Home Local ಕಾರವಾರದಲ್ಲಿ ಗಮನಸೆಳೆದ ದ್ರಾಕ್ಷಾರಸ ಉತ್ಸವ!

ಕಾರವಾರದಲ್ಲಿ ಗಮನಸೆಳೆದ ದ್ರಾಕ್ಷಾರಸ ಉತ್ಸವ!

SHARE

ಕಾರವಾರ:ಪ್ರಥಮ ಬಾರಿಗೆ ಕಾರವಾರ ನಗರದಲ್ಲಿ ಆಯೋಜಿಸಲಾದ ದ್ರಾಕ್ಷಾರಸ ಉತ್ಸವ ನಗರದ ನಾಗರಿಕರಿಗೆ ಹೊಸ ಅನುಭವ ನೀಡಿತು. ನಗರದ ಕೋಡಿಬಾಗ ಕಾಳಿ ರಿವರ್ ಗಾರ್ಡನ್‍ನಲ್ಲಿ ಹಮ್ಮಿಕೊಂಡಿದ್ದ ದ್ರಾಕ್ಷಾರಸ ಉತ್ಸವ ಯಶಸ್ವಿಯಾಗಿ ಪ್ರಾರಂಭಗೊಂಡಿತು.

ನ.24 ರಿಂದ 26 ರವರೆಗೆ ಮೂರುದಿನಗಳ ಕಾಲ ಕಾಳಿ ರಿವರ್ ಗಾರ್ಡನ್‍ನಲ್ಲಿ ದ್ರಾಕ್ಷಿ ಬೆಳೆಯುವ ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವೈನ್ ಮೇಳ ಆಯೋಜಿಸಲಾಗಿದೆ. ಮೇಳದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದಿಂದ ಸುಮಾರು 8 ರಿಂದ 10 ವೈನರಿಗಳು ಭಾಗವಹಿಸಿ ಸುಮಾರು 150ಕ್ಕೂ ಹೆಚ್ಚು ಬ್ರಾಂಡ್‌‌ಗಳನ್ನು ಪ್ರದರ್ಶಿಸಲಾಗುವುದು ಹಾಗೂ ಹಳೆಯ ವೈನ್‌ ಪ್ರದೇಶಗಳಾದ ಯುರೋಪ್‌ ಖಂಡ ಮತ್ತು ಹೊಸ ವೈನ್‌ ಪ್ರದೇಶಗಳಾದ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಚಿಲ್ಲಿ ಮತ್ತು ಅಮೆರಿಕಾ ಹಾಗೂ ಇತರೆ ದೇಶಗಳ ವೈನ್ ಪ್ರದರ್ಶನ ಮತ್ತು ಮಾರಾಟ ಮಾಡಲಾಗುವುದು ಎಂದು ಮಾಹಿತಿ ಲಭ್ಯವಾಗಿದೆ.

ಕರ್ನಾಟಕದಲ್ಲಿ ವೈನ್ ಉತ್ಪಾದನೆಗೆ ಸೂಕ್ತವಾದ ದ್ರಾಕ್ಷಿ ತಳಿಗಳನ್ನು ಬೆಳೆಯಲು ಹಾಗೂ ರಾಜ್ಯದ ವೈನ್ ತಯಾರಕರಿಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆ ಪರಿಚಯಿಸಲು ಮತ್ತು ರಾಜ್ಯದಲ್ಲಿ ಆರೋಗ್ಯಕರ ವೈನ್ ಬಳಕೆ ಹೆಚ್ಚಿಸಲು ಅನುವು ಮಾಡಿಕೊಡುವ ಸಲುವಾಗಿ ಕಾರವಾರ ದ್ರಾಕ್ಷಾರಸ ಉತ್ಸವ-17 ಆಯೋಜಿಸಲಾಗಿದ್ದು ಎಲ್ಲಾ ವೈನ್ ಬ್ರಾಂಡ್‌ ಮಾರಾಟಗಳ ಮೇಲೆ ಶೇ. 10 ರಷ್ಟು ರಿಯಾತಿಯನ್ನು ವೈನ್ ಮೇಳದಲ್ಲಿ ನೀಡಲಾಗುತ್ತಿದೆ ಮತ್ತು ವೈನ್‌ ಬಳಕೆಯನ್ನು ಉತ್ತೇಜಿಸುವ ದಿಸೆಯಲ್ಲಿ ವೈನ್ ದ್ರಾಕ್ಷಿ ಬೆಳೆಯುವ ಹಾಗೂ ವೈನ್ ತಯಾರಿಕೆ ಬಗ್ಗೆ ತರಬೇತಿ ಮತ್ತು ವೈನ್ ತಯಾರಕರ ಹಾಗೂ ಸಾರ್ವಜನಿಕರ ನಡುವೆ ಪರಸ್ಪರ ವಿಚಾರ ವಿನಿಮಯ ಅವಕಾಶವನ್ನು ಕಲ್ಪಿಸಲಾಗುತ್ತದೆ.