Home Important ಪದ್ಮಾವತಿ ವಿವಾದ: ನ.28ರಂದು ಸುಪ್ರೀಂ ವಿಚಾರಣೆ.

ಪದ್ಮಾವತಿ ವಿವಾದ: ನ.28ರಂದು ಸುಪ್ರೀಂ ವಿಚಾರಣೆ.

SHARE

ನವದೆಹಲಿ: ಪದ್ಮಾವತಿ ಚಿತ್ರದ ವಿವಾದ ಈಗ ನ್ಯಾಯಾಲಯದ ಮೆಟ್ಟಿಲೇರಿದ್ದು, ಈ ಕುರಿತಂತೆ ನ.28ರಂದು ವಿಚಾರಣೆ ಕೈಗೆತ್ತಿಕೊಳ್ಳಲಿದೆ.

ಈ ಕುರಿತಂತೆ ವಕೀಲ ಮನೋಹರ ಶರ್ಮಾ ಎನ್ನುವವರು ಸುಪ್ರೀಂ ಮೆಟ್ಟಿಲೇರಿದ್ದು, ಈ ವಿಚಾರದಲ್ಲಿ ಚಿತ್ರ ನಿರ್ಮಾಪಕರು ನ್ಯಾಯಾಲಯವನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ಕುರಿತಂತೆ ನ.20ರಂದು ಇದೇ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ಚಿತ್ರದ ವಿವಾದದಲ್ಲಿ ವಿಚಾರಣೆ ನಡೆಸುವಂತೆ ಕೋರಿದ್ದರು. ಆದರೆ, ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಆದರೆ, ಇಂದು ಮತ್ತೆ ಅರ್ಜಿ ಸಲ್ಲಿಸಿದ್ದು, ನ.28ಕ್ಕೆ ವಿಚಾರಣೆ ನಡೆಯಲಿದೆ.

ಆದರೆ, ಈ ಅರ್ಜಿಯನ್ನು ತೆಗೆದುಕೊಂಡಿರುವ ನ್ಯಾಯಾಲಯ ಸಿಬಿಎಫ್‌ಸಿ ಕೆಲಸದಲ್ಲಿ ನ್ಯಾಯಾಲಯ ತಲೆ ಹಾಕುವುದಿಲ್ಲ ಎಂದಿದೆ.