Home Local ಅರ್ದಕ್ಕೆ ನಿಂತ ಕಾಮಗಾರಿ

ಅರ್ದಕ್ಕೆ ನಿಂತ ಕಾಮಗಾರಿ

SHARE

ಕುಮಟ ತಾಲೂಕಿನ ಕೋಡಕಣಿ ಗ್ರಾಮದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಕಟ್ಟಿಸಿದ  ಕೆ.ಎಸ್ ಆರ್.ಟಿ.ಸಿ ಬಸ್ ನಿಲ್ದಾಣವನ್ನು  ಒಡೆದು ಹಾಕಿದ್ದು ಯಾರ ಅನುಕೂಲಕ್ಕೂ ಬಾರದೇ ಇರುವಂತೆ ಮಾಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.ಆ ಬಸ್ ನಿಲ್ದಾಣ ದ ಜಾಗದಲ್ಲಿ ಅಂಗಡಿ ಕಟ್ಟುವ ಕಾಮಗಾರಿ ಪ್ರಗತಿಯಲ್ಲಿತ್ತು.ಆದರೆ ಆ ಕಾಮಗಾರಿಯನ್ನು ಅರ್ದಕ್ಕೆ ನಿಲ್ಲಿಸಿರುವುದು ಯಾವ ಕಾರಣಕ್ಕಾಗಿ ಎಂದು ತಿಳಿದು ಬಂದಿಲ್ಲ.ಇದನ್ನು ಒಡೆದು ಬಸ್ ನಿಲ್ದಾಣವು ಇಲ್ಲ ಅಂಗಡಿಯು ಇಲ್ಲದೇ ಹಾಗೇ ಹಾಳು ಮನೆಯಂತಾಗಿದೆ.
ಮೂರು ವರ್ಷದ ಹಿಂದೆ ಈ ಕಾಮಗಾರಿ ಪ್ರಾರಂಭ ಮಾಡಿದ್ದು ಇನ್ನು ವರೆಗೂ ಮುಗಿದಿಲ್ಲ,ಪಂಚಾಯತ ಈ ಜಾಗದಲ್ಲಿ ಆದಷ್ಟು ಬೇಗ ಜನರಿಗೆ ಉಪಕಾರವಾಗುವಂತೆ ಗ್ರಂತಾಲಯದ ವ್ಯವಸ್ಥೆ ಅಥವಾ ಬದಲಿ ವ್ಯವಸ್ಥೆಯನ್ನು ಯನ್ನು ಮಾಡಿಕೊಟ್ಟರೆ ಉಪಕಾರವಾಗಬಹುದೆಂಬುದು ಊರ ಜನರ ಮಾತಾಗಿದೆ.
ಆದಷ್ಟು ಬೇಗ ಇದಕ್ಕೆ ಸಂಭಂದ ಪಟ್ಟ ಅಧಿಕಾರಿಗಳು ಈ ಕಾಮಗಾರಿ ಪೂರ್ಣಗೊಳಿಸಿ ಜನರ ಉಪಯೋಗಕ್ಕೆ ಸಿಗುವಂತೆ ಮಾಡಿಕೊಡಬೇಕಾಗಿದೆ.