Home Local ಭಟ್ಕಳ ಮೂಲದ ವೇಶ್ಯಾವಾಟಿಕೆ ದಂಧೆಯ ಕಿಂಗ್ ಪೋಲೀಸರ ಬಲೆಗೆ!

ಭಟ್ಕಳ ಮೂಲದ ವೇಶ್ಯಾವಾಟಿಕೆ ದಂಧೆಯ ಕಿಂಗ್ ಪೋಲೀಸರ ಬಲೆಗೆ!

SHARE

ಭಟ್ಕಳ: ವೇಶ್ಯಾವಾಟಿಕೆ ಲೋಕದ ತಲೆಹಿಡುಕ ಎಂದೆ ಕುಖ್ಯಾತಿಯನ್ನು ಪಡೆದಿರುವ ಭಟ್ಕಳ ಮೂಲದ ನಾಗಪ್ಪ ಗೋವಿಂದ ನಾಯ್ಕ ಅಲಿಯಾಸ ಲಂಡನ್ ನಾಗ್ಯಾ, ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಈತ ಐದಾರು ವರ್ಷಗಳ ಹಿಂದೆಯೇ ಹುಬ್ಬಳ್ಳಿಗೆ ತೆರಳಿ ಅಲ್ಲಿಯೇ ನೆಲೆನಿಂತು ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಎನ್ನಲಾಗಿದೆ. ಹಣ ಮಾಡಬೇಕೆಂಬ ಖಯಾಲಿಗೆ ಬಿದ್ದ ನಾಗಪ್ಪ ಬೆಂಗಳೂರಿನ ಶಿವಾಜಿ ನಗರಕ್ಕೆ ಹೋಗಿ ಅಲ್ಲಿ ಲಾಡ್ಜ್ ಒಂದನ್ನು ಬಾಡಿಗೆಗೆ ಪಡೆದು ಮಾಂಸದಂಧೆ (ವೇಶ್ಯಾವಾಟಿಕೆ) ಆರಂಭಿಸಿದ್ದ. ಇದರೊಟ್ಟಿಗೆ ಮಸಾಜ್ ಸೆಂಟರ್ ಆರಂಭಿಸಿದ್ದ. ಈ ಮಧ್ಯೆ ಪೋಲೀಸ್ ದಾಳಿಯಿಂದ ಕಂಗೆಟ್ಟಿದ್ದ ನಾಗ್ಯಾನಿಗೆ ಬೆಂಗಳೂರಿನ ವಾಸ ತುಟ್ಟಿಯಾಗತೊಡಗಿತು. ಬಳಿಕ ಬೆಂಗಳೂರು ನಂತರ ಮೈಸೂರು, ಮದ್ದೂರು ಇತ್ಯಾದಿ ಕಡೆಗಳಲ್ಲಿ ಈತನ ವ್ಯವಹಾರ ವಿಸ್ತಾರವಾಯಿತು. ಬಳಿಕ ದಂಧೆಯಲ್ಲಿ ಹಿಡಿತ ಪಡೆದು ಹುಬ್ಬಳ್ಳಿಯಲ್ಲಿ ಸಾಮ್ರಾಜ್ಯ ಕಟ್ಟಿದ್ದ.

ಈಗ ಹುಬ್ಬಳ್ಳಿ ಮಹಾನಗರ ಪೋಲೀಸ್ ಆಯುಕ್ತ ಎಂ.ಎನ್. ನಾಗರಾಜ್ ಫೀಲ್ಡಿಗಿಳಿದು ನಾಗ್ಯಾ ಹಾಗೂ ಪ್ರವೀಣನನ್ನು ಬಂಧಿಸಿದ್ದಾರೆ. ಆಯುಕ್ತರ ಈ ಕಾರ್ಯಕ್ಕೆ ಭಟ್ಕಳದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.