Home Local ಸಿದ್ದಾಪುರದಲ್ಲಿ ಸಿಕ್ಕಿಬಿದ್ದರು ಶಾಲಾ ಸಿಲೆಂಡರ್ ಕಳ್ಳರು!

ಸಿದ್ದಾಪುರದಲ್ಲಿ ಸಿಕ್ಕಿಬಿದ್ದರು ಶಾಲಾ ಸಿಲೆಂಡರ್ ಕಳ್ಳರು!

SHARE

ಸಿದ್ದಾಪುರ: ತಾಲೂಕಿನ 2 ಹಾಗೂ ಅಂಕೋಲಾ ತಾಲೂಕಿನ ಒಂದು ಶಾಲೆಯ ಬಿಸಿಯೂಟಕ್ಕೆ ಬಳಸುತ್ತಿದ್ದ ಸಿಲಿಂಡರ್‍ನ್ನು ಕಳುವುಮಾಡಿದ್ದ ಮೂವರನ್ನು ಬಂಧಿಸಿದ ಪೊಲಿಸರು ಅವರಿಂದ ಆರು ಸಿಲಿಂಡರ್ ಹಾಗೂ ಒಂದು ಮೋಟಾರ್ ಬೈಕ್ ವಶಪಡಿಸಿಕೊಂಡಿದ್ದಾರೆ.

ಧನಂಜಯ ನಾಯ್ಕ ಕಾನಗೋಡ, ಸಂತೋಷ ನಾಯ್ಕ ಕಾನಗೋಡ ಹಾಗೂ ಸಂಕೇತ ನಾಯ್ಕ ಕಣಸೆ ಇವರು ಪಟ್ಟಣದ ಹಾಲದಕಟ್ಟಾದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿರುವಾಗ ಪೊಲೀಸರು ಅವರನ್ನು ವಿಚಾರಿಸಿದಾಗ ಶಿರಳಗಿ ಪ್ರೌಢಶಾಲೆಯ 2, ಅಂದಳ್ಳಿ ಶಾಲೆಯ 2 ಹಾಗೂ ಅಂಕೋಲಾ ತಾಲೂಕಿನ ಶಾಲೆಯ 2 ಸಿಲಿಂಡರ್ ಕಳುವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.