Home Local ಕಾರವಾರ ಕರಾವಳಿ ಉತ್ಸವ 2017ಕ್ಕೆ ಬರುತ್ತಾರಾ ಬಾಲಿವುಡ್ ಸಿಂಗರ್ ಶಾಲ್ಮಲಿ ಕೊಳ್ಗಡೆ?

ಕಾರವಾರ ಕರಾವಳಿ ಉತ್ಸವ 2017ಕ್ಕೆ ಬರುತ್ತಾರಾ ಬಾಲಿವುಡ್ ಸಿಂಗರ್ ಶಾಲ್ಮಲಿ ಕೊಳ್ಗಡೆ?

SHARE

ಕಾರವಾರ: ಕರಾವಳಿ ಉತ್ಸವ 2017ಕ್ಕೆ ಭರದ ಸಿದ್ಧತೆಗಳು ನಡೆಯುತ್ತಿದ್ದು, ಡಿ.8 ರಿಂದ 10 ರವರೆಗೆ ಉತ್ಸವ ನಡೆಸಲು ಉದ್ದೇಶಿಸಲಾಗಿದೆ. ಮೊದಲ ದಿನ ಬಾಲಿವುಡ್ ಸಿಂಗರ್ ಶಾಲ್ಮಲಿ ಕೊಳ್ಗಡೆ ಆಗಮಿಸುವ ಸಾಧ್ಯತೆ ಇದೆ.

ಸಿಂಗರ್ ಬೆನ್ನಿ ದಯಾಳ್ ಜೊತೆ ಅತ್ಯಂತ ರೋಚಕ ವೇದಿಕೆಗಳಲ್ಲಿ ಹಾಡಿರುವ ಶಾಲ್ಮಲಿ, ಸುಲ್ತಾನ್, ಪರೇಶಾನ್ ಅಲ್ಲದೆ ಅನೇಕ ಜನಪ್ರಿಯ ಹಾಡುಗಳನ್ನು ಹಾಡಿದ್ದಾರೆ. ಮೆರಾಥಾನ್ 2017 ಉದ್ಘಾಟನೆಗೆ ನಟಿ ಶೃತಿ ಹರಿಹರನ್ ಮತ್ತು ಸಂಯುಕ್ತಾ ಹೆಗಡೆಯನ್ನು ಕರೆಸಲು ಪ್ರಯತ್ನಗಳು ಸಾಗಿವೆ.

ಈ ಸಲ ಉತ್ಸವದಲ್ಲಿ ಪೇಂಟ್ ಬಾಲ್ ಎಂಬ ರೋಚಕ ಕ್ರೀಡೆಯನ್ನು ಮಾಲಾದೇವಿ ಕ್ರೀಡಾಂಗಣದಲ್ಲಿ ಉತ್ಸವದ ಮೂರು ದಿನ ಮುನ್ನ ಆಯೋಜಿಸಲು ಉದ್ದೇಶಿಸಲಾಗಿದೆ. ಬೆಂಗಳೂರು ಮತ್ತು ಗೋವಾ ಕಡೆ ಪ್ರವಾಸಿಗರು ಈ ಕ್ರೀಡೆಯನ್ನು ಮೋಜಿಗಾಗಿ ಆಡುವುದು ವಾಡಿಕೆ. ಯುದ್ಧದ ಮಾದರಿಯ ಈ ಕ್ರೀಡೆಯಲ್ಲಿ ಬಣ್ಣದ ಗುಂಡುಗಳನ್ನು ಎರಡು ತಂಡಗಳ ತಲಾ 7 ಜನ ಸದಸ್ಯರಿಗೆ ನೀಡಲಾಗುತ್ತದೆ. ಬಣ್ಣದ ಗುಂಡುಗಳನ್ನು 50 ಮೀಟರ್ ದೂರದಿಂದ ಎದುರಾಳಿ ತಂಡದ ಸದಸ್ಯರನ್ನು ಗುರಿಯಾಗಿಸಿ ಹಾರಿಸಬೇಕು. ಗುಂಡು ಎದುರಾಳಿ ಸದಸ್ಯನಿಗೆ ತಗುಲಿದಾಗ ಬಣ್ಣ ಗಾಳಿಯಲ್ಲಿ ಹರಡಿಕೊಳ್ಳುತ್ತದೆ. ಎದುರಾಳಿ ಹಾರಿಸುವ ಗುಂಡನ್ನು ತಪ್ಪಿಸಿಕೊಂಡು, ಎದುರಾಳಿಗಳ ಗಡಿ ತಲುಪಬೇಕು. ಪ್ರತಿ ಸದಸ್ಯರಿಗೆ 50 ಬಣ್ಣದ ಗುಂಡು ಹಾಗೂ ಗನ್ ನೀಡಲಾಗುತ್ತದೆ.