Home Local ಕುಮಟಾದಲ್ಲಿ ಶಿಕ್ಷಕರಿಗಾಗಿ ಸಹಪಠ್ಯಚಟುವಟಿಕೆ ಸ್ಪರ್ಧೆ.

ಕುಮಟಾದಲ್ಲಿ ಶಿಕ್ಷಕರಿಗಾಗಿ ಸಹಪಠ್ಯಚಟುವಟಿಕೆ ಸ್ಪರ್ಧೆ.

SHARE

ಕುಮಟಾ: ತಾಲೂಕಿನ ಶಿಕ್ಷಕರ ಸಹಪಠ್ಯ ಚಟುವಟಿಕೆ ಸ್ಪರ್ಧೆ ಇಂದು ಗಿಬ್ ಪ್ರೌಢ ಶಾಲೆಯ ರಾಜೇಂದ್ರ ಪ್ರಸಾದ ಸಭಾಭವನದಲ್ಲಿ ಸಂಪನ್ನಗೊಂಡಿತು. ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟಿಸಿ ಮಾತನಾಡಿದ ಪ್ರಭಾರಿ ಕ್ಷೇತ್ರಶಿಕ್ಷಣಾಧಿಕಾರಿ ಶ್ರೀನಿವಾಸ ನಾಯಕರವರು “ಸ್ಪರ್ಧಾತ್ಮಕ ಯುಗದಲ್ಲಿ ನಾವಿದ್ದೇವೆ ಎಲ್ಲರೂ ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು ಅದಕ್ಕೆ ಈ ಕಾರ್ಯಕ್ರಮ ಪೂರಕವಾಗಲಿ ಎಂದರು.

ಶ್ರೀ ರಮೇಶ ಉಪಾಧ್ಯಾಯ ರವರು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕುಮಟಾ ತಾಲೂಕಾ ಅಧ್ಯಕ್ಷ ರವೀಂದ್ರಭಟ್ಟ ಸೂರಿ, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಆನಂದು ಗಾಂವಕರ್, ಶಾಸ್ತ್ರಿ , ವಿಷ್ಣು ನಾಯ್ಕ , ಗೌಡರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಶಿಕ್ಷಣ ಸಂಯೋಜಕರಾದ ಪಿ.ಎಮ್.ಮುಕ್ರಿ ಸ್ವಾಗತಿಸಿದರು, ಎನ್,ಆರ್,ನಾಯ್ಕ ವಂದಿಸಿದರು, ಕಿರಣ ನಾಯ್ಕ ನಿರೂಪಿಸಿದರು.