Home Local ಕುಮಟಾದ ಅಬಾಕಸ್ ಮೆಮೊರಿ ಕ್ಲಾಸ್ ವಿದ್ಯಾರ್ಥಿಗಳ ಸಾಧನೆ.

ಕುಮಟಾದ ಅಬಾಕಸ್ ಮೆಮೊರಿ ಕ್ಲಾಸ್ ವಿದ್ಯಾರ್ಥಿಗಳ ಸಾಧನೆ.

SHARE

ಕುಮಟಾ: ಇಲ್ಲಿನ ಅಬಾಕಸ್ ಮೆಮೊರಿ ಕ್ಲಾಸ್ ನ 13ಜನ ವಿದ್ಯಾರ್ಥಿಗಳು ಕಾರವಾರದಲ್ಲಿ ನಡೆದ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದಾರೆ.

ಕಾರವಾರದಲ್ಲಿ ನಡೆದ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಅನಿಶಾ ಶೆಟ್ಟಿ, ಅನುಶ್ರೀ ಬಿ. ಶ್ರೀನಂದಾ ದಿಂಡೆ,ಹರ್ಷಿತಾ ನಾಯ್ಕ, ಅಯನ ಭಟ್, ನಿಶಾ ನಾಯ್ಕ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಜೀವಿತಾ ಶೆಟ್ಟಿ, ಸಮೀಕ್ಷಾ ಜೈನ್, ಕಾವ್ಯಾ ಜೆ ನಾಯ್ಕ, ಶ್ರೇಯಾ ಆರ್ ನಾಯ್ಕ, ಭೂಮಿಕಾ ಗೌಡಾ, ಜೀವನ ಶೆಟ್ಟಿ, ಶ್ರೀರಾಮ ನಾಯ್ಕ ಮೂರನೇ ಸ್ಥಾನ ಪಡೆದಿದ್ದಾರೆ.

ಈ ಎಲ್ಲ ವಿದ್ಯಾರ್ಥಿಗಳು ಶಿಕ್ಷಕಿ ಶ್ರೀಮತಿ ದೀಪಾ ಶೆಟ್ಟಿಯವರ ಕೈಗರಡಿಯಲ್ಲಿ ಪಳಗಿದ್ದಾರೆ. ಇವರಿಗೆ ಶಿಕ್ಷಕಿ ಹಾಗೂ ಪ್ರಾಂಚಸಿ ಜಯಶ್ರೀ ಶೆಟ್ಟಿಯವರು ಶುಭ ಹಾರೈಸಿದ್ದಾರೆ.