Home Local ಸಂಪನ್ನವಾದ ಕರ್ಕಿ ವಲಯದ ಪಾಕೋತ್ಸವ!

ಸಂಪನ್ನವಾದ ಕರ್ಕಿ ವಲಯದ ಪಾಕೋತ್ಸವ!

SHARE

ಹೊನ್ನಾವರ ಮಂಡಲಾಂತರ್ಗತ ಕರ್ಕಿ ಹವ್ಯಕ ವಲಯದಲ್ಲಿ ನಡೆದ ಪಾಕೋತ್ಸವ. ನಡೆಸಲಾಯಿತು.ಕರ್ಕಿ ವಲಯ ಮಾತೃ ಮಂಡಲಿಯಿಂದ ಸಂಘಟಿಸಲಾದ ಈ ಕಾರ್ಯಕ್ರಮದಲ್ಲಿ ನಲವತ್ತಕ್ಕೂ ಹೆಚ್ಚು ಸಾಂಪ್ರದಾಯಿಕ ತಿಂಡಿಗಳನ್ನು ಪ್ರದರ್ಶಿಸಲಾಯಿತು.

ಅಲ್ಲದೇ ಸ್ವಾಸ್ಥ್ಯ ಆಹಾರ ಪದ್ಧತಿಯ ಕುರಿತು ದತ್ತಾತ್ರಯ ಹೆಗಡೆ ಕುಂಬಾರಮಕ್ಕಿ ಮತ್ತು ಕುಮಟಾ ಮಂಡಲಾಧ್ಯಕ್ಷ ಮಂಜುನಾಥ ಭಟ್ ಸುವರ್ಣಗದ್ದೆ ವಿವರಣೆ ನೀಡಿದರು …ಮಂಡಲ ಮಾತೃ ಪ್ರಧಾನ ಶ್ರೀಮತಿ ಸಂಧ್ಯಾ ಭಟ್ ಉಪಸ್ಥಿತರಿದ್ದರು.

ವಲಯಾಧ್ಯಕ್ಷರಾದ ಗೋವಿಂದ ಜೋಶಿ ,ಕಾರ್ಯದರ್ಶಿ ಶ್ರೀ ಪಿ.ಟಿ.ಭಟ್ ಬೊಂಬೆ ಹಾಗೂ ಎಲ್ಲ ಪದಾಧಿಕಾರಿಗಳು, ಗುರಿಕಾರರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು .

ವಲಯ ಮಾತೃ ಪ್ರಧಾನ ಲಲಿತಾ ಹೆಗಡೆ ಸ್ವಾಗತಿಸಿದರು. ಶಾರದಾ ಭಟ್ ಅಭಿನಂದಿಸಿದರು …