Home Local ಶ್ರೀ ದೇವಪ್ಪಜ್ಜ ಸ್ವಾಮಿಗಳಿಗೆ “ಗೋಕರ್ಣ ಗೌರವ”

ಶ್ರೀ ದೇವಪ್ಪಜ್ಜ ಸ್ವಾಮಿಗಳಿಗೆ “ಗೋಕರ್ಣ ಗೌರವ”

SHARE

ಗೋಕರ್ಣ: ಪ. ಪೂ.ಶ್ರೀ ದೇವಪ್ಪಜ್ಜ ಸ್ವಾಮಿಗಳು, ಧರ್ಮಾಧಿಕಾರಿ ಜಮ್ಮು ಕಾಶ್ಮೀರ ವೈಷ್ಣೋದೇವಿ ಮಂದಿರ ಟ್ರಸ್ಟ್ ಹುಬ್ಬಳ್ಳಿ, ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ “ಗೋಕರ್ಣ ಗೌರವ” ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು .

ದೇವಾಲಯದ ಆಡಳಿತಾಧಿಕಾರಿ ಜಿ ಕೆ ಹೆಗಡೆ ಇವರು ದೇವಾಲಯದ ಪರವಾಗಿ ಪೂಜ್ಯರಿಗೆ ಫಲ ಸಮರ್ಪಿಸಿ , ಶಾಲು ಹೊದೆಸಿ, ತಾಮ್ರಪತ್ರ ಸ್ಮರಣಿಕೆ ನೀಡಿ, ಗೌರವ ಸಲ್ಲಿಸಿದರು . ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ವೇ. ಗೋಪಾಲ್ ಶಾಸ್ತ್ರಿ ಕೊಡಗಿ ಪೂಜಾ ಕೈಂಕರ್ಯ ನೆರವೇರಿಸಿದರು