Home Local ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಐ ಆರ್ ಬಿ ಕಂಪನಿಯು ಗೂಂಡಾ ವರ್ತನೆ.

ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಐ ಆರ್ ಬಿ ಕಂಪನಿಯು ಗೂಂಡಾ ವರ್ತನೆ.

SHARE

ಭಟ್ಕಳ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೇಮಿಸಿದ ಐ ಆರ್ ಬಿ ಕಂಪನಿಯು ತನ್ನ ಗೂಂಡಾ ವರ್ತನೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬಡ ಅಮಾಯಕರ ಮನೆಗಳಿಗೆ ತೆರಳಿ ಮನೆಗಳನ್ನು ಖುಲ್ಲಾ ಮಾಡಿ ಎಂದು ದಮ್ಕಿ ಹಾಕಿದ ಘಟನೆ ಹೆಚ್ಚುತ್ತಿದೆ.

ರಾಷ್ಟ್ರೀಯ ಕಾರ್ಯಕ್ರಮ ಎಂಬ ನೆಪವನ್ನು ಮುಂದೆ ಇಟ್ಟು ಬಡ ಅಮಾಯಕರ ಮೇಲೆ ದಬ್ಬಾಳಿಕೆ ನಡೆಸುವುದು ಮಾಮುಲು ಆಗಿದೆ. ಇದಕ್ಕೆ ಒಂದು ಉತ್ತಮ ಉದಾರಣೆಯೆಂದರೆ ಭಟ್ಕಳ ತಾಲೂಕಿನ ಬೆಳ್ಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆದ್ರಕೇರಿಯಲ್ಲಿ ನೆಡಿದೆ, ಹೌದು, ಇಲ್ಲಿ ಒಬ್ಬರ ಐದು ಗುಂಟಾ ಜಾಗವು ರಸ್ತೆ ಅಗಲಿಕರಣದ ಸಂಬಂದ ಭೂ ಸ್ವಾದಿನವಾಗುತ್ತಿದ್ದು ಇದಕ್ಕೆ ಸಂಬಂದ ಪಟ್ಟಂತೆ ಹೆದ್ದಾರಿ ಪ್ರಾದಿಕಾರವು ಪರಿಹಾರವನು ಕೊಟ್ಟಿರುತ್ತದೆ . ಆದರೆ ಈಗ ಐ ಆರ್ ಬಿ ಕಂಪನಿಯು 5 ಗುಂಟಾ ಜಾಗಕಿಂತ ಹೆಚ್ಚು ಜಾಗ ಅಂದರೆ 8.5 ಗುಂಟಾ ಜಾಗವನ್ನು ಅತಿಕ್ರಮಿಸಿಕೊಂಡಿರುತ್ತದೆ ಅದಲ್ಲದೆ ಅವರ ಜಾಗದಲ್ಲಿರುವ ಒಂದು ಬಾವಿಯನ್ನು ಮುಚ್ಚುವಂತೆ ಒತ್ತಡವನ್ನು ತರುತ್ತಿದೆ. ಬಾವಿಯನ್ನು ಮುಚ್ಚದಿದ್ದಲ್ಲಿ ಬಲವಂತವಾಗಿ ಮುಚ್ಚುತ್ತೆವೆ ಎಂದು ಗೂಂಡಾ ವರ್ತನೆಯನ್ನು ತೋರಿಸುತ್ತಿದ್ದಾರೆ ಅಧಿಕಾರಿಗಳು. ಈ ಬಗ್ಗೆ ರಮಾನಂದ ಅವಭೃತ ಅವರ ಪತ್ನಿ ಮಾತನಾಡಿ ನಾವು ಚತುಷ್ಪತಕ್ಕಾಗಿ ಐದು ಗುಂಟೆ ಜಾಗವನ್ನು ಕೊಟ್ಟಿರುತ್ತೆವೆ ಇದಕ್ಕೆ ಸಂಬಂದಿಸಿದಂತೆ ನಮಗೆ ಏಳು ಲಕ್ಷದ ಎಂಬತ್ತೈದು ಸಾವಿರ ಪರಿಹಾರ ಸಿಕ್ಕಿರುತ್ತದೆ ಆದರೆ ಐ ಆರ್ ಬಿ ಕಂಪನಿಯವರು 8.5 ಗುಂಟಾ ಜಾಗವನ್ನು ಅತಿಕ್ರಮಿಸಿಕೊಂಡಿರುತ್ತಾರೆ ಎಂದು ದೂರಿದ್ದಾರೆ.

ಅಲ್ಲದೆ, ವರದಿಗೆ ತೆರಳಿದ ಮಾಧ್ಯಮ ಪ್ರತಿನಿಧಿಗಳ ಮೇಲೂ ಬೆದರಿಕೆ ಹಾಕುತ್ತಿರುವ ಪ್ರಕರಣ ವರದಿಯಾಗಿದೆ.ರಾಷ್ಟ್ರೀಯ ಕಾರ್ಯಕ್ರಮದ ಹೆಸರಲ್ಲಿ ಬಡವರ ರಕ್ತ ಹಿರುತ್ತಿರುವ ಅಧಿಕಾರಿಗಳ ಬಗ್ಗೆ ಇನ್ನಾದರು ಇದಕ್ಕೆ ಸಂಬಂದಿಸಿದ ಅಧಿಕಾರಿಗಳು ಕ್ರಮ ಕೈಗೋಳ್ಳುತ್ತಾರೊ ಎಂದು ಕಾದು ನೋಡಬೇಕಾಗಿದೆ