Home Local ನೂತನ ಒಕ್ಕೂಟದ ಪದಗ್ರಹಣ ಸಮಾರಂಭ ಸಂಪನ್ನ.

ನೂತನ ಒಕ್ಕೂಟದ ಪದಗ್ರಹಣ ಸಮಾರಂಭ ಸಂಪನ್ನ.

SHARE

ಹೊನ್ನಾವರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೊನ್ನಾವರ ಭಟ್ಕಳ ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ, ಪ್ರಗತಿಬಂಧು ಸ್ವಸಹಾಯ ಸಂಘಗಳ ಹೊನ್ನಾವರ ಇವರ ಸಂಯುಕ್ತ ಆಶ್ರಯದಲ್ಲಿ ವಲಯ ಮಟ್ಟದ ಸಾಮೂಹಿಕ ಶ್ರೀ ಸತ್ಯ ನಾರಾಯಣ ಕಾರ್ಯಕ್ರಮ ಹಾಗೂ ಹೊನ್ನಾವರ , ಕಾಸರಕೊಡ್ ವಿಭಾಗದ ಒಕ್ಕೂಟಗಳ ಪದಗ್ರಹಣ ಸಮಾರಂಭ ಇಂದು ಮೂಡಗಣಪತಿ ಸಭಾಭವನ ಹೊನ್ನಾವರದಲ್ಲಿ ನಡೆಯಿತು.

ನೂತನ ಒಕ್ಕೂಟದ ಪದಗ್ರಹಣ ಸಮಾರಂಭಕ್ಕೆ ಶ್ರೀ ಕ್ಷೇತ್ರ ಬಂಗಾರಮಕ್ಕಿ ವೀರಾಂಜನೇಯ ದೇವಸ್ಥಾನದ ಧರ್ಮಾಧಿಕಾರಿಗಳು ಆದ ಮಾರುತಿ ಗುರೂಜಿಯವರು ದಿವ್ಯ ಉಪಸ್ಥಿತಿ ವಹಿಸಿದ್ದು ಆಶೀರ್ವಚನ ನೀಡಿದರು.

ಈ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ವಿ.ಆರ್. ಗೌಡ, ಹಿರಿಯ ಪತ್ರಕರ್ತರಾದ ಜಿ.ಯು.ಭಟ್, ಶಿವರಾಜ್ ಮೇಸ್ತ, ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪದಾಧಿಕಾರಿಗಳು ಉಪಸ್ಥಿತಿದ್ದರು.