Home Local ಪರಿವರ್ತನಾ ಯಾತ್ರೆ ನಿಷ್ಪ್ರಯೋಜಕ, ಜಿಲ್ಲೆ ಕಾಂಗ್ರೆಸ್ ನ ಭದ್ರ ಕೋಟೆ: ಭೀಮಣ್ಣ ನಾಯ್ಕ.

ಪರಿವರ್ತನಾ ಯಾತ್ರೆ ನಿಷ್ಪ್ರಯೋಜಕ, ಜಿಲ್ಲೆ ಕಾಂಗ್ರೆಸ್ ನ ಭದ್ರ ಕೋಟೆ: ಭೀಮಣ್ಣ ನಾಯ್ಕ.

SHARE

ನಮ್ಮ ಜಿಲ್ಲೆಯಲ್ಲಿ ಯಾವ ಪರಿವರ್ತನ ಯಾತ್ರೆಯು ಪ್ರಯೋಜನ ಆಗುವುದಿಲ್ಲ ನಮ್ಮ ಜಿಲ್ಲೆ ಕಾಂಗ್ರೆಸ್‌ನ ಭದ್ರಕೋಟೆ ಎಂದು ಭೀಮಣ್ಣ ನಾಯ್ಕ ಹೇಳಿದರು.

ತಾಲ್ಲೂಕಿನ ಬ್ಲಾಕ್ ಕಾಂಗ್ರೆಸ್ ನೂತನ ಕಾರ್ಯಾಲಯ ಉದ್ಘಾಟನಾ ಕಾರ್ಯಕ್ರಮ ಮತ್ತು ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ನೂರನೇ ಜನ್ಮಶತಾಬ್ದಿಯ ಅಂಗವಾಗಿ ದೀಪ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಬಗ್ಗೆ ಮಾತನಾಡುತ್ತಾ, ಅವರು ನಮ್ಮ ದೇಶದ ಜನತೆಗೆ ಅನ್ನವನ್ನು ನೀಡಿದ್ದಾರೆ ಅಲ್ಲದೆ ಉತ್ತಮವಾದ ಯೋಜನೆಗಳನ್ನು ತಂದಿದ್ದಾರೆ ಅಂತಹ ನಾಯಕತ್ವದ ಗುಣವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದರು.

ನಂತರ ಬಿಜೆಪಿಯವರ ಪರಿವರ್ತನಾ ಯಾತ್ರೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು ನಮ್ಮ ಜಿಲ್ಲೆಯಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆಯಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ನಮ್ಮ ಜಿಲ್ಲೆ ಕಾಂಗ್ರೆಸನ ಭದ್ರಕೋಟೆಯಾಗಿದೆ, ಮೋದಿಯಾಗಲೀ,ಅಮೀತ್ ಷಾ ಆಗಲಿ ಯಾರು ಬಂದರೂ ನಮ್ಮ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಲ್ಲಾಡಿಸಲು ಸಾಧ್ಯವಿಲ್ಲ ಎಂದರು.

ಈ ಕಾರ್ಯಕ್ರಮದಲ್ಲಿ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶಾರದಾ ಮೋಹನ ಶೆಟ್ಟಿ ಕೂಡ ಭಾಗಿಯಾಗಿದ್ರು.