Home Important ನಾನು ಅನಂತ್ ಕುಮಾರ್ ಬಾಲವಾದರೆ, ಚಂಪಾ ಸಿಎಂ ಸಿದ್ದರಾಮಯ್ಯ ಬಾಲ!

ನಾನು ಅನಂತ್ ಕುಮಾರ್ ಬಾಲವಾದರೆ, ಚಂಪಾ ಸಿಎಂ ಸಿದ್ದರಾಮಯ್ಯ ಬಾಲ!

SHARE

ಮೈಸೂರು: ಸಾಹಿತಿ ಪ್ರೊ. ಚಂಪಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಲ. ಅವರಿಗೆ ಕನಿಷ್ಠ ಶಿಷ್ಟಾಚಾರ ಗೊತ್ತಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದರು.

ಸಂಸದ ಪ್ರತಾಪ್ ಸಿಂಹ, ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಬಾಲ ಎಂಬ ಚಂದ್ರಶೇಖರ್‌‌ ಪಾಟೀಲ್‌ ಅವರ ಹೇಳಿಕೆಗೆ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದ ಪ್ರತಾಪ್, ಸಮ್ಮೇಳನದಲ್ಲಿ ಯದುವಂಶದವರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ, ಭುವನೇಶ್ವರಿ ತಾಯಿಗೆ ಪೂಜೆ ಸಲ್ಲಿಸಿಲ್ಲ, ಮೈಸೂರು ಪೇಟ ತೊಡಲಿಲ್ಲ. ಈ ಮೂಲಕ ನಮ್ಮ ಭಾಗದ ಜನರಿಗೆ ಅಪಮಾನ ಮಾಡಿದ್ದೀರಿ ಎಂದು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ಬ್ಯಾಂಕಿಂಗ್ ವಲಯದ ಸಿ ಮತ್ತು ಡಿ ದರ್ಜೆಯ ನೌಕರಿಗಳ ನೇಮಕ ಪರೀಕ್ಷೆಯನ್ನು ಕನ್ನಡದಲ್ಲೇ ನಡೆಸಲು ಸಿದ್ಧ. ಈ ನಿಟ್ಟಿನಲ್ಲಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರೊಂದಿಗೆ ಮಾತನಾಡಿದ್ದೇನೆ. ಮೋದಿ ಸರ್ಕಾರ ಕನ್ನಡದ ಪರವಾಗಿಯೇ ಇರಲಿದೆ. ಸಮ್ಮೇಳನಾಧ್ಯಕ್ಷರಿಗೆ ಇದಕ್ಕಿಂತ ಸಂತೋಷದ ವಿಚಾರ ಬೇರೆ ಇರಲಿಲ್ಲ. ಪ್ರೊ.ಚಂಪಾ ಅವರ ಬದಲು ಯಾರೇ ಸಮ್ಮೇಳನಾಧ್ಯಕ್ಷರಾಗಿದ್ದರೂ ಈ ಬಗ್ಗೆ ಅನಂತಕುಮಾರ್ ಅವರನ್ನು ಅಭಿನಂದಿಸುತ್ತಿದ್ದರು ಎಂದು ಹೇಳಿದರು.