Home Local ತಾರೀಬಾಗಿಲಿನಲ್ಲಿ ನಡೆದ ಕಬಡ್ಡಿ ಪಂದ್ಯಾವಳಿ.

ತಾರೀಬಾಗಿಲಿನಲ್ಲಿ ನಡೆದ ಕಬಡ್ಡಿ ಪಂದ್ಯಾವಳಿ.

SHARE

ಕುಮಟಾ: ಶ್ರೀ ಗಂಗಾ ಗೆಳೆಯರ ಬಳಗದ ಆಶ್ರಯದಲ್ಲಿ ಅಂಬಿಗ ಸಮಾಜದ ಕಬಡ್ಡಿ ಪಂದ್ಯಾವಳಿಯು ತಾರಿಬಾಗಿಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾಂಗಣದಲ್ಲಿ ಜರುಗಿತು.

ಈ ಕಾರ್ಯಕ್ರಮವನ್ನು ಬಿಜೆಪಿ ಪ್ರಮುಖರಾದ ದಿನಕರ ಶೆಟ್ಟಿಯವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಹಿಂದುಳಿದ ಅಂಬಿಗ ಸಮಾಜದವರಿಂದ ಅತ್ಯುತ್ತಮ ರೀತಿಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ಜರುಗಲಿ ಎಂದು ಆಶಿಸಿ ಶುಭ ಕೋರಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಬಿಜೆಪಿ ಮುಖಂಡರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆಯವರು ಮಾತನಾಡಿ ಮಾನವನ ಜೀವನದಲ್ಲಿ ಕ್ರೀಡೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಅವುಗಳಿಂದ ದೈಹಿಕ ಮತ್ತು ಮಾನಸಿಕ ಸದೃಢತೆಯೊಂದಿಗೆ ಮನರಂಜನೆಯನ್ನು ಹಾಗು ಪರಸ್ಪರ ಸಾಮರಸ್ಯತೆಯನ್ನು ಕೂಡಾ ಮೂಡಿಸುತ್ತವೆ. ಕ್ರೀಡಾ ಮನೋಭಾವದೊಂದಿಗೆ ಕ್ರೀಡೆಯಲ್ಲಿ ಭಾಗವಹಿಸಬೇಕು ಹಾಗೂ ಕ್ರೀಡಾಳುಗಳ ಮಧ್ಯೆ ಏರ್ಪಡುವ ಸ್ಪರ್ಧೆ ಆರೋಗ್ಯಕರವಾಗಿರಬೇಕು. ಅಂಬಿಗ ಸಮಾಜದವರು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಸಾಂಸ್ಕøತಿಕವಾಗಿ ಮುನ್ನಡೆಯಬೇಕು. ಕೆಲವು ದಿನಗಳ ಹಿಂದೆ ಕೇಂದ್ರ ಸಚಿವರಾದ ಮಾನ್ಯ ಅನಂತಕುಮಾರ ಹೆಗಡೆಯವರು ಮೀನುಗಾರರ ಸಮುದಾಯದವರ ಬೇಡಿಕೆಗಳ ಬಗ್ಗೆ ಸ್ಥೂಲವಾಗಿ ವಿಚಾರಿಸಿ ಮೀನುಗಾರರ ಶ್ರೇಯೋಭಿವೃದ್ಧಿಗಾಗಿ ವಿಸ್ತøತ ವರದಿ ತಯಾರಿಸಿ ಶೀಘ್ರವೇ ಕಾರ್ಯೋನ್ಮುಖರಾಗಿ ಈ ಭಾಗದ ಮೀನುಗಾರರ ಸಮಸ್ಯೆಗಳಿಗೆ ಸ್ಪಂದಿಸುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಮೀನುಗಾರರ ಸಮಾಜದವರು ಒಗ್ಗಟ್ಟಾಗಿ ತಮ್ಮ ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಕ್ರೀಡಾಂಗಣದ ಉದ್ಘಾಟಕರಾದ ಸೂರಜ ನಾಯ್ಕ ಸೋನಿಯವರು ಮಾತನಾಡಿ ಇಂತಹ ಕಾರ್ಯಕ್ರಮಗಳು ನಡೆದಾಗ ರಾಜ್ಯ ಕಬಡ್ಡಿ ಅಸೋಸಿಯೇಶನ್‍ನ ಉಪಾಧ್ಯಕ್ಷರಾಗಿ ಅತ್ಯಂತ ಹರ್ಷದಿಂದ ನಮ್ಮದೇ ಕಾರ್ಯಕ್ರಮ ಎಂಬ ಮನೋಭಾವದಿಂದ ಭಾಗವಹಿಸುತ್ತೇವೆ. ಗ್ರಾಮೀಣ ಭಾಗದ ಕ್ರೀಡಾಪಟಗಳು ಕೂಡಾ ಸೂಕ್ತ ತರಬೇತಿ ಪಡೆದಲ್ಲಿ ಉತ್ತಮ ಕ್ರೀಡಾಪಟುವಾಗಿ ರೂಪುಗೊಳ್ಳಲು ಸಾಧ್ಯವಿದೆ ಎಂದು ಈ ಪಂದ್ಯಾವಳಿಯನ್ನು ಆಯೋಜಿಸಿದ ಗಂಗಾ ಗೆಳೆಯರ ಬಳಗದವರ ಕಾರ್ಯವನ್ನು ಶ್ಲಾಘಿಸಿದರು,

ಕಾರ್ಯಕ್ರಮದ ವೇದಿಕೆಯಲ್ಲಿ ಗಣೇಶ ಅಂಬಿಗ, ನಾಗರಾಜ ಹರಿಕಾಂತ ಮುಂತಾದವರು ಉಪಸ್ಥಿತರಿದ್ದರು.