Home Important ಪ್ರಧಾನಿ ಚರ್ಮ ಸುಲಿಸುತ್ತೇವೆ: ಲಾಲು ಪುತ್ರ ತೇಜ್‌ ಪ್ರತಾಪ್‌

ಪ್ರಧಾನಿ ಚರ್ಮ ಸುಲಿಸುತ್ತೇವೆ: ಲಾಲು ಪುತ್ರ ತೇಜ್‌ ಪ್ರತಾಪ್‌

SHARE

ನವದೆಹಲಿ: ‘ಲಾಲೂ ಜೀ ಹೆಚ್ಚು ಪ್ರಯಾಣದಲ್ಲಿರುತ್ತಾರೆ. ಅವರಿಗೆ ನೀಡಲಾಗಿರುವ ಭದ್ರತೆ ಕಡಿತಗೊಳಿಸಿರುವುದರಿಂದ ಯಾವುದೇ ಅಹಿತಕರ ಘಟನೆ ನಡೆದರೆ, ನಾವು ಪ್ರಧಾನಿ ಮೋದಿ ಅವರ ಚರ್ಮ ಸುಲಿಯುವಂತೆ ಮಾಡುತ್ತೇವೆ’ ಎಂದು ಲಾಲೂ ಪುತ್ರ ತೇಜ್‌ ಪ್ರತಾಪ್ ಸೋಮವಾರ ಕಿಡಿಕಾರಿದ್ದಾರೆ.

ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರಿಗೆ ನೀಡಿದ್ದ ‘ಝಡ್ ಪ್ಲಸ್’ ಹಾಗೂ ವಿಐಪಿ ಭದ್ರತೆಯನ್ನು (ಎನ್‌ಎಸ್‌ಜಿ ಕಮಾಂಡೊ) ಕೇಂದ್ರ ಸರ್ಕಾರ ವಾಪಸ್ ಪಡೆದ ಹಿನ್ನೆಲೆಯಲ್ಲಿ ತೇಜ್‌ ಪ್ರತಾಪ್‌ ಕೇಂದ್ರ ಸರ್ಕಾರದ ನಡೆಯನ್ನು ವಿರೋಧಿಸಿದ್ದಾರೆ.

‘ತನ್ನ ತಂದೆಗೆ ಯಾವುದೇ ರೀತಿ ತೊಂದರೆಯಾದರೆ ಪ್ರಧಾನಿಯವರ ಚರ್ಮ ಸುಲಿಸದೆ ಬಿಡುವುದಿಲ್ಲ…ಹೋಗಿ ಹೇಳಿ ಅವರಿಗೆ’ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.