Home Local ಕಾರವಾರ ಕದಂಬ ನೌಕಾನೆಲೆಗೆ ಶಾಸಕರ ಭೇಟಿ!

ಕಾರವಾರ ಕದಂಬ ನೌಕಾನೆಲೆಗೆ ಶಾಸಕರ ಭೇಟಿ!

SHARE

ಕಾರವಾರ:ಕದಂಬ ನೌಕಾ ನೆಲೆಯ ವೀಕ್ಷಣೆಗೆ ಒಟ್ಟೂ 157 ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಒಟ್ಟೂ ನಾಲ್ಕು ಐರಾವತ ಬಸ್ ನಲ್ಲಿ ಒಳ ಪ್ರವೇಶಿಸಿದ್ದಾರೆ.
ಸ್ಪೀಕರ್ ಕೆ.ಬಿ.ಕೋಳಿವಾಡ, ಸಚಿವ ಆಂಜನೇಯ, ಎಂಎಲ್ ಸಿಗಳಾದ ಬಸವರಾಜ ಹೊರಟ್ಟಿ, ಎಸ್.ವಿ.ಸಂಕನೂರು, ಶಾಸಕರಾದ ಸತೀಶ ಸೈಲ್, ಶಿವರಾಂ ಹೆಬ್ಬಾರ ಮುಂತಾದವರಿದ್ದರು.

ಬೆಳಗಾವಿಯ ಅಧಿವೇಶನದಲ್ಲಿ ಭಾಗವಹಿಸಿದ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರನ್ನು ಪ್ರಧಾನಿ ನರೇಂದ್ರ ಮೋದಿಯವರು ಇಲ್ಲಿನ ಕದಂಬ ನೌಕಾನೆಲೆಯ ವೀಕ್ಷಣೆಗೆ ತೆರಳುವಂತೆ ನೀಡಿದ್ದ ಆಮಂತ್ರಣದ ಮೇರೆಗೆ ಈ ಪ್ರವಾಸ ಆಯೋಜಿಸಲಾಗಿದೆ.