Home Local ನೂತನ ಬಾರ್ಜ ಸೇವೆ ಉದ್ಘಾಟಿಸಿದ ಶಾಸಕಿ ಶಾರದಾ ಶೆಟ್ಟಿ

ನೂತನ ಬಾರ್ಜ ಸೇವೆ ಉದ್ಘಾಟಿಸಿದ ಶಾಸಕಿ ಶಾರದಾ ಶೆಟ್ಟಿ

SHARE

ಕುಮಟಾ : ತಾಲೂಕಿನ ಅಘನಾಶಿನಿ ಹಾಗೂ ತದಡಿಗೆ ಸಂಪರ್ಕ ಕಲ್ಪಿಸಲು ನೂತನ ಬಾರ್ಜ್ ಅನ್ನು ಕ್ಷೇತ್ರದ ಶಾಸಕಿಯಾದ ಶ್ರೀಮತಿ ಶಾರದಾ ಶೆಟ್ಟಿ ಅವರು ಇಂದು ಲೋಕಾರ್ಪಣೆ ಮಾಡಿದರು.

ದಶಕಗಳಿಂದ ತದಡಿ ಅಘನಾಶಿನಿಗೆ ಜನರು ಯಾಂತ್ರಿಕ ದೋಣಿಯಲ್ಲೇ ಸಂಚರಿಸುತಿದ್ದು ಇದು ಅಪಾಯದ ಸಂಚಾರವಾಗಿತ್ತು. ಇದನ್ನು ಮನಗಂಡ ಸ್ಥಳೀಯರು ಜನಪ್ರತಿನಿಧಿಗಳ ಬಳಿ ಸೇತುವೆಗೆ ಬೇಡಿಕೆ ಇಟ್ಟಿದ್ದರು.

ಮುಂಬರುವ ದಿನಗಳಲ್ಲಿ ಸೇತುವೆ ನಿರ್ಮಿಸುವ ಭರವಸೆ ನೀಡಿದ್ದ ಶಾಸಕಿಯವರು ತಾತ್ಕಾಲಿಕವಾಗಿ ಬಾರ್ಜ್ ಒದಗಿಸಿದ್ದು ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಇದರ ಸದುಪಯೋಗ ಪಡೆಯುವಂತೆ ಜನತೆಗೆ ವಿನಂತಿಸಿದರು.