Home Local ಸಚಿವ ಅನಂತಕುಮಾರ್ ಹೆಗಡೆಯವರಿಗೆ ಸಂಸ್ಕಾರದ ಪಾಠ ಹೇಳಲು ಆರ್.ಎನ್.ನಾಯಕ ಯಾರು? ಸುಬ್ರಾಯ ನಾಯ್ಕ್ ಪ್ರಶ್ನೆ

ಸಚಿವ ಅನಂತಕುಮಾರ್ ಹೆಗಡೆಯವರಿಗೆ ಸಂಸ್ಕಾರದ ಪಾಠ ಹೇಳಲು ಆರ್.ಎನ್.ನಾಯಕ ಯಾರು? ಸುಬ್ರಾಯ ನಾಯ್ಕ್ ಪ್ರಶ್ನೆ

SHARE

ಭಟ್ಕಳ : ತಾಲೂಕಿನಲ್ಲಿ ನಡೆದ ಗಲಭೆಯ ಕಾಲದಲ್ಲಿ ಸಚಿವರಾಗಿ ಅಧಿಕಾರ ಸರಿಯಾಗಿ ಬಳಸದೆ ಅಧಿಕಾರ ಕಳೆದುಕೊಂಡ ಜನರಿಂದ ತಿರಸ್ಕಾರಗೊಂಡು ಚಲಾವಣೆಯಲ್ಲಿರದ ನಾಣ್ಯದಂತೆ ಇರುವ ಮಾಜಿ ಸಚಿವ ಆರ್.ಎನ್.ನಾಯಕರಿಂದ ಸಚಿವ ಅನಂತಕುಮಾರ್ ಹೆಗಡೆಯವರಿಗೆ ಸಂಸ್ಕಾರದ ಪಾಠ ಬೇಕಿಲ್ಲ ಸಚಿವ ಅನಂತಕುಮಾರ್ ಹೆಗಡೆಯವರಿಗೆ ಸಂಸ್ಕಾರದ ಪಾಠ ಹೇಳಲು ಆರ್.ಎನ್.ನಾಯಕ ಯಾರು? ಎಂದು ಹೊನ್ನಾವರ ತಾಲೂಕ ಬಿ.ಜೆ.ಪಿ ಮಂಡಲದ ಅಧ್ಯಕ್ಷ ಸುಬ್ರಾಯ ನಾಯ್ಕ್ ಪ್ರಶ್ನಿಸಿದರು. ಇಂದು ಹೊನ್ನಾವರದ ಸಾಗರ ರೆಸಿಡೆನ್ಸಿಯಲ್ಲಿ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಆರ್.ಎನ್. ನಾಯ್ಕರು ಯಾವ ಪಕ್ಷದಲ್ಲಿದ್ದಾರೆ ಎನ್ನುವ ಪ್ರಶ್ನೆಯೂ ಕೂಡ ನಮ್ಮಲ್ಲಿ ಉದ್ಭವಿಸಿದೆ. ಪಕ್ಷದಿಂದ ಅವರಿಗೆ ನಾವು ಗೌರವ ನೀಡುತ್ತಿದ್ದರು ಅವರು ಪತ್ರಿಕೆಯಲ್ಲಿ ಅನಂತಕುಮಾರ್ ಹೆಗಡೆ ಅವರ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ ಎಂದು ಅವರು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ನಾಗರಾಜ ನಾಯಕ ತೊರ್ಕೆ, ವೆಂಕಟಟ್ರಮಣ ಹೆಗಡೆ, ಗಣೇಶ ಪೈ ಇನ್ನಿತರ ಪ್ರಮುಖರು ಹಾಜರಿದ್ದರು.