Home Local ಆದ್ಯತೆಗಳಿಗನುಗುಣವಾಗಿ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯ; ಶಾಸಕ ಶಿವರಾಮ ಹೆಬ್ಬಾರ

ಆದ್ಯತೆಗಳಿಗನುಗುಣವಾಗಿ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯ; ಶಾಸಕ ಶಿವರಾಮ ಹೆಬ್ಬಾರ

SHARE

ಯಲ್ಲಾಪುರ: ಜಿಲ್ಲೆಯಲ್ಲಿ ಅಶ್ಯಕವಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಶಾಸಕನಾದ ನನ್ನ ಹೊಣೆಯಾಗಿದ್ದು, ಕಾಲಕಾಲಕ್ಕೆ ಹಾಗೂ ಆದ್ಯತೆಗಳಿಗನುಗುಣವಾಗಿ ಕರ್ತವ್ಯವನ್ನು ನಿರ್ವಹಣೆ ಮಾಡುತ್ತೇನೆ ಎಂದು ಶಾಸಕ ಶಿವರಾಮ ಹೆಬ್ಬಾರ ಜನರಿಗೆ ಭರವಸೆ ನೀಡಿದರು

ಕಾರವಾರ ಜಿಲ್ಲೆಯ ಹೊನ್ನಾವರ ತಾಲೂಕಿನ ಉಮ್ಮಚಗಿಯಲ್ಲಿ ಪಶು ಚಿಕಿತ್ಸಾಲಯ ಕಟ್ಟಡದ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿರುವ ಪಶುಸಂಗೋಪನೆಗೆ ಇಲಾಖೆ ಸರ್ಕಾರ ಆದ್ಯತೆ ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಪಶುಭಾಗ್ಯ ಯೋಜನೆಯನ್ನು ಜಾರಿಗೊಳಿಸಿದೆ ಎಂದರು.

ಕಾರ್ಯಕ್ರಮದಲ್ಲಿ ತಾ.ಪಂ ಅಧ್ಯಕ್ಷೆ ಭವ್ಯಾ ಶೆಟ್ಟಿ, ಗ್ರಾ.ಪಂ ಅಧ್ಯಕ್ಷ ಗ.ರಾ.ಭಟ್ಟ, ಪ್ರಮುಖರಾದ ಎಂ.ಆರ್.ಹೆಗಡೆ, ಎ.ಪಿಎಂ.ಸಿ ಅಧ್ಯಕ್ಷ ಎಂ.ಜಿ.ಭಟ್ಟ, ಜಿ.ಪಂ ಮಾಜಿ ಸದಸ್ಯೆ ವರದಾ ಹೆಗಡೆ, ತಾ.ಪಂ ಸದಸ್ಯೆ ರಾಧಾ ಹೆಗಡೆ, ಗ್ರಾ.ಪಂ ಸದಸ್ಯರಾದ ರೇಣುಕಾ ನಾಯ್ಕ, ಮಹಾಲಕ್ಷ್ಮೀ ನಾಯ್ಕ, ಅನಸೂಯಾ ಹೆಗಡೆ, ತಿಮ್ಮವ್ವ ಬಸಾಪುರ, ಗ್ರಾ.ಪಂ ಮಾಜಿ ಅಧ್ಯಕ್ಷ ಕುಪ್ಪಯ್ಯ ಶೇರೂಗಾರ ಉಪಸ್ಥಿತರಿದ್ದರು.