Home Local ಪ್ರಕೃತಿಯನ್ನು ಅನುಸರಿಸಿ ರಚನೆಯಾಗುವುದು ಧಾರ್ಮಿಕ ಪಂಚಾಂಗ : ರಾಘವೇಶ್ವರ ಶ್ರೀ

ಪ್ರಕೃತಿಯನ್ನು ಅನುಸರಿಸಿ ರಚನೆಯಾಗುವುದು ಧಾರ್ಮಿಕ ಪಂಚಾಂಗ : ರಾಘವೇಶ್ವರ ಶ್ರೀ

SHARE

ಹೊನ್ನಾವರ : ಪ್ರಕೃತಿಯನ್ನು ಅನುಸರಿಸಿ ರಚನೆಯಾಗುವುದು ಧಾರ್ಮಿಕ ಪಂಚಾಂಗ ಎಂದು ಶ್ರೀ ರಾಮಚಂದ್ರಾಪುರಮಠದ ರಾಘವೇಶ್ವರ ಶ್ರೀಗಳು ಹೇಳಿದರು. ಕಡತೋಕಾದ ಹೆಗಡೆಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ವಿಲಂಭ ನಾಮ ಸಂವತ್ಸರದ ಪಂಚಾಂಗ ಲೋಕಾರ್ಪಣೆಗೊಳಿಸಿ ಅವರು ಆಶೀರ್ವದಿಸಿದರು.

ಹಳದೀಪುರ ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಹೆಗಡೆ ಮನೆ ಕುಟುಂಬದ ಶ್ರೀ ಶಿವಾನಂದ ಹೆಗಡೆ ಹಾಗೂ ದಂಪತಿಗಳು ಗುರುಭಿಕ್ಷಾ ಸೇವೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀಗಳು ರಾಜಕಾರಣದಲ್ಲಿಯೂ ಒಳ್ಳೆಯವರಿದ್ದಾರೆ. ಒಳ್ಳೆಯ ರಾಜಕಾರಣಿ ಸಮಾಜಕ್ಕಾಗಿ ಕೆಲಸ ಮಾಡುತ್ತಾನೆ. ಶಿವಾನಂದ ಹೆಗಡೆಯವರು ರಾಜಕಾರಣಿಯಾಗಿರುವುದಷ್ಟೇ ಅಲ್ಲ ಸಮಾಜದ ಸೇವಕನಾಗಿ ಎಲ್ಲ ಸಮಾಜದ ಪ್ರತಿನಿಧಿಯಾಗಿ ಇಲ್ಲಿ ಇರುವುದು ಹೆಮ್ಮೆಯ ವಿಚಾರ ಎಂಬುದಾಗಿ ತುಂಬು ಮನದಿಂದ ಹರಸಿದರು.

ಗೋ ಸಂಜೀವಿನಿ ಸಮರ್ಪಣೆಯ ಕಾರ್ಯಕ್ರಮಕ್ಕೆ ಇಡಗುಂಜಿ ಮಹಾಗಣಪತಿ ದೇವಾಲಯದ ಧರ್ಮದರ್ಶಿಗಳಾದ ಡಾ. ಜಿ.ಜಿ ಸಭಾಹಿತ ಗೋ ದೀಪ ಪ್ರಜ್ವಲಿಸಿ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ನಾಗರಾಜ ನಾಯಕ ತೊರ್ಕೆ ಗೋ ಸಂಜೀವಿನಿಗೆ ಕಾಣಿಕೆ ಸಮರ್ಪಿಸಿದರು.

ಬಿಜೆಪಿ ಪ್ರಮುಖರು ಮತ್ತು ಮಾಜಿ ಶಾಸಕರಾದ ದಿನಕರ ಶೆಟ್ಟಿಯವರು ಶ್ರೀಗಳೊಂದಿಗೆ ಮಾತನಾಡಿ ಶ್ರೀಗಳಿಂದ ಆಶೀರ್ವಾದ ಪಡೆದರು.

ಬಿಜೆಪಿ ಪ್ರಮುಖರಾದ ಶ್ರೀ ಸುನಿಲ್ ನಾಯ್ಕ ಭಟ್ಕಳ,ಶ್ರೀ ಸೂರಜ ನಾಯ್ಕ ಸೋನಿ ಹಾಗೂ ಇನ್ನಿತರ ಪ್ರಮುಖರು ಶ್ರೀಗಳಿಂದ ಆಶೀರ್ವಾದ ಪಡೆದರು.