Home Important ಮೂರು ದಿನಗಳ ಸಾಹಿತ್ಯ ಸಮ್ಮೇಳನದಲ್ಲಿ ಏನೆಲ್ಲಾ ಕಾರ್ಯಕ್ರಮಗಳು. ಪಿನ್ ಟು ಪಿನ್ ಡಿಟೈಲ್ಸ್ ಇಲ್ಲಿದೆ

ಮೂರು ದಿನಗಳ ಸಾಹಿತ್ಯ ಸಮ್ಮೇಳನದಲ್ಲಿ ಏನೆಲ್ಲಾ ಕಾರ್ಯಕ್ರಮಗಳು. ಪಿನ್ ಟು ಪಿನ್ ಡಿಟೈಲ್ಸ್ ಇಲ್ಲಿದೆ

SHARE

ಮೈಸೂರು: ಮೂರು ದಿನಗಳ ಸಾಹಿತ್ಯ ಸಮ್ಮೇಳನದಲ್ಲಿ ಏನೆಲ್ಲಾ ಕಾರ್ಯಕ್ರಮಗಳು, ಗೋಷ್ಟಿಗಳು ನಡೆಯಲಿವೆ ಎಂಬುದರೆ ಪಿನ್ ಟು ಪಿನ್ ಡಿಟೈಲ್ಸ್ ಇಲ್ಲಿದೆ.

ಇಂದು ಬೆಳಿಗ್ಗೆ 8.30ಕ್ಕೆ ಮಹಾರಾಜ ಕಾಲೇಜು ಮೈದಾನದಲ್ಲಿ ಧ್ವಜಾರೋಹಣ ಕಾರ್ಯಕ್ರಮವು ಜರುಗಿತು.

ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಬೆಳಿಗ್ಗೆ 9 ಗಂಟೆಗೆ ಅರಮನೆ ಆವರಣದ ಕೋಟೆಆಂಜನೇಯ ಸ್ವಾಮಿ ಮುಂಭಾಗದಲ್ಲಿ ಮೈಸೂರು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ನಯಿಮಾ ಸುಲ್ತಾನ್ ನಜೀರ್ ಅಹಮದ್ ಅವರು ಚಾಲನೆ ನೀಡಿದರು. ಬೆಳಿಗ್ಗೆ 11 ಗಂಟೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ ನಾಡಗೀತೆಯ ನಂತರ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಕಾರ್ಯಕ್ರಮ ಉದ್ಘಾಟಿಸುವರು. ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್.ಸಿ.ಮಹದೇವಪ್ಪ ಅವರು ಸ್ವಾಗತ ಭಾಷಣ ಮಾಡುವರು. ಕನ್ನಡ ಸಾಹಿತ್ಯ ಪರಿಷತ್ತಿ ಅಧ್ಯಕ್ಷರಾದ ಡಾ.ಮನು ಬಳಿಗಾರ್ ಆಶಯ ನುಡಿಯನ್ನಾಡುವರು. ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಅವರು ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾಗಿ ಮಾತನಾಡುವರು.

ಹಿರಿಯ ಸಾಹಿತಿಗಳು ಹಾಗೂ ಚಿಂತಕರಾದ ಪ್ರೊ. ಚಂದ್ರಶೇಖರ್ ಪಾಟೀಲಾ ಅವರು ಸಮ್ಮೇಳನ ಅಧ್ಯಕ್ಷರ ಭಾಷಣ ಮಾಡುವರು. ಕನ್ನಡ ಸಂಸ್ಕ್ರತಿ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಉಮಾಶ್ರೀ ಅವರು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸುವರು. ವಿಧಾನ ಸಭೆ ವಿರೋಧ ಪಕ್ಷದ ನಾಯಕರಾದ ಜಗದೀಶ್ ಶೆಟ್ಟರ್ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾದ ತನ್ವೀರ್ ಶೇಠ್ ಅವರು ಪುಸ್ತಕ ಮಳಿಗೆಗಳ ಉದ್ಘಾಟನೆ ಮಾಡುವರು.

ಸಣ್ಣ ಕೈಗಾರಿಕೆ ಮತ್ತು ಸಕ್ಕರೆ ಸಚಿವರಾದ ಎಂ.ಸಿ.ಮೋಹನ್ಕುಮಾರಿ ಪರಿಷತ್ತಿನ ಪುಸ್ತಕಗಳ ಬಿಡುಗಡೆಗೊಳಿಸುವರು. ಲೋಕಸಭಾ ಸದಸ್ಯರಾದ ಪ್ರತಾಪ್ ಸಿಂಹ ಅವರು ವಿವಿಧ ಲೇಖಕರ ಪುಸ್ತಕಗಳ ಬಿಡುಗಡೆಗೊಳಿಸುವರು. ವಿಧಾನ ಪರಿಷತ್ತಿನ ಉಪಸಭಾಪತಿಗಳಾದ ಮರಿತಿಬ್ಬೆಗೌಡ ಅವರು ಚಿತ್ರಕಲಾ ಪ್ರದರ್ಶನ ಉದ್ಘಾಟಿಸುವರು.

ಗೋಷ್ಠಿ 1- ನವೆಂಬರ್ 24 ಮದ್ಯಾಹ್ನ 2 ಗಂಟೆಗೆ ಶಿಕ್ಷಣ-ವರ್ತಮಾನದ ಸಾವಾಲುಗಳು ಕುರಿತು ವಿಚಾರಗೋಷ್ಠಿ ನಡೆಯಲಿದ್ದು, ಕನ್ನಡ ಅಭಿವೃದ್ದಿ ಪ್ರಾದಿಕಾರದ ಅಧ್ಯಕ್ಷ ಪ್ರೊ. ಎಸ್.ಜಿ ಸಿದ್ದಾರಾಮಯ್ಯ ಅವರು ಅಧ್ಯಕ್ಷತೆ ವಹಿಸುವರು. ಪ್ತಾಥಮಿಕ ಶಿಕ್ಷಣ-ದೂರವಾಗುತ್ತಿರುವ ಕನ್ನಡ ವಿಷಯ ಕುರಿತು ಟಿ.ಎಂ ಕುಮಾರ್ ಉನ್ನತ ಶಿಕ್ಷಣ-ಗುಣಮಟ್ಟದ ಸವಾಲುಗಳು ಕುರಿತು ಡಾ.ಜಯಪ್ರಕಾಶ್ ಮಾವಿನಕುಳಿ, ಕನ್ನಡ ಮಾದ್ಯಮ-ಉದ್ಯೋಗಾವಕಾಶಗಳು ಕುರಿತು ಡಾ.ವಿಷ್ಣುಕಾಂತ ಚಟಪಲ್ಲಿ ಅವರುಗಳು ವಿಷಯ ಮಂಡಿಸಲಿದ್ದಾರೆ.

ಗೋಷ್ಠಿ 2- ನವೆಂಬರ್ 24 ಮದ್ಯಾಹ್ನ 3-30 ಗಂಟೆಗೆ ದಲಿತ ಲೋಕದೃಷ್ಟಿ ಕುರಿತು ವಿಚಾರಗೋಷ್ಠಿ ನಡೆಯಲಿದ್ದು, ಧರಣಿದೇವಿ ಮಾಲಗತ್ತಿಯವರು ಅದ್ಯಕ್ಷತೆ ವಹಿಸುವರು. ದಲಿತ ಚಲಿವಳಿ-ಸಮಕಾಲಿನ ಸವಾಲುಗಳು ಕುರಿತಂತೆ ಡಾ.ಹೆಚ್ ದಂಡಪ್ಪ, ಹಿಂಸೆ ಮತ್ತು ಅಪಮಾನದ ನಿರ್ವಹಣೆ ಕುರಿತಂತೆ ಆರ್.ಬಿ ಅಗವಾನೆ, ಅಸ್ಪೃಶ್ಯತೆಯ ಹೊಸ ರೂಪಗಳು ಕುರಿತಂತೆ ಡಾ.ಶಿವರುದ್ರ ಕಲ್ಲೋಳಿಕರ ವಿಷಯ ಮಂಡಿಸಲಿದ್ದಾರೆ.

ಗೋಷ್ಠಿ 3- ನವೆಂಬರ್ 24 ಸಂಜೆ 5 ಗಂಟೆಗೆ ಮಾದ್ಯಮ- ಮುಂದಿರುವ ಸವಾಲುಗಳು ಕುರಿತುವಿಚಾರಗೋಷ್ಠಿ ನಡೆಯಲಿದ್ದು, ಹೆಚ್ ಆರ್ ರಂಗನಾಥ್ ಧಿಕ್ಸೂಚಿ ಭಾಷಣ ಮಾಡಲಿದ್ದಾರೆ. ತಿಮ್ಮಪ್ಪ ಭಟ್ ಅಧ್ಯಕ್ಷತೆ ವಹಿಸಲಿದ್ದು ಸಾಮಾಜಿಕ ಜಾಲತಾಣ ಕುರಿತು ಎನ್.ರವಿಶಂಕರ್, ಮುದ್ರಣ ಮಾಧ್ಯಮ ಕುರಿತು ಎನ್.ಉದಯ ಕುಮಾರ, ವಿದ್ಯುನ್ಮಾನ ಮಾಧ್ಯಮ ಕುರಿತು ಅಜೀತ್ ಹನುಮಕ್ಕನವರ್ ಅವರುಗಳು ವಿಷಯ ಮಂಡಿಸಲಿದ್ದಾರೆ.

ಗೋಷ್ಠಿ 4- ನವೆಂಬರ್ 25 ಬೆಳಿಗ್ಗೆ 9.30 ಗಂಟೆಗೆ ಮಹಿಳೆ- ಹೊಸಲೋಕ ಮೀಮಾಂಸೆ ವಿಚಾರಗೋಷ್ಠಿ ನಡೆಯಲಿದ್ದು, ಡಾ.ವಿಜಯಾ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ಡಾ.ಜಯಮಾಲ ಆಶಯ ನುಡಿ ಆಡಲಿದ್ದಾರೆ. ಶೋಷಣೆಯ ಛದ್ಮವೇಶಗಳು ಕುರಿತಂತೆ ಡಾ ಸಬಿಹಾ ಭೂಮಿ ಗೌಡ, ಸಮಾಕಾಲಿನ ಸಾಂಸ್ಕೃತಿಕ ರಾಜಕಾರಣ ವಿಷಯ ಕುರಿತು ಡಾ. ಎನ್.ಕೆ ಲೋಲಾಕ್ಷಿ, ಸ್ವ ಬಿಡುಗಡೆಯ ದಾರಿಗಳು ಕುರಿತಂತೆ ಡಾ.ಎಂ.ಎಸ್ ಅಶಾದೇವಿ ಅವರುಗಳು ವಿಷಯ ಮಂಡಿಸಲಿದ್ದಾರೆ.

ಗೋಷ್ಠಿ 5- ನವೆಂಬರ್ 25 ಬೆಳಿಗ್ಗೆ 11 ಗಂಟೆಗೆ ಕರ್ನಾಟಕ ಕೃಷಿ- ಸಂಕ್ರಮಣ ಸ್ಥಿತಿ ವಿಚಾರಗೋಷ್ಠಿ ನಡೆಯಲಿದ್ದು, ಮಾಜಿ ಕುಲಪತಿಯವರಾದ ಪ್ರೊ. ಬಿಸಿಲಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಪರ್ಯಾಯ ಕೃಷಿ ಮಾದರಿಗಳು ಮತ್ತು ಸಾಧ್ಯತೆಗಳು ಕುರಿತಂತೆ ಡಾ. ನಾರಾಯಣಗೌಡ, ಕೃಷಿ ಮಾರುಕಟ್ಟೆಯ ಸವಾಲುಗಳು ಕುರಿತಂತೆ ಡಾ.ಸಿದ್ದನ ಗೌಡ ಪಾಟೀಲ, ಬರ ನಿರ್ವಹಣೆಯ ಪಾಠಗಳು ಕುರಿತಂತೆ ಡಾ. ವಸಂತ ಕುಮಾರ್ ತಿಮಕಾಪುರ ಅವರುಗಳು ವಿಷಯ ಮಂಡಿಸಲಿದ್ದಾರೆ.

ಗೋಷ್ಠಿ 6- ನವೆಂಬರ್ 25 ಮಧ್ಯಾಹ್ನ 12.30 ಗಂಟೆಗೆ ಕನ್ನಡ ಸಂಶೋದನೆ ಮತ್ತು ವಿಮರ್ಶೆ ಕುರಿತು ವಿಚಾರಗೋಷ್ಠಿ ನಡೆಯಲಿದ್ದು, ಡಾ. ಬಿ. ಎ. ವಿವೇಕ ರೈ ಅದ್ಯಕ್ಷತೆ ವಹಿಸಲಿದ್ದಾರೆ, ಕನ್ನಡ ವಿಮರ್ಶೆ- ಹೊಸ ದೃಷ್ಟಿಕೊನ ಕುರಿತಂತೆ ಡಾ. ಕೇಶವ ಶರ್ಮಾ, ಕನ್ನಡ ಸಂಶೋದನೆ -ಹೊಸ ಆಶಕ್ತಿಗಳು ಕುರಿತಂತೆ ಡಾ.ಅಮರೇಶ ನುಗಡೋಣೆ, ಕನ್ನಡ ಸಂಶೋದನೆ- ಮುಂದಿನ ಹೆಜ್ಜೆಗಳು ಕುರಿತು ಡಾ. ಪುರುಷೋತ್ತಮ ಬಿಳಿಮಲೆ ಅವರುಗಳು ವಿಷಯ ಮಂಡಿಸಲಿದ್ದಾರೆ.

ಗೋಷ್ಠಿ 7- ನವೆಂಬರ್ 25 ಮಧ್ಯಾಹ್ನ 2.30 ಗಂಟೆಗೆ ಸಾಮಾಜಿಕ ನ್ಯಾಯ-ಕನ್ನಡ ಪರಂಪರೆ ವಿಷಯ ಕುರಿತು ವಿಚಾರಗೋಷ್ಠಿ ನಡೆಯಲಿದ್ದು, ಡಾ. ಸಿ ಎಸ್ ದ್ವಾರಕನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ಮೌಲಿಕ ಪರಂಪರೆಯಲ್ಲಿ ಸಾಮಾಜಿಕ ನ್ಯಾಯದ ನಿರೂಪಣೆ ಕುರಿತು ಡಾ.ಮಳಲಿ ವಸಂತ ಕುಮಾರ್, ಪ್ರಾಚೀನ ಹಾಗೂ ಮದ್ಯಕಾಲಿನ ಕಾವ್ಯ ಪರಂಪರೆಯಲ್ಲಿ ಸಾಮಾಜಿಕ ನ್ಯಾಯ ಕುರಿತಂತೆ ಕೆ.ವೈ ನಾರಾಯಣ ಸ್ವಾಮಿ, ಅಧುನಿಕ ಕನ್ನಡ ಸಾಹಿತ್ಯ ಹಾಗೂ ಸಾಮಾಜಿಕ ನ್ಯಾಯ ಕುರಿತಂತೆ ಡಾ. ಮೊಗಳ್ಳಿ ಗಣೇಶ ಅವರುಗಳು ವಿಷಯ ಮಂಡಿಸಲಿದ್ದಾರೆ.

ಸಂಜೆ 4.30 ಗಂಟೆಗೆ ಸನ್ಮಾನ ಸಮಾರಂಭ ಸನ್ಮಾನಿಸುವವರು ಮಾಜಿ ಪ್ರಧಾನ ಮಂತ್ರಿಗಳು ಹೆಚ್.ಡಿ ದೇವೇಗೌಡರು, ಹಿರಿಯ ಸಾಹಿತಿ ಡಾ. ಗೊ. ರು. ಚನ್ನಬಸಪ್ಪ ಆಶಯ ಭಾಷಣ ಮಾಡಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಮನು ಬಳಿಗಾರ್ ಅಧ್ಯಕ್ಷತೆ ವಹಿಸಲಿದ್ದಾರೆ.

ಗೋಷ್ಠಿ 8-ನವೆಂಬರ್ 26 ಭಾನುವಾರ ಬೆಳಿಗ್ಗೆ 9.30 ಗಂಟೆಗೆ ಸಮಕಾಲೀನ ಸಂದರ್ಭ : ಬಹುತ್ವದ ಸವಾಲುಗಳು ಕುರಿತು ವಿಚಾರಗೋಷ್ಠಿ ನಡೆಯಲಿದ್ದು, ಡಾ. ಕಾಳೇಗೌಡ ನಾಗವಾರ ಅವರು ಅಧ್ಯಕ್ಷತೆ ವಹಿಸುವರು. ನವರಾಷ್ಟ್ರೀಯತೆ ಧಾರ್ಮಿಕ ಮೂಲಭೂತ ವಾದ ವಿಷಯ ಕುರಿತು ಡಾ. ಪ್ರಧಾನ್ ಗುರುದತ್ತ, ಅಸಹಿಷ್ಣುತೆ ವಿಷಯ ವಿಸ್ತಾರ ವಿಷಯ ಕುರಿತು ಡಾ.ವೀರಣ್ಣ ದಂಡೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಬಿಕ್ಕಟ್ಟುಗಳ ಕುರಿತಾದ ಡಾ.ವಿನಯಾ ಒಕ್ಕುಂದ ಅವರುಗಳು ವಿಷಯ ಮಂಡನೆ ಮಾಡುವರು.

ಗೋಷ್ಠಿ 9-ನವೆಂಬರ್ 26 ಬೆಳಿಗ್ಗೆ 10 ಗಂಟೆಗೆ ಕವಿಗೋಷ್ಠಿ ನಡೆಯಲಿದೆ. ಅಧ್ಯಕ್ಷತೆಯನ್ನು ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ ಅವರು ವಹಿಸುವರು. ಡಾ.ಜಯಂತ್ ಕಾಯ್ಕಿಣಿ ಅವರು ಆಶಯ ನುಡಿ ಆಡುವರು. ಅನೇಕ ಕವಿ-ಕವಯತ್ರಿಯರು ಕವಿಗೋಷ್ಠಿಗೆ ಭಾಗವಹಿಸುವರು.

ಗೋಷ್ಠಿ 10- ನವೆಂಬರ್ 26 ಮಧ್ಯಾಹ್ನ 2 ಗಂಟೆಗೆ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಕಾರ್ಯಕ್ರಮ. ಕಾರ್ಯಕ್ರಮದ ನಿರ್ವಹಣೆ ಕಾ. ತ. ಚಿಕ್ಕಣ್ಣ ಅವರು ವಹಿಸಲಿದ್ದಾರೆ. ಬಹಿರಂಗ ಅಧಿವೇಶನ 3-30 ಗಂಟೆಗೆ ನಡೆಯಲಿದೆ. ಅಧ್ಯಕ್ಷತೆಯನ್ನು ಡಾ.ಮನು ಬಳಿಗಾರ್ ಅವರು ವಹಿಸುವರು.

ನವೆಂಬರ್ 26 ಸಂಜೆ 4-15 ಗಂಟೆಗೆ ಸಮಾರೋಪ ಸಮಾರಂಭಕ್ಕೆ ರಾಸಾಯನಿಕ ರಸಗೊಬ್ಬರ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಅನಂತಕುಮಾರ್ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಚಿವರಾದ ಹೆಚ್.ಕೆ. ಪಾಟಿಲ್ ಅವರು ಗೌರವ ಅತಿಥಿಗಳಾಗಿ ಭಾಗವಹಿಸುವರು. ಹಿರಿಯ ಸಾಹಿತಿಗಳಾದ ಡಾ.ಹೆಚ್.ಎಸ್ ವೆಂಕಟೇಶ್ ಮೂರ್ತಿ ಅವರು ಸಮರೋಪ ಭಾಷಣವನ್ನು ಮಾಡುವರು.

ಇದಲ್ಲದೆ ಶತಮಾನೋತ್ಸವ ಭವನ, ಕಲಾಮಂದಿರ, ಪುರಭವನ, ಚಿಕ್ಕಗಡಿಯಾರ, ಅಂಜನೇಯ ದೇಗುಲದಲ್ಲಿ ಗೋಷ್ಟಿಗಳು, ನಾಟಕಗಳು, ಚರ್ಚೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಾಂಸ್ಕೃತಿಕ ಹಬ್ಬಕ್ಕೆ ಸಾಂಸ್ಕೃತಿಕ ನಗರಿ ಸಂಪೂರ್ಣ ಸಜ್ಜಾಗಿದೆ.