Home Local ವಿರೋಧಿ ಪಕ್ಷದವರು ಅನಾವಶ್ಯಕವಾಗಿ ಅಪಪ್ರಚಾರ ಮಾಡುತ್ತಿದ್ದಾರೆ: ಶಾಸಕ ಮಂಕಾಳ ವೈದ್ಯ

ವಿರೋಧಿ ಪಕ್ಷದವರು ಅನಾವಶ್ಯಕವಾಗಿ ಅಪಪ್ರಚಾರ ಮಾಡುತ್ತಿದ್ದಾರೆ: ಶಾಸಕ ಮಂಕಾಳ ವೈದ್ಯ

SHARE

ಹೊನ್ನಾವರ: ಒಂದು ಸಾವಿರ ಕೋಟಿ ಅನುದಾನ ನನ್ನ ಕ್ಷೇತ್ರಕ್ಕೆ ತಂದಿದ್ದೇನೆ. ವಿರೋಧ ಪಕ್ಷದವರು ಅನಾವಶ್ಯಕ ಗೊಂದಲ ಸೃಷ್ಟಿಸಿ ಪತ್ರಿಕೆಗಳಲ್ಲಿ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಶಾಸಕ ಮಂಕಾಳ ವೈದ್ಯ ಹೇಳಿದರು. ತಾಲೂಕಿನ ಇಡಗುಂಜಿ ಗ್ರಾ.ಪಂ ವ್ಯಾಪ್ತಿಯ ಯೇಸು ಮನೆ ರಸ್ತೆ ಹಾಗೂ ಹಾಮಕ್ಕಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಶಾಸಕ ಮಂಕಾಳ್ ವೈದ್ಯ ಅವರು ಮಾತನಾಡಿದರು. ಇಡಗುಂಜಿ ಗ್ರಾ.ಪಂ ವ್ಯಾಪ್ತಿಯಲ್ಲಿ ಎಲ್ಲ ರೀತಿಯ ಮೂಲಭೂತ ಸೌಕರ್ಯ ಒದಗಿಸಿದ್ದೇನೆ. ಶಾಲೆಗೆ ಮೂಲಭೂತ ಸೌಕರ್ಯ, ರಸ್ತೆ, ಬೆಳಕನ್ನು ನೀಡಿದ್ದೇನೆ. ಇನ್ನು ಅನೇಕ ಅಭಿವೃದ್ಧಿ ಕೆಲಸಗಳು ಮಾಡಬೇಕಿದೆ, ನನ್ನ ಕೆಲಸ ಮುಗಿದಿಲ್ಲಾ. ಶಿಕ್ಷಣಕ್ಕೆ ಸಂಪೂರ್ಣ ಸಹಾಯ ಸಹಕಾರ ನೀಡುತ್ತಾ ಬಂದಿದ್ದೇನೆ. ಇದು ಚುನಾವಣೆಗೊಸ್ಕರ ಮಾಡುತ್ತಿರುವ ಕೆಲಸವಲ್ಲ. ಅಭಿವೃದ್ಧಿ ವಿಷಯದಲ್ಲಿ ಎಂದಿಗೂ ರಾಜಕಾರಣ ಮಾಡಿಲ್ಲಾ. ಯಾವುದೇ ಅನುದಾನ ತರದೆ ಕೇವಲ ಭಾಷಣ ಮಾಡಿ ದಿನ ಕಳೆಯುವ ಜಾಯಮಾನ ನನ್ನದಲ್ಲಒಂದು ಸಾವಿರ ಕೋಟಿ ಅನುದಾನ ನನ್ನ ಕ್ಷೇತ್ರಕ್ಕೆ ತಂದಿದ್ದೇನೆ. ವಿರೋಧ ಪಕ್ಷದವರು ಅನಾವಶ್ಯಕ ಗೊಂದಲ ಸೃಷ್ಟಿಸಿ ಪತ್ರಿಕೆಗಳಲ್ಲಿ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ನಾನೂ ಇಗಲೂ ಹೇಳುತ್ತಿದ್ದೆನೆ ಸಾವಿರ ಕೋಟಿ ಅನುದಾನ ತಂದಿದೆನೆ ಸುಳ್ಳು ಹೇಳುತ್ತಿಲ್ಲಾ. ಬಹಿರಂಗವಾಗಿ ಲೆಕ್ಕ ಕೋಡುತ್ತೇನೆ ನೀವು ಏನುಮಾಡುತ್ತಿರಿ? ಉತ್ತರ ಇಲ್ಲಾಲ್ಲಾ ಲೇಕ್ಕ ಸುಳ್ಳಾದರೆ ನಾನು ರಾಜಕೀಯ ನಿವೃತ್ತಿಯಾಗುತ್ತೇನೆ ನಾನು ಲೇಕ್ಕ ಕೋಟ್ಟರೆ ನಿವೇನು ಮಾಡುತ್ತಿರಿ? ನನ್ನನ್ನು ಅವಿರೋದ ಆಯ್ಕೆ ಮಾಡುತ್ತಿರಾ ಎಂದು ಸವಾಲೂ ಹಾಕಿದರು.

ಅಧ್ಯಕ್ಷತೆ ವಹಿಸಿದ ಪುಷ್ಪಾ ನಾಯ್ಕ ಮಾತನಾಡಿ ಕಳೆದ 3 ಅವಧಿಯಲ್ಲಿ ನನ್ನನ್ನು ಆರಿಸಿ ಕಳಿಸಿದ ಈ ಭಾಗದ ಜನತೆಯ ಋಣವನ್ನು ತೀರಿಸಿದ್ದೇನೆ. ಅನೇಕ ವರ್ಷಗಳಿಂದ ಅಭಿವೃದ್ಧಿ ಕಾಣದ ಹಾಮಕ್ಕಿ ಮತ್ತು ಯೇಸು ಮನೆ ರಸ್ತೆ ನನ್ನ ಅವಧಿಯಲ್ಲಿ ಪೂರ್ಣಗೊಂಡಿರುವುದು ಹೆಮ್ಮೆಯ ವಿಷಯ ನನ್ನ ಜಿಲ್ಲಾ ಪಂಚಾಯತ ಕ್ಷೇತ್ರದಲ್ಲಿ ಶಾಸಕರು 250 ಕೋಟಿಗೂ ಅಧಿಕ ಅನುದಾನ ನೀಡಿದ್ದಾರೆ. ಇದು ಹೆಮ್ಮೆಯ ವಿಷಯ ಎಂದರು. 

ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಚಂದ್ರು ಗೌಡ, ತಾ.ಪಂ. ಅಧ್ಯಕ್ಷ ಉಲ್ಲಾಸ ನಾಯ್ಕ, ತಾ.ಪಂ. ಉಪಾಧ್ಯಕ್ಷೆ ಲಲಿತಾ ನಾಯ್ಕ, ಗ್ರಾ.ಪಂ. ಅಧ್ಯಕ್ಷೆ ಬೇಬಿ ನಾಯ್ಕ, ಲೋಕೋಪಯೋಗಿ ಇಲಾಖಾಧಿಕಾರಿ ಎಮ್.ಎಸ್. ನಾಯ್ಕ, ವಿ.ಸಿ. ನಾಯ್ಕ ಉಪಸ್ಥಿತರಿದ್ದರು.