Home Local ಉಡುಪಿಯಲ್ಲಿ ಇಂದಿನಿಂದ ಮೂರು ದಿವಸ ಆಯೋಜಿಸಿರುವ ಧರ್ಮ ಸಂಸದ್​​ಗೆ ಚಾಲನೆ.

ಉಡುಪಿಯಲ್ಲಿ ಇಂದಿನಿಂದ ಮೂರು ದಿವಸ ಆಯೋಜಿಸಿರುವ ಧರ್ಮ ಸಂಸದ್​​ಗೆ ಚಾಲನೆ.

SHARE

ಉಡುಪಿ: ಉಡುಪಿಯಲ್ಲಿ ಇಂದಿನಿಂದ ಮೂರು ದಿವಸ ಆಯೋಜಿಸಿರುವ ಧರ್ಮ ಸಂಸದ್​​ಗೆ ಚಾಲನೆ ಸಿಕ್ಕಿದೆ. ದೀಪ ಬೆಳಗಿಸುವ ಮೂಲಕ ಧರ್ಮ ಸಂಸದ್​ಗೆ ಆರ್​ಎಸ್ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಚಾಲನೆ ನೀಡಿದರು.

ಮೊದಲ ದಿನದ ಧರ್ಮ ಸಂಸದ್​ನಲ್ಲಿ ಪೇಜಾವರಶ್ರೀ, ಆದಿಚುಂಚನಗಿರಿಶ್ರೀ, ಸುತ್ತೂರುಶ್ರೀ, ಡಾ.ಡಿ.ವೀರೇಂದ್ರ ಹೆಗ್ಗಡೆ, ಪ್ರವೀಣ್ ತೊಗಾಡಿಯಾ ಸೇರಿದಂತೆ ನೂರಾರು ಸ್ವಾಮೀಜಿಗಳ ವೇದಿಕೆಯಲ್ಲಿ ಉಪಸ್ಥಿತಿರಿದ್ದಾರೆ.

ಸಂಘ ಪರಿವಾರದ ಕಾರ್ಯಕರ್ತರು, ಸಾಧು ಸಂತರು ಸೇರಿದಂತೆ ಸಾವಿರಾರು ಮಂದಿ ಧರ್ಮಸಂಸದ್​​ನಲ್ಲಿ ಪಾಲ್ಗೊಂಡಿದ್ದಾರೆ.