Home Local ನಾವು ಅಧಿಕಾರಕ್ಕೆ ಬಂದ್ರೆ ತಕ್ಷಣ ಕೆಪಿಎಂಇ ಕಾಯ್ದೆ ರದ್ದು; ಯಡಿಯೂರಪ್ಪ

ನಾವು ಅಧಿಕಾರಕ್ಕೆ ಬಂದ್ರೆ ತಕ್ಷಣ ಕೆಪಿಎಂಇ ಕಾಯ್ದೆ ರದ್ದು; ಯಡಿಯೂರಪ್ಪ

SHARE

ಶಿರಸಿ: ನಾವು ಅಧಿಕಾರಕ್ಕೆ ಬಂದ ತಕ್ಷಣ ವಿವಾದಿತ ಕೆಪಿಎಂಇ ಕಾಯ್ದೆಯನ್ನು ಹಿಂಪಡೆಯುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ವೈದ್ಯರಿಗೆ ಭರವಸೆ ನೀಡಿದ್ದಾರೆ.

ಕಾರವಾರ ಜಿಲ್ಲೆಯ ಮುಂಡಗೋಡು ಪಟ್ಟಣದಲ್ಲಿ ಬಿಜೆಪಿ ಪರಿವರ್ತನಾ ಯಾತ್ರಯಲ್ಲಿ ಮಾತನಾಡಿದ ಅವರು ವೈದ್ಯರ ಮುಷ್ಕರ ಹಾಗೂ ಸರ್ಕಾರದ ಪಟ್ಟಿನಿಂದಾಗಿ ರಾಜ್ಯದಲ್ಲಿ ಸಾಕಷ್ಟು ನೋವುಗಳು ಸಂಭವಿಸಿದೆ. ಸರ್ಕಾರ ಒಣ ಪ್ರತಿಷ್ಟೆಯನ್ನು ಬಿಟ್ಟು, ವೈದ್ಯರ ಮೇಲೆ ಪ್ರಹಾರ ಮಾಡುವುದನ್ನ ನಿಲ್ಲಿಸಬೇಕಾಗಿದೆ. ಇನ್ನು ಕಾಯ್ದೆ ಬಗ್ಗೆಯೆ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರ ನಡುವೆ ಗೊಂದಲವಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.

ವೈದ್ಯರ ಮುಷ್ಕರದಿಂದಾಗಿ ರಾಜ್ಯದಲ್ಲಿ ಸಾಕಷ್ಟು ಸಾವು ನೋವು ಸಂಭವಿಸಿದೆ, ಇದನ್ನು ಸರ್ಕಾರ ಪರಿಹರಿಸುವ ಕಾರ್ಯ ಮಾಡಬೇಕು. ಈ ಬಗ್ಗೆ ಶೀಘ್ರದಲ್ಲಿ ಸರ್ಕಾರ ಒಂದು ನಿಲುವು ತಾಳೆದು ಸಮಸ್ಯೆಗೆ ಅಂತ್ಯ ಹಾಡಬೇಕು ಎಂದು ಆಗ್ರಹಿಸಿದರು.