Home Local ಕುಮಟಾ ವೈಭವಕ್ಕೆ ಸಿದ್ಧತೆ ಬಿಡುಗಡೆಯಾಯ್ತು ಆಮಂತ್ರಣ ಪತ್ರಿಕೆ.

ಕುಮಟಾ ವೈಭವಕ್ಕೆ ಸಿದ್ಧತೆ ಬಿಡುಗಡೆಯಾಯ್ತು ಆಮಂತ್ರಣ ಪತ್ರಿಕೆ.

SHARE

ಕುಮಟಾ : ಇದೇ ಬರುವ 29 ರಿಂದ ನವೆಂಬರ್ 3ರವರೆಗೆ ಕುಮಟಾದಲ್ಲಿ ನಡೆಯಲಿರುವ ತಾಂಡವ ಕಲಾನೀಕೇತನ ಬೆಂಗಳೂರು ಹಾಗೂ ಉತ್ಸವ ಸಮತಿ ಕುಮಟಾ ಆಶ್ರಯದಲ್ಲಿ ಕಮಟಾ ವೈಭವ ನಡೆಯಲಿದೆ. ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡುವ ಉದ್ದೇಶದಿಂದ ಕುಮಟಾದ ಖಾಸಗಿ ಹೋಟೆಲೊಂದರಲ್ಲಿ ಕುಮಟಾ ವೈಭವದ ಆಯೋಜಕರು, ಹಾಗೂ ಕಾರ್ಯಕ್ರಮದ ಗೌರವಾಧ್ಯಕ್ಷರಾದ ನಾಗರಾಜ್ ನಾಯಕ ತೊರ್ಕೆ ಸುದ್ದಿ ಗೋಷ್ಠಿ ಹಮ್ಮಿಕೊಂಡಿದ್ರು. ಈ ಸುದ್ದಿಗೊಷ್ಠಿಯಲ್ಲಿ ಐದು ದಿನಗಳ ಕಾಲ ನಡೆಯುವ ಕಾರ್ಯಕ್ರಮಗಳ ಮಾಹಿತಿ ಹೊಂದಿರುವ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಈ ಬಗ್ಗೆ ಮಾತನಾಡಿದ ಕುಮಟಾ ವೈಭವದ ಗೌರವಾಧ್ಯಕ್ಷರಾದ ಬೆಳಕು ಸಂಸ್ಥೆಯ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆ ಮಾತನಾಡಿ ಇದೊಂದು ವಿಶೇಷವಾದ ಕಾರ್ಯಕ್ರಮವಾಗಿದೆ, ಸಾಂಸ್ಕ್ರತಿಕವಾಗಿ, ಮತ್ತು ಆರೋಗ್ಯಕ್ಕೆ ಪೂರಕವಾದ ಕಾರ್ಯಕ್ರಮಗಳು, ಇಂದಿನ ಪೀಳಿಗೆಗೆ ಬೇಕಾದ ಮನೋರಂಜನೆಗಳನ್ನು ಆಯೋಜಿಸಲಾಗಿದೆ. ಈ ಎಲ್ಲಾ ಜನಪರ ಕಾರ್ಯಕ್ರಮಕ್ಕೆ ಕುಮಟಾದ ಜನರು ಬೆಂಬಲದ ಜೊತೆಗೆ ಸಹಕಾರ ಅವಶ್ಯ ಎಂದರು..

ಕುಮಟಾ ವೈಭವದ ಅಧ್ಯಕ್ಷರಾದ ಡಾ.ಜಿ.ಜಿ ಹೆಗಡೆ ಮಾತನಾಡಿ ಈ ಕಾರ್ಯಕ್ರಮ ನಮ್ಮ ತಾಲೂಕನ್ನು ಸಾಂಸ್ಕ್ರತೀಕವಾಗಿ ಎತ್ತರಕ್ಕೆ ಕೊಂಡೊಯ್ಯುವ ಕೆಲಸ ಮಾಡುತ್ತಿದೆ. ಈ ಮೂಲಕ ಕುಮಟಾ ಜನರ ಮನಸ್ಸು ಕಟ್ಟುವ ಕಾರ್ಯಕ್ರಮವಾಗಿದೆ ಎಂದರು…

ಈ ಸುದ್ದಿಗೊಷ್ಠಿಯಲ್ಲಿ ಆಯೋಜಕ ಮಂಜುನಾಥ ನಾಯ್ಕ, ತಾಂಡವ ಕಲನೀಕೇತನದ ಜಿಲ್ಲಾಧ್ಯಕ್ಷ ಅಶ್ವಿನ ನಾಯ್ಕ, ಸಂಚಾಲಕರಾದ ಹರೀಶ ನಾಯ್ಕ, ಕಾರ್ಯದರ್ಶಿ ಎಂ,ಜಿ,ನಾಯ್ಕ,ಸಂಚಾಲಕ ನರಸಿಂಹ ಭಟ್,ಮಂಜು ಜೈನ್,ಮಹೇಶ ನಾಯ್ಕ,ಗಣೇಶ ನಾಯ್ಕ ಜಯ ಶೇಟ್ ಮುಂತಾದವರು ಉಪಸ್ಥಿತರಿದ್ದರು..