Home Local ಉತ್ತರ ಕನ್ನಡದ ಹಲವು ಶಾಲೆಗಳಲ್ಲಿ ಮಕ್ಕಳ ದಿನಾಚರಣೆ.

ಉತ್ತರ ಕನ್ನಡದ ಹಲವು ಶಾಲೆಗಳಲ್ಲಿ ಮಕ್ಕಳ ದಿನಾಚರಣೆ.

SHARE

ಕುಮಟಾ : ಮಾಜಿ ಪ್ರಧಾನಿ ಜವಹರಲಾಲ ನೇಹರು ಅವರು ತಮ್ಮ ದಿನಾಚರಣೆಯ ಬದಲು ಮಕ್ಕಳ ದಿನಾಚರಣೆಯನ್ನು ಆಚರಿಸುವ ಮೂಲಕ ಸಂಬ್ರಮ ಆಚರಿಸುವಂತೆ ಹೇಳಿದ್ರು. ಅದರಂತೆ ನಮ್ಮ ದೇಶದಲ್ಲಿ ನವಂಬರ್ 14 ರಂದು ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಹೌದು, ಭಾರಿತೀಯ ಸ್ಟೇಟ್ ಬ್ಯಾಂಕ್ ಸಹಯೋಗದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಕುಮಟಾದ ಗುಡಿಗಾರಗಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಕ್ಕಳಿಂದಲೆ ನೆರವರಸಿವ ಉದ್ದೆಶದಿಂದ ವಿದ್ಯಾರ್ಥಿನಿಯಾದ ಕುಮಾರಿ ಧನ್ಯಾ ದಿವೇಕರ ಅವಳಿಂದ ದೀಪ ಬೆಳಗಿಸಲಾಯಿತು. ಉದ್ಘಾಟಿಕಯ ಬಳಿಕ ಮಾತನಾಡಿದ ವಿದ್ಯಾರ್ಥಿ ನೆಹರು ಅವರು ಮಕ್ಕಳು ದೇಶದ ಭವಿಷ್ಯವಾಗಿದ್ದಾರೆ. ಅವರಿಗೆ ನಾವು ಪ್ರಾಮುಖ್ಯತೆಯನ್ನು ನೀಡಬೇಕು ಎಂದಿದ್ದಾರೆ ಎಂದಳು

ಈ ಕಾರ್ಯಕ್ರಮಕ್ಕೆ ಆಗಮಿಸಿದ ಭಾರಿತೀಯ ಸ್ಟೇಟ್ ಬ್ಯಾಂಕ್ ಮ್ಯಾನೇಂಜರ್ ಆದಿತ್ಯ ಕೃಷ್ಣ ಭಾಗಿಯಾಗಿದ್ರು. ಅವರು ಮಾತನಾಡಿ ನನಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದಕ್ಕೆ ಬಹಳ ಸಂತೋಷವಾಗಿದೆ, ವಿದ್ಯಾರ್ಥಿಗಳು ದೇಶದ ಭವಿಷ್ಯವಾಗಿದ್ದಾರೆ, ಮತ್ತು ಚೆನ್ನಾಗಿ ಓದಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ರು..

ಈ ಕಾರ್ಯಮದಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಭಾರಿತೀಯ ಸ್ಟೇಟ್ ಬ್ಯಾಂಕ್ ವತಿಯಿಂದ ವಿವಿಧ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ಗಣ್ಯರು ನೀಡಿ ಪ್ರೋತ್ಸಹಿಸಿದ್ರು… ಈ ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾ ಮುಖ್ಯಾಧ್ಯಾಪಕರು,ಶಿಕ್ಷಕರು ಉಪಸ್ಥಿತರಿದ್ರು.

ಅದೇ ರೀತಿ ಧಾರೇಶ್ವರದ ದಿನಕರ ಪ್ರಾಥಮಿಕ ಶಾಲೆಯಲ್ಲಿ ನವೆಂಬರ್ ೧೪ ಮಕ್ಕಳ ದಿನಾಚರಣೆ ಅಂಗವಾಗಿ ಛದ್ಮವೇಷ ಕಾರ್ಯಕ್ರಮ ನಡೆಯಿತು.

ಕಾರವಾರ: ಮಕ್ಕಳ ದಿನಾಚರಣೆಯ ನಿಮಿತ್ತ ಇಲ್ಲಿನ ಬೈತ್‌ಖೋಲ್ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗಾಗಿ ಛದ್ಮವೇಶ ಸ್ಪರ್ಧೆ ಮಂಗಳವಾರ ನಡೆಯಿತು.
ಅಂಗನವಾಡಿ ಮಕ್ಕಳು ಡಾ.ಬಿ.ಆರ್ ಅಂಬೇಡ್ಕರ್, ಮಹಾತ್ಮ ಗಾಂಧೀಜಿ, ಜವಹರಲಾಲ್ ನೆಹರು ಸೇರಿದಂತೆ ವಿವಿಧ ರಾಷ್ಟ್ರ ನಾಯಕರುಗಳ ವೇಶತೊಟ್ಟು ಸಂಭ್ರಮಿಸಿದರು. ಮಿಸ್ ಇಂಡಿಯಾ ಸ್ಪರ್ಧಿ, ಡ್ರೀಮ್ ಗರ್ಲ್ಸ್‌ನಂತೆ ವೇಷತೊಟ್ಟ ಮಕ್ಕಳಿಂದ ನಡೆದ ನೃತ್ಯ ಎಲ್ಲರ ಗಮನ ಸೆಳೆಯಿತು. ನಗರಸಭೆ ಸದಸ್ಯರಾದ ಪ್ರಶಾಂತ್ ಹರಿಕಂತ್ರ, ಛಾಯಾ ಜಾವಕರ್, ಯುವಕ ಸಂಘದ ಸಾಯಿನಾಥ್ ಗೌಡ, ವಿನಾಯಕ ಹರಿಕಂತ್ರ ಉಪಸ್ಥಿತರಿದ್ದರು.

ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು. ಭವಿಷ್ಯದ ಪ್ರಜೆಗಳಾಗಲಿರುವ ಇಂದಿನ ಮಕ್ಕಳನ್ನು ಸುಶಿಕ್ಷಿರತನ್ನಾಗಿಸುವುದರ ಜೊತೆಗೆ ಭವಿಷ್ಯದ ಆಸ್ತಿಗಳಾಗಿಸುವಂತೆ ಈಗಿಂದಲೆ ರೂಪಿಸಬೇಕಾದ ಗುರುತರ ಜವಾಬ್ದಾರಿ ಶಿಕ್ಷಕರ ಜೊತೆಗೆ ಪಾಲಕರ ಮೇಲಿದೆ ಎಂದು ನಗರದ ಸಹೇಲಿ ಟ್ರಸ್ಟ್ ಅಧ್ಯಕ್ಷೆ ಮೀನಾಕ್ಷಿ ಕನ್ಯಾಡಿ ಹೇಳಿದರು.
ಅವರು ಮಂಗಳವಾರ ನಗರದ ಕೇರವಾಡ ಸರಕಾರಿ ಕನ್ನಡ ಶಾಲೆಯಲ್ಲಿ ಸಹೇಲಿ ಟ್ರಸ್ಟ್ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮಕ್ಕಳಿಗೆ ಆಟ-ಪಾಠದ ಜೊತೆಗೆ ನೈತಿಕ ಶಿಕ್ಷಣದ ಅಗತ್ಯತೆ ಇದೆ. ಮಕ್ಕಳನ್ನು ಶೈಕ್ಷಣಿಕವಾಗಿ ಸುಧಾರಿಸುವುದರ ಜೊತೆಗೆ ಸಾಂಸ್ಕøತಿಕವಾಗಿ, ಸಾಮಾಜಿಕವಾಗಿಯೂ ಬಲಿಷ್ಟರನ್ನಾಗಿಸಬೇಕು. ಸಂಸ್ಕಾರ, ಸನ್ನಡತೆಗಳನ್ನು ಮಕ್ಕಳು ಎಳೆಯ ಪ್ರಾಯದಲ್ಲೆ ಮೈಗೂಡಿಸಿಕೊಳ್ಳುವುದರ ಮೂಲಕ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ಮುನ್ನುಡಿ ಬರೆಯಬೇಕೆಂದು ಮೀನಾಕ್ಷಿ ಕನ್ಯಾಡಿ ಕರೆ ನೀಡಿದರು.