Home Important ಸತತ 17 ವರ್ಷಗಳ ನಂತರ ಭಾರತಕ್ಕೆ ವಿಶ್ವ ಸುಂದರಿ ಗರಿ!

ಸತತ 17 ವರ್ಷಗಳ ನಂತರ ಭಾರತಕ್ಕೆ ವಿಶ್ವ ಸುಂದರಿ ಗರಿ!

SHARE

ಸನ್ಯಾ: ಸತತ 17 ವರ್ಷಗಳ ನಂತರ ಭಾರತಕ್ಕೆ ವಿಶ್ವ ಸುಂದರಿ ಗರಿ ಮೂಡಿದ್ದು, ಹರಿಯಾಣದ ಮಾನುಷಿ ಛಿಲ್ಲಾರ್ ಗೆ ಈ ಬಾರಿ ವಿಶ್ವ ಸುಂದರಿ ಕಿರೀಟ ಒಲಿದಿದೆ.
ಇಂದು ನಡೆದ ಅಂತಿಮ ಸುತ್ತಿನಲ್ಲಿ ಪಾಲ್ಗೊಂಡಿದ್ದ 20 ವರ್ಷದ ಮನುಷಿ ವಿಶ್ವದ ಪ್ರಮುಖ ರಾಷ್ಟ್ರಗಳ ಸುಂದರಿಯರೊಂದಿಗೆ ಕಠಿಣ ಸ್ಪರ್ಧೆ ನೀಡಿ, ಅಂತಿಮ ಗೆಲುವು ಸಾಧಿಸಿದ್ದಾರೆ.
ಚೀನಾದ ಸನ್ಯಾ ನಗರದಲ್ಲಿ ನಡೆದ ಸ್ಪರ್ಧೆಯಲ್ಲಿ ವಿಶ್ವದ ಸುಮಾರು 108 ಸುಂದರಿಯರನ್ನು ಹಿಂದಿಕ್ಕಿದ ಮನುಷಿಗೆ 2016ರ ವಿಶ್ವ ಸುಂದರಿ ಸ್ಟಿಫೇನಿ ಡೆಲ್ ವೆಲ್ಲೆ ಕಿರೀಟ ತೊಡಿಸಿದರು.

1966 ರಲ್ಲಿ ಭಾರತದ ರೀಟಾ ಫರಿಯಾ ವಿಶ್ವ ಸುಂದರಿಯ ಪಟ್ಟಕ್ಕೇರುವ ಮೂಲಕ ವಿಶ್ವಸುಂದರಿಯಾದ ಮೊದಲ ಏಷ್ಯಾದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದಾದ 3 ದಶಕಗಳ ನಂತರ ಐಶ್ವರ್ಯಾ ರೈ 1994 ರಲ್ಲಿ ವಿಶ್ವಸುಂದರಿ ಪಟ್ಟಕ್ಕೇರಿದ್ದರು. ಬಳಿಕ 2000 ರಲ್ಲಿ ಪ್ರಿಯಾಂಕ ಚೋಪ್ರಾ ವಿಶ್ವಸುಂದರಿಯಾಗಿ ಆಯ್ಕೆಯಾಗಿದ್ದರು. ಈಗ 17 ವರ್ಷಗಳ ನಂತರ ಭಾರತದ ಯುವತಿ ಮಾನುಷಿ ಛಿಲ್ಲಾರ್ ವಿಶ್ವಸುಂದರಿಯಾಗಿ ಆಯ್ಕೆಗೊಂಡಿದ್ದಾರೆ.