Home Important ಸಚಿವ ಯು ಟಿ ಖಾದರ್ ಕುರಾನ್ ಗ್ರಂಥ ಮೊದಲು ಅಧ್ಯಯನ ಮಾಡಿಕೊಂಡು ನನ್ನ ಬಗ್ಗೆ ಮಾತಾಡಲಿ...

ಸಚಿವ ಯು ಟಿ ಖಾದರ್ ಕುರಾನ್ ಗ್ರಂಥ ಮೊದಲು ಅಧ್ಯಯನ ಮಾಡಿಕೊಂಡು ನನ್ನ ಬಗ್ಗೆ ಮಾತಾಡಲಿ : ಅನಂತ ಕುಮಾರ್

SHARE

ಆಹಾರ ಸಚಿವ ಯು ಟಿ ಖಾದರ್ ಕುರಾನ್ ಗ್ರಂಥ ಮೊದಲು ಅಧ್ಯಯನ ಮಾಡಿಕೊಂಡು ನಂತರ ಸಂವಿಧಾನ ಹಾಗೂ ತಮ್ಮ ಕುರಿತು ಮಾತನಾಡಲಿ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿದರು.

ಶೃಂಗೇರಿ ಮಠಕ್ಕೆ ಆಗಮಿಸಿದ್ದ ಅನಂತ್ ಕುಮಾರ್ ಹೆಗಡೆ ಶಾರದೆಯ ದರ್ಶನ ಪಡೆದು ನಂತರ ಬಾಳೆಹೊನ್ನೂರು ರಂಬಾಪುರಿ ಮಠಕ್ಕೆ ತೆರಳಿ ಗುರುಗಳ ಆಶಿರ್ವಾದ ಪಡೆದರು ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಟಿಪ್ಪು ಜಯಂತಿ ಆಚರಣೆಯ ಸರ್ಕಾರಿ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವನಾದ ನಾನು ಭಾಗವಹಿಸುವುದಿಲ್ಲ ಎಂಬ ಹೇಳಿಕೆಗೆ ಯು ಟಿ ಖಾದರ್ ಅವರು ತನಗೆ ಶಿಷ್ಟಾಚಾರದ ಪ್ರಕಾರ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಹೇಳಿರುವ ಕುರಿತು ಪ್ರತಿಕ್ರಿಯೆ ನೀಡಿದರು.

ಇಸ್ಲಾಂ ಮತದಲ್ಲಿ ವ್ಯಕ್ತಿ ಪೂಜೆ ಮಾಡುವುದಿಲ್ಲ, ವ್ಯಕ್ತಿ ಪೂಜೆ ಇಸ್ಲಾಂಗೆ ವಿರುದ್ಧ ಆದ್ದರಿಂದ ಖಾದರ್ ಅವರು ಮೊದರು ಕುರಾನ್ ಅಧ್ಯಾಯ ಮಾಡಿಕೊಂಡು ನಂತರ ಸಂವಿಧಾನದ ಬಗ್ಗೆ ಮಾತನಾಡಲಿ ಎಂದು ಹೇಳಿದರು.