Home Photo news ಶಿರಸಿಯಲ್ಲಿ ಸರಣಿ ಅಪಘಾತ; 29 ಜನರಿಗೆ ಗಾಯ

ಶಿರಸಿಯಲ್ಲಿ ಸರಣಿ ಅಪಘಾತ; 29 ಜನರಿಗೆ ಗಾಯ

SHARE

ಶಿರಸಿ: ಯಲ್ಲಾಪೂರ ಪಟ್ಟಣದ ಬಿಸಗೋಡ ಕ್ರಾಸ್ ಬಳಿ ಸರಣಿ ಅಪಘಾತ ನಡೆದ ಪರಿಣಾಮ 29 ಜನರು ಗಾಯಗೊಂಡಿದ್ದಾರೆ. ಭಾನುವಾರ ಬೆಳಿಗ್ಗೆ ಯಲ್ಲಾಪೂರ ಮಾರ್ಗವಾಗಿ ಹೊರಟಿದ್ದ ಲಾರಿಗೆ ಡಿಕ್ಕಿ ಎಸ್.ಆರ್.ಎಸ್ ಬಸ್ ಲಾರಿಗೆ ಡಿಕ್ಕಿ ಹೊಡೆದಿದೆ. ಬಸ್ ಡಿಕ್ಕಿ ಹೊಡೆದ ಕೆಲವೇ ಕ್ಷಣಗಳಲ್ಲಿ ಜಖಂಗೊಂಡ ಲಾರಿಗೆ ಮತ್ತೊಂದು ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಎರಡೂ ಲಾರಿಗಳ ಚಾಲಕರು, ಕ್ಲೀನರ್ ಹಾಗೂ ಬಸ್ ಒಳಗಿದ್ದ 26 ಜನರು ಗಾಯಗೊಂಡಿದ್ದಾರೆ. ಆದರೆ, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಕುರಿತು ಯಲ್ಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.