Home Local ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಂಡು ವಾಪಸ್ ತೆರಳುವಾಗ ಬೈಕ್ ನಿಂದ ಸ್ಕಿಡ್ ಆಗಿ ಸ್ಥಳದಲ್ಲೇ ಸಾವು

ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಂಡು ವಾಪಸ್ ತೆರಳುವಾಗ ಬೈಕ್ ನಿಂದ ಸ್ಕಿಡ್ ಆಗಿ ಸ್ಥಳದಲ್ಲೇ ಸಾವು

SHARE

ಕಾರವಾರ: ಹಳಿಯಾಳದ ಶಿವಾಜಿ ಮೈದಾನದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಂಡು ವಾಪಸ್ ತೆರಳುವಾಗ ಇಬ್ಬರು ಬಿಜೆಪಿ ಕಾರ್ಯಕರ್ತರು ಬೈಕ್ ನಿಂದ ಸ್ಕಿಡ್ ಆಗಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಹಳಿಯಾಳ ತಾಲೂಕಿನ ಕೆಸರೊಳ್ಳಿ ಗ್ರಾಮದ ಬಳಿ ಘಟನೆ ನಡೆದಿದೆ. ದಾಂಡೇಲಿಯ ಮಿರಾಶಿ ಗಲ್ಲಿಯ ಸಂಬಾಜಿ ಬಲರಾಮ್ ಸಾಂಬ್ರೇಕರ್ (32) ಹಾಗೂ ಜೋಯಿಡಾ ತಾಲೂಕಿನ ಪಠೋಳಿ ಗ್ರಾಮದ ಈಡು ಮಾವುಳು ಗೌಡ (32) ಮೃತಪಟ್ಟವರು ಎಂದು ಪೊಲೀಸರು ತಿಳಿಸಿದ್ದಾರೆ.