Home Information ಸಾಗರದಲ್ಲಿ ರಾಮಪದ ಕಾರ್ಯಕ್ರಮ.

ಸಾಗರದಲ್ಲಿ ರಾಮಪದ ಕಾರ್ಯಕ್ರಮ.

SHARE

ರಾಘವೇಶ್ವರ ಸಭಾಭವನದಲ್ಲಿ “ರಾಮಪದ”

ಪ್ರತೀ ಏಕಾದಶಿಯ ದಿನ ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ನಡೆಸುತ್ತಿರುವ “ರಾಮಪದ” ಅಪೂರ್ವ ಯಶಸ್ಸಿನೊಂದಿಗೆ ಮತ್ತೆ ಮತ್ತೆ ಸಂಘಟನೆಗೊಳ್ಳುತ್ತಿದೆ.

ದಿನಾಂಕ 05-06-2017 ಸೋಮವಾರ ಸಾಗರದ ಶ್ರೀ ರಾಘವೇಶ್ವರ ಸಭಾಭವನದಲ್ಲಿ ಈ ರಾಮ ಪದ ಕಾರ್ಯಕ್ರಮ ಸಂಯೋಜನೆಗೊಂಡಿದೆ.

ಶ್ರೀ ಸಂಸ್ಥಾನದವರು ಹಾಗೂ ಶಿಷ್ಯರು ರಾಮಪದ ಹಾಡುವ ಹಾಗೂ ರಾಮನ ಕುರಿತಾಗಿ ಮಾತಾಡುವ ಈ ಕಾರ್ಯಕ್ರಮ ಆಧ್ಯಾತ್ಮಿಕ ಲೋಕವನ್ನೇ ಸೃಷ್ಟಿ ಮಾಡುತ್ತಿರುವುದು ಇದರ ಹೆಗ್ಗಳಿಕೆ.

ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಬನ್ನಿ ಸಾಗರಕೆ;
ಮಾಡೋಣ ಕರುಣಾಸಾಗರನ ಸ್ಮರಣೆ; ಮುಳುಗೇಳೋಣ ಆನಂದಸಾಗರದಲ್ಲಿ!
ದಾಟೋಣ ದುಸ್ತರ ಭವಸಾಗರವ! ಎಂಬುದಾಗಿ ಎಲ್ಲರನ್ನೂ ಆಹ್ವಾನಿಸಲಾಗಿದೆ.