Home Health ತಕ್ಷಣವೇ ಹೊಟ್ಟೆಯ ಕೊಬ್ಬನ್ನು ಕರಗಿಸಲು ಹೀಗೆ ಮಾಡಿ

ತಕ್ಷಣವೇ ಹೊಟ್ಟೆಯ ಕೊಬ್ಬನ್ನು ಕರಗಿಸಲು ಹೀಗೆ ಮಾಡಿ

SHARE

ಸ್ಥೂಲಕಾಯ ಇಂದು ವಿಶ್ವದಾದ್ಯಂತ ಕಾಡುತ್ತಿದ್ದು ವಿಶೇಷವಾಗಿ ಸೊಂಟದಲ್ಲಿ ತುಂಬಿರುವ ಹಾಗೂ ಹೊಟ್ಟೆಯ ಕೊಬ್ಬನ್ನು, ಕರಗಿಸುವುದೇ ಹೆಚ್ಚಿನವರ ಚಿಂತೆಯಾಗಿದೆ. ನಮ್ಮ ದೇಹದಲ್ಲಿ ಮೊದಲಾಗಿ ಸೊಂಟದ ಸುತ್ತ ಕೊಬ್ಬು ಸಂಗ್ರಹಿಸಲು ಪ್ರಾರಂಭವಾದರೂ ಬಳಸಿಕೊಳ್ಳುವಾಗ ಮಾತ್ರ ಈ ಕೊಬ್ಬನ್ನು ಕಟ್ಟ ಕಡೆಯದಾಗಿ ದೇಹ ಬಳಸುವ ಕಾರಣದಿಂದ ಇದನ್ನು ಕರಗಿಸುವುದು ಅಷ್ಟು ಸುಲಭವಲ್ಲ. ಅದರಲ್ಲೂ ಕೊಂಚವೇ ಬಿಗಿಯಾದ ಬಟ್ಟೆಗಳನ್ನು ಧರಿಸಿದರೂ ಸ್ಪಷ್ಟವಾಗಿ ಕಾಣುವ ಹೊಟ್ಟೆಯ ಗಾತ್ರ ಸಹಜ ಸೌಂದರ್ಯವನ್ನು ಅಳಿಸುವುದರ ಜೊತೆಗೇ ಕೆಲವಾರು ಆರೋಗ್ಯಕರ ತೊಂದರೆಗಳ ಸಾಧ್ಯತೆಯನ್ನೂ ಹೆಚ್ಚಿಸುತ್ತದೆ. ಈ ಕೊಬ್ಬನ್ನು visceral fat ಎಂದು ಕರೆಯುತ್ತಾರೆ.

ಈ ಕೊಬ್ಬು ಹೆಚ್ಚಿದ್ದಷ್ಟೂ ಹೃದಯ ಸ್ತಂಭನ, ಬುದ್ಧಿಮಾಂದ್ಯತೆ, ಪಾರ್ಶ್ವವಾಯು ಮೊದಲಾದ ಕೆಲವಾರು ತೊಂದರೆಗಳು ಆವರಿಸುವ ಸಾಧ್ಯತೆ ಹೆಚ್ಚುತ್ತಾ ಹೋಗುತ್ತದೆ. ಆದ್ದರಿಂದ ಹೊಟ್ಟೆಯ ಕೊಬ್ಬನ್ನು ಕರಗಿಸಿ ಸೂಕ್ತವಾದ ದೇಹದ ತೂಕವನ್ನು ಪಡೆಯುವುದು ಸೌಂದರ್ಯದ ದೃಷ್ಟಿಯಿಂದ ಮಾತ್ರವಲ್ಲ, ಆರೋಗ್ಯದ ದೃಷ್ಟಿಯಿಂದಲೂ ಅನಿವಾರ್ಯ.

ನಮ್ಮಲ್ಲಿ ಹೆಚ್ಚಿನವರು ಹೊಟ್ಟೆ ಕರಗಬೇಕು ಎಂದು ಬಯಸುತ್ತಾರೆಯೇ ವಿನಃ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವುದಿಲ್ಲ. ಬೆರಳೆಣಿಕೆಯಷ್ಟು ಜನರು ಈ ಬಗ್ಗೆ ಕೊಂಚ ದಿನ ವ್ಯಾಯಾಮ, ಜಿಮ್, ಏರೋಬಿಕ್ಸ್, ಯೋಗ ಎಂದೆಲ್ಲಾ ಹಾರಾಡಿ ನಾಲ್ಕು ದಿನದ ಬಳಿಕ ಮತ್ತೆ ಎಲ್ಲಕ್ಕೂ ಚಕ್ಕರ್ ಹಾಕುವವರಾಗಿದ್ದಾರೆ. ಉಳಿದ ಕೆಲವು ಜನರು ಮಾತ್ರವೇ ತಮ್ಮ ತೂಕ ಇಳಿಸುವ ಪ್ರಯತ್ನಗಳನ್ನು ಸತತವಾಗಿಸುತ್ತಾರೆ. ಆದರೆ ಯಾವುದೇ ಪ್ರಯತ್ನದ ಜೊತೆಗೇ ಸೂಕ್ತ ಆಹಾರ ಹಾಗೂ ಆರೋಗ್ಯಕರ ಜೀವನಕ್ರಮವನ್ನು ಅಳವಡಿಸಿಕೊಂಡರೆ ಮಾತ್ರವೇ ಈ ಪ್ರಯತ್ನಗಳು ಸಫಲವಾಗುತ್ತವೆ. ಆದ್ದರಿಂದ ವ್ಯಾಯಾಮದ ಜೊತೆಗೇ ಕೊಬ್ಬನ್ನು ಹೆಚ್ಚು ಬಳಸುವ ಆಹಾರಗಳನ್ನು ಸೇವಿಸುವುದು ಹಾಗೂ ಕೊಬ್ಬನ್ನು ಹೆಚ್ಚಿಸುವ ಆಹಾರಗಳನ್ನು ವರ್ಜಿಸುವುದು ಜಾಣತನದ ಕ್ರಮ. ಈ ಕಾರ್ಯದಲ್ಲಿ ನೆರವಾಗುವ ಕೆಲವು ಆಹಾರಗಳನ್ನು ಇಂದು ಸಂಗ್ರಹಿಸಲಾಗಿದ್ದು ಇವುಗಳನ್ನು ನಿಮ್ಮ ನಿತ್ಯದ ಆಹಾರಗಳನ್ನಾಗಿಸುವ ಮೂಲಕ ಕ್ಷಿಪ್ರ ಸಮಯದಲ್ಲಿಯೇ ಸೊಂಟದ ಕೊಬ್ಬನ್ನು ಇತಿಹಾಸವಾಗಿಸಬಹುದು…

ಲಿಂಬೆ ರಸವನ್ನು ಕುಡಿಯಿರಿ ಕೊಬ್ಬು ಸಂಗ್ರಹವಾಗಲು ನಮ್ಮ ಯಕೃತ್ (liver) ಆಯಾಸಗೊಂಡಾಗ ಪೂರ್ಣಪ್ರಮಾಣದಲ್ಲಿ ಕೊಬ್ಬನ್ನು ಜೀರ್ಣಿಸಿಕೊಳ್ಳಲು ಅಸಮರ್ಥವಾಗಿ ಹೆಚ್ಚಿನ ಕೊಬ್ಬು ಸಂಗ್ರಹವಾಗುತ್ತಾ ಹೋಗುತ್ತದೆ. ಲಿಂಬೆರಸದ ಸೇವನೆಯಿಂದ ದೇಹದಲ್ಲಿ ಹಲವು ಎಂಜೈಮ್ ಅಥವಾ ಕಿಣ್ವಗಳ ಪ್ರಮಾಣವನ್ನು ಹೆಚ್ಚಿಸಿ ಯಕೃತ್ ನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಕೊಬ್ಬು ಜೀರ್ಣಗೊಂಡು ಸಂಗ್ರಹವಾಗಬಹುದಾಗಿದ್ದ ಕೊಬ್ಬನ್ನು ತಡೆದಂತಾಗುತ್ತದೆ. ಅತ್ತ ಇತರ ದೈಹಿಕ ಚಟುವಟಿಕೆಗಳ ಮೂಲಕ ಕೊಬ್ಬು ಕರಗತೊಡಗುತ್ತದೆ.

ಬಳಕೆಯ ವಿಧಾನ *ಪ್ರತಿದಿನ ಬೆಳಿಗ್ಗೆ ಎದ್ದ ಬಳಿಕ ಪ್ರಥಮವಾಗಿ ಲಿಂಬೆ ಹಣ್ಣಿನ ರಸ ಸೇರಿಸಿದ ನೀರು ಕುಡಿಯಿರಿ. *ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಚಿಕ್ಕದಾದರೆ ಒಂದು, ದೊಡ್ಡದಾದರೆ ಅರ್ಧ ಲಿಂಬೆಯ ರಸವನ್ನು ಸೇರಿಸಿ. ಉಗುರು ಬೆಚ್ಚನೆಯ ನೀರು ಲಭ್ಯವಿಲ್ಲದಿದ್ದರೆ ಸಾಮಾನ್ಯ ತಾಪಮಾನದಲ್ಲಿರುವ ನೀರನ್ನು ಸಹಾ ಬಳಸಬಹುದು. ಆದರೆ ಐಸ್ ಸೇರಿಸಿದ ಅಥವಾ ಫ್ರಿಜ್ಜಿನ ನೀರು ಬೇಡ. *ನಂತರ ನಿಮ್ಮ ದೈನಂದಿನ ವ್ಯಾಯಾಮಗಳನ್ನು ಮಾಡಿ. ಕನಿಷ್ಟ ಮುಕ್ಕಾಲು ಗಂಟೆಯವರೆಗೆ ಬೇರೇನನ್ನೂ ಸೇವಿಸಬೇಡಿ. *ಅತ್ಯಂತ ಆಯಾಸ ಅನ್ನಿಸಿದರೆ ಮಾತ್ರ ಅರ್ಧಗಂಟೆಯ ಬಳಿಕ ಕೊಂಚ ನೀರು ಕುಡಿಯಬಹುದು. ಇದರೊಂದಿಗೆ ಕೊಂಚ ಜೇನನ್ನೂ ಸೇರಿಸಬಹುದು.