Home Local ಕುಖ್ಯಾತ ಅಂತರ್ ರಾಜ್ಯ ಕಳ್ಳರು ಅಂದರ್ !

ಕುಖ್ಯಾತ ಅಂತರ್ ರಾಜ್ಯ ಕಳ್ಳರು ಅಂದರ್ !

SHARE

ಶಿವಮೊಗ್ಗ : ಕುಖ್ಯಾತ ಅಂತರ್ ರಾಜ್ಯ ಕಳ್ಳರು ಅಂದರ್ ಆಗಿದ್ದಾರೆ. ಶಿವಮೊಗ್ಗ ಪೊಲೀಸರು ಕಾರ್ಯಚರಣೆ ನಡೆಸಿ 14 ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂರು ಜನರನ್ನು ಬಂಧಿಸಿದ್ದಾರೆ.

ತಬ್ರೇಜ್, ಕಬೀರ್ ಮತ್ತು ಮುದಾಸೀರ್ ಎಂಬುವರೇ ಬಂಧಿತ ಆರೋಪಿಗಳು. ನಗರದ ಶ್ರೀಮಂತ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದ ಇವರು.ಶಿವಮೊಗ್ಗ, ಹಾಸನ, ಮತ್ತು ಚಿಕ್ಕಮಗಳೂರಿನಲ್ಲೂ ತಮ್ಮ ಕರಾಮತ್ತು ತೋರಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬಂಧಿತರಿಂದ ಬರೋಬ್ಬರಿ 1 ಕೆಜಿ 472 ಗ್ರಾಂ ಚಿನ್ನ, 40 ಗ್ರಾಂ ಬೆಳ್ಳಿ ಸೇರಿದಂತೆ ಒಟ್ಟು 40 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.