Home Local ತಾಜ್ ಮಹಲ್ ಸಹ ಶಿವನ ದೇವಸ್ಥಾನವಾಗಿದೆ : ಕೇಂದ್ರ ಸಚಿವ ಅನಂತಕುಮಾರ ಹೆಗಡೆ

ತಾಜ್ ಮಹಲ್ ಸಹ ಶಿವನ ದೇವಸ್ಥಾನವಾಗಿದೆ : ಕೇಂದ್ರ ಸಚಿವ ಅನಂತಕುಮಾರ ಹೆಗಡೆ

SHARE

ಶಿರಸಿ: ಕುತುಬ್ ಮಿನಾರ್ 27 ನಕ್ಷತ್ರಗಳನ್ನು ಒಳಗೊಂಡ ಹಿಂದೂ ಹಾಗೂ ಜೈನ ದೇವಾಲಯವಾಗಿದೆ. ಇದನ್ನು ಕುತುಬ್ಧಿನ್ ಐ ಬಕ್ ನಿರ್ಮಾಣ ಮಾಡಿಲ್ಲ. ಅದರಂತೇ ತಾಜ್ ಮಹಲ್ ಸಹ ಶಿವನ ದೇವಸ್ಥಾನವಾಗಿದೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದರು. ನಗರದ ವಿಕಾಸ ಆಶ್ರಮ ಮೈದಾನದಲ್ಲಿ ನಡೆದ ಪರಿವರ್ತನಾ ಯಾತ್ರೆಯ ಸಭೆಯಲ್ಲಿ ಮಾತನಾಡಿದ ಅವರು, ಕುತುಬ್ ಮೀನಾರ್ ಹಿಂದೂ ಹಾಗು ಜೈನ ದೇವಾಲಯವೆಂದು ಪ್ರಾಚ್ಯವಸ್ತು ಇಲಾಖೆಯವರೇ ಹೇಳಿದ್ದಾರೆ. ತಾಜ್ ಮಹಲ್ ಮಹಾದೇವನ ಆಸ್ಥಾನವಾಗಿತ್ತು ಎಂದರು.

ಇನ್ನು ಟಿಪ್ಪು ಜಯಂತಿ ಪ್ರಸ್ತಾಪ ಮಾಡಿದ ಕೇಂದ್ರ ಸಚಿವರು ಟಿಪ್ಪುವು ಒಬ್ಬ ಇಲಿ. ಅವನ ಬಾಲವನ್ನು ಹಿಡಿದುಕೊಂಡು ಓಡಾಡುವುದು ಮುಖ್ಯಮಂತ್ರಿ. ಅವನ ಜಯಂತಿಯನ್ನು ಆಚರಿಸುವ ಸರ್ಕಾರವನ್ನು ಬದಲಿಸದಿದ್ದರೆ ಮುಂದೆ ಒಸಮಾ ಬಿನ್ ಲಾಡೆನ್, ಕಸಬ್ , ಹೈದರಾಲಿಯ ಜಯಂತಿಯನ್ನೂ ಸಹ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಇದು ಕಾಂಗ್ರೆಸ್ ಪಕ್ಷವನ್ನು ಇತಿಹಾಸಕ್ಕೆ ಸೇರಿಸುವ ಸರಿಯಾದ ಸಂದರ್ಭವಾಗಿದೆ. ಇಲ್ಲಿನ ಕಾಂಗ್ರೆಸ್ ಹೇಗಿದೆಯೆಂದರೆ ಅತ್ಯಾಚಾರಿ ಉಸ್ತುವಾರಿ ಲೂಟಿಕೋರ ಮುಖ್ಯಮಂತ್ರಿ ಎನ್ನುವ ರೀತಿಯಲ್ಲಿದೆ. ಇಲ್ಲಿ ಯಜಮಾನ ಬ್ರಹ್ಮ ರಾಕ್ಷಸ ಉಳಿದವು ದೆವ್ವ ಭೂತಗಳಾಗಿದೆ. ಆದ್ದರಿಂದ ಕರ್ನಾಟಕದಲ್ಲಿ ಸಮರ್ಥ ಆಡಳಿತ ನೀಡಬೇಕು. ಅದಕ್ಕಾಗಿ ಬಿಜೆಪಿ ಅಧಿಕಾರಕ್ಕೆ ಬರಬೇಕು. ಉತ್ತರ ಕನ್ನಡದಲ್ಲಿ ಈ ಬಾರಿ ಹೊಸ ಇತಿಹಾಸವನ್ನು ರಚನೆ ಆಗುತ್ತದೆ. 6 ಕ್ಕೆ 6 ಕ್ಷೇತ್ರವನ್ನು ಬಿಜೆಪಿ ಗೆಲ್ಲುತ್ತದೆ ಎಂದರು.

ಯಾತ್ರೆ ಉದ್ಘಾಟಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಾಂಗ್ರೆಸ್ ಮುಕ್ತ ಭಾರತ ಆಗಲು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಆಡಳಿತದಿಂದ ತೊಲಗಿಸಬೇಕು. ಇಲ್ಲಿ ಬೂತ್ ಗಳನ್ನು ಬಲಪಡಿಸಿ,ಗೆದ್ದು ಪ್ರಧಾನಿ ನರೇಂದ್ರ ಮೋದಿಯವರ ಕೈಯನ್ನು ಬಲಪಡಿಸೋಣ ಎಂದರು. ಈ ಸಂದರ್ಭದಲ್ಲಿ ಶಿರಸಿ ಸಿದ್ದಾಪುರ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದೆ ಶೋಭಾ ಕರಂದ್ಲಾಜೆ, ರಾಜ್ಯ ಮುಖಂಡರಾದ ಭಾರತಿ ಶೆಟ್ಟಿ, ರವಿಕುಮಾರ, ಕುಮಾರ ಬಂಗಾರಪ್ಪ ವಿ.ಎಸ್.ಪಾಟೀಲ್, ಹರತಾಳ್ ಹಾಲಪ್ಪ, ಸುಮನಾ ಕಾಮತ್, ಎಲ್.ಟಿ.ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.