Home Local ಚಿತ್ರೋತ್ಸವ ಸಪ್ತಾಹ:ನಾಳೆ ಕೊನೆಯ ಚಿತ್ರ ಮಾರಿಕೊಂಡವರು

ಚಿತ್ರೋತ್ಸವ ಸಪ್ತಾಹ:ನಾಳೆ ಕೊನೆಯ ಚಿತ್ರ ಮಾರಿಕೊಂಡವರು

SHARE

ಕಾರವಾರ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಿಲ್ಲಾಡಳಿತದ ಸಹಯೋಗದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರ ಮತ್ತು ರಾಜ್ಯಪ್ರಶಸ್ತಿ ವಿಜೇತ ಕನ್ನಡ ಚಿತ್ರಗಳ ಪ್ರದರ್ಶನ ಚಿತ್ರೋತ್ಸವ ಸಪ್ತಾಹದಲ್ಲಿ ಏಳನೇ ಚಿತ್ರ ಮಾರಿಕೊಂಡವರು ನ. 23ರಂದು ಬೆಳಿಗ್ಗೆ 10ಕ್ಕೆ ನಗರದ ಅರ್ಜುನ ಚಿತ್ರ ಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ.

ಯಶಸ್ವಿ ಚಿತ್ರನಿರ್ದೇಶಕ ಶಿವರುದ್ರಯ್ಯ ನಿರ್ದೇಶನದಲ್ಲಿ ಮೂಡಿ ಬಂದಿರುವ ಮಾರಿಕೊಂಡವರು ಚಿತ್ರ ಉತ್ತಮ ಮಾನವೀಯ ಮೌಲ್ಯಗಳನ್ನು ಒಳಗೊಂಡಿರುವ ಚಿತ್ರವಾಗಿದೆ. ಕರ್ನಾಟಕ ಚಲನಚಿತ್ರೋತ್ಸವದಲ್ಲಿ ಹಲವಾರು ಮಗ್ಗುಲಲ್ಲಿ ಪ್ರಶಸ್ತಿಗಳನ್ನು ಪಡೆದಿರುವ ಮಾರಿಕೊಂಡವರು ಚಿತ್ರದ ತಾರಾಗಣದಲ್ಲಿ ಸತ್ಯ, ಸಂಯುಕ್ತ ಬೆಳವಾಡಿ ಪ್ರಮುಖ ಪಾತ್ರದಲ್ಲಿ ಉತ್ತಮವಾಗಿ ಅಭಿನಯಿಸಿದ್ದಾರೆ.

ಚಿತ್ರಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜುನ ಚಿತ್ರ ಮಂದಿರಕ್ಕೆ ಆಗಮಿಸಿ ವೀಕ್ಷಿಸುವಂತೆ ಜಿಲ್ಲಾ ವಾರ್ತಾಧಿಕಾರಿ ಹಿಮಂತರಾಜು ಜಿ. ಕೋರಿದ್ದಾರೆ.