Home Local ಚಂದಾವರದ ಶ್ರೀ ಹನುಮಂತ ದೇವರ ಕಾರ್ತಿಕೋತ್ಸವ ಪೂಜೆ ಸಂಪನ್ನ.

ಚಂದಾವರದ ಶ್ರೀ ಹನುಮಂತ ದೇವರ ಕಾರ್ತಿಕೋತ್ಸವ ಪೂಜೆ ಸಂಪನ್ನ.

SHARE

ಹೊನ್ನಾವರ: ಕಾರ್ತಿಕ ಅಮವಾಸ್ಯೆಯ ಪ್ರಯುಕ್ತ ತಾಲೂಕಿನ ಚಂದಾವರ ಸೀಮೆಯ ಪ್ರಸಿದ್ಧ ಶ್ರೀ ಹನುಮಂತ ದೇವರ ಕಾರ್ತಿಕೋತ್ಸವ ಪೂಜೆ ಹಾಗೂ ವನಭೋಜನ ಕಾರ್ಯಕ್ರಮ ಸಾವಿರಾರು ಭಕ್ತರ ನಡುವೆ ವಿಜೃಂಭಣೆಯಿಂದ ಜರುಗಿತು. ಪ್ರತೀ ವರ್ಷದಂತೆ ನಡೆಯುವ ಕಾರ್ತಿಕೋತ್ಸವ ಶ್ರೀ ಮಾರುತಿ ಮಿತ್ರ ಮಂಡಳಿ ಚಂದಾವರ ಹಾಗೂ ಜೈ ಹನುಮಾನ ಮಿತ್ರ ಮಂಡಳಿ ವಡೆಗೇರಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯಿತು. ಬೆಳಿಗ್ಗೆಯಿಂದ ಶ್ರೀ ದೇವರ ಸನ್ನಿಧಿಯಲ್ಲಿ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದವು.

ಮಧ್ಯಾಹ್ನ ಸಂಪ್ರದಾಯದಂತೆ ಶ್ರೀ ದೇವರ ಪಲ್ಲಕಿಯು ಹತ್ತಿರದ ಚಂದ್ರಪ್ರಭಾ ನದಿ ತೀರಕ್ಕೆ ತೆರಳಿದ ನಂತರ ವನಭೋಜನ ಮಂಟಪದಲ್ಲಿ ಶ್ರೀ ದೇವರನ್ನು ಅಲಂಕರಿಸಿ ಭಕ್ತಾದಿಗಳಿಂದ ಹಣ್ಣು, ಕಾಯಿಯ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ವನಭೋಜನ ಕಾರ್ಯಕ್ರಮಕ್ಕೆ ಹಳ್ಳಿ-ಹಳ್ಳಿಗಳಿಂದ ಸಾವಿರಾರು ಭಕ್ತರು ಆಗಮಿಸಿ ಶ್ರೀ ದೇವರ ಪ್ರಸಾದ ಸ್ವೀಕರಿಸಿದರು.