Home Local ಉತ್ತರ ಕನ್ನಡದಲ್ಲಿ ಸಿ.ಎಂ ಕಾರ್ಯಕ್ರಮಗಳು.

ಉತ್ತರ ಕನ್ನಡದಲ್ಲಿ ಸಿ.ಎಂ ಕಾರ್ಯಕ್ರಮಗಳು.

SHARE

ಕಾರವಾರ: ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಡಿಸೆಂಬರ್ 6 ಮತ್ತು 7 ರಂದು ಉತ್ತರಕನ್ನಡ ಜಿಲ್ಲೆ ಪ್ರವಾಸ ಕೈಗೊಳ್ಳಲಿದ್ದಾರೆ. ಡಿಸೆಂಬರ್ 6 ರಂದು ಭಟ್ಕಳದಲ್ಲಿ ಬೆಳಿಗ್ಗೆ 10-30ಕ್ಕೆ ಸಾರ್ವಜನಿಕ ಸಭೆ ನಂತರ ಕುಮಟಾದಲ್ಲಿ ಮಧ್ಯಾಹ್ನ 12-30ಕ್ಕೆ ಹಾಗೂ ಕಾರವಾರದಲ್ಲಿ ಸಂಜೆ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಕಾರವಾರದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಡಿಸೆಂಬರ್ 7ರಂದು ಬೆಳಿಗ್ಗೆ 10-00 ಗಂಟೆಗೆ ಸಾರ್ವಜನಿಕ ಸಭೆ ನಂತರ, ಮುಂಡಗೋಡದಲ್ಲಿ ಮಧ್ಯಾಹ್ನ 12-30 ಕ್ಕೆ ಸಾರ್ವಜನಿಕ ಸಭೆ, ಹಳಿಯಾಳದಲ್ಲಿ ಸಂಜೆ 4 ಗಂಟೆಗೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.