Home Local ದೇವಸ್ಥಾನ ಸಮೀತಿಗೆ ಆಯ್ಕೆ

ದೇವಸ್ಥಾನ ಸಮೀತಿಗೆ ಆಯ್ಕೆ

SHARE

ಕುಮಟಾ : ತಾಲೂಕಿನ ಬಾಡದ ಶ್ರೀ ಕಾಂಚಿಕಾಂಬಾ ಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮೀತಿ ಅಧ್ಯಕ್ಷರಾಗಿ ಬಾಡದ ಜಿ.ಎಸ್ ನಾಯ್ಕ್ ಆಯ್ಕೆ ಯಾಗಿದ್ದಾರೆ.

ಕಳೆದ ಮೂರು ದಿನದ ಹಿಂದೆ ಒಂಬತ್ತು ಜನರನ್ನು ಸದಸ್ಯರನ್ನಾಗಿ ಮೂರು ವರ್ಷದ ಅವಧಿಯವರೆಗೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್ ನೇಮಕ ಮಾಡಿ ಆದೇಶ ಹೊರಡಿಸಿದ್ದರು. ಆ ಒಂಬತ್ತು ಜನ ಸದಸ್ಯರು ಇಂದು ತಾಲೂಕು ದಂಡಾಧಿಕಾರಿಗಳ ಸಮ್ಮುಖದಲ್ಲಿ ಜನಾರ್ಧನ ಶಿವಪ್ಪ ನಾಯ್ ಅವರನ್ನು ಸಮೀತಿಯ ಅಧ್ಯಕ್ಷರಾಗಿ ಒಮ್ಮತದಿಂದ ಆಯ್ಕೆ ಮಾಡಿದ್ದಾರೆ.

ಹಾಲಿ ದೇವಸ್ಥಾಾನದ ಅರ್ಚಕ ಉಮೇಶ ಭಟ್, ಪ್ರವೀಣಾ ದತ್ತಾ ಪಾತರಪೇಕರ, ಸೋಮಯ್ಯ ಜಟ್ಟಿ ಹಳ್ಳೇರ, ಪರಮೇಶ್ವರ ಬೀರಪ್ಪ ನಾಯ್ಕ, ಈಶ್ವರ ಶಿವಪ್ಪ ನಾಯ್ಕ, ಜಯಂತ ಕೃಷ್ಣಪ್ಪ ನಾಯ್ಕ, ರಮಾಕಾಂತ ನರಸಿಂಹ ಹೆಗಡೆ ಹಾಗೂ ಪ್ರಶಾಂತ ಶೆಟ್ಟಿ ಅವರನ್ನು ದೇವಸ್ಥಾನದ ಆಡಳಿತ ಮಂಡಳಿಗೆ ಜಿಲ್ಲಾಧಿಕಾರಿಗಳು ಆಯ್ಕೆ ಮಾಡಿದ್ದಾರೆ.