್ಯಾಶನಲ್ ಪ್ರೌಢಶಾಲೆ ಫಾತೀಮಾ ನುಹಾ ಪ್ರಥಮ, ಭಟ್ಕಳದ ಐಏಯುಎಚ್‍ಎಸ್ ನ ಆಶ್ನಾ ಗಝಲ್ ದ್ವಿತೀಯ ಹಾಗೂ ಮಹ್ಮದ ನೈಮನ್ ತ್ರತೀಯ ಸ್ಥಾನ ಪಡೆದುಕೊಂಡಿದ್ದಾರೆ. ದಿನಕರ ದೇಸಾಯಿಯವರ ಚುಟುಕುಗಳಲ್ಲಿ ಸಾಮಾಜಿಕ ಕಳಕಳಿ ಎಂಬ ವಿಷಯದ ಕುರಿತ ಕನ್ನಡ ಭಾಷಣ ಸ್ಪರ್ಧೆಯಲ್ಲಿ ಶ್ರೀವಲಿ ಪ್ರೌಢಶಾಲೆಯ ವೀಣಾ ನಾಯ್ಕ ಪ್ರಥಮ, ಜನತಾ ವಿದ್ಯಾಲಯ ಮುರ್ಢೇಶ್ವರದ ಚಂದನ ನಾಯ್ಕ ದ್ವಿತೀಯ, ಸಿದ್ಧಾರ್ಥ ಪ್ರೌಢಶಾಲೆಯ ನಾಗಶ್ರೀ ಆರ್.ಶೆಟ್ಟಿ ತೃತೀಯ ಸ್ಥಾನ ಪಡೆದಿದ್ದಾರೆ.ಉರ್ದು ಭಾಷಣ ಸ್ಪರ್ದೆಯಲ್ಲಿ ಭಟ್ಕಳದ ಐಏಯುಎಚ್‍ಎಸ್ ನ ರುಖೇಬ ಅಹ್ಮದ್ ಪ್ರಥಮ ಹಾಗೂ ಇಕ್ರಾ ಆಂಗ್ಲ ಮಾಧ್ಯಮ ಶಾಲೆಯ ನೌಫಾ ದ್ವಿತೀಯ ಹಾಗೂ ನ್ಯಾಶನಲ್ ಹೈಸ್ಕೂಲಿನ ನಿಯಾಸ್ ಆಲಿಶಾ ತ್ರತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಬಹುಮಾನ ವಿಜೇತರಿಗೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪ್ರಶಂಸನಾ ಪತ್ರ, ಪುಸ್ತಕಗಳನ್ನು ಹಾಗೂ ಜನತಾ ವಿದ್ಯಾಲಯದ ವತಿಯಿಂದ ನಗದು ಬಹುಮಾನ, ಪ್ರಮಾಣ ಪತ್ರವನ್ನೂ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಎಸ್.ಎಸ್.ಕಾಮತ್, ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ, ನಿವೃತ್ತ ಶಿಕ್ಷಕ ಡಿ.ಎಮ್.ಕರ್ಕಿಕರ್ ಹಾಗೂ ನಿವೃತ್ತ ಶಿಕ್ಷಕಿ ಚಂದ್ರಕಲಾ ಕಾಮತ್, ಜನತಾವಿದ್ಯಾಲಯದ ಮುಖ್ಯಾಧ್ಯಾಪಕ ಸಂದೇಶ ಉಳ್ಳಿಕಾಶಿ ವಿತರಿಸಿದರು. ಬಹುಮಾನ ವಿತರಣಾ ಕಾರ್ಯಕ್ರಮವನ್ನು ಶಿಕ್ಷಕ ಮಹೇಶ ಹಣಬರಟ್ಟಿ ನಿರ್ವಹಿಸಿದರು. ಆರ್.ಎನ್.ಎಸ್.ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಎಮ್.ಎಸ್.ಹೆಗಡೆ, ಗಣಪತಿ ಕಾಯ್ಕಿಣಿ ಹಾಗೂ ಶಿಕ್ಷಕರಾದ ಶಫೀ ಮತ್ತು ಬಳಗದವರು ತೀರ್ಪುಗಾರರಾಗಿ ಕರ್ತವ್ಯ ನಿರ್ವಹಿಸಿದರು.ಕಾರ್ಯಕ್ರಮದಲ್ಲಿ ಶಾಲಾ ಹಿರಿಯ ಶಿಕ್ಷಕರಾದ ಶೇಷಗಿರಿ ಗವಾಳಿ, ಆಶಾ ಕಲ್ಮನೆ, ಪ್ರಹ್ಲಾದ, ರವಿಶಂಕರ್, ಮಹೇಶ ನಾಯ್ಕ, ನೇತ್ರಾ ಮಡಿವಾಳ, ಅಭೀಷೇಕ ನಾಯ್ಕ, ರಜನಿ ದೇವಾಡಿಗ ಹಾಗೂ ವಿವಿಧ ಶಾಲೆಗಳಿಂದ ಆಗಮಿಸಿದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.