Home Local ಶ್ರಿ ಕೃಷ್ಣ ಶೇಷ್ಠ ಮನಃಶಾಸ್ತ್ರಜ್ಞ: ಡಾ|| ವಿ.ಕೆ ಹಂಪಿಹೋಳಿ

ಶ್ರಿ ಕೃಷ್ಣ ಶೇಷ್ಠ ಮನಃಶಾಸ್ತ್ರಜ್ಞ: ಡಾ|| ವಿ.ಕೆ ಹಂಪಿಹೋಳಿ

SHARE

ಕುಮಟಾ : ಪ್ರತಿಯೊಬ್ಬನಲ್ಲೂ ಒಂದೊಂದು ಪ್ರತಿಭೆಯಿದೆ .ತನ್ನಲ್ಲಿಯ ಪ್ರತಿಭೆಯನ್ನು ಗುರುತಿಸಿಕೊಂಡು ಅದನ್ನು ಬೆಳೆಸಿಕೊಳ್ಳಬೇಕು .ಅದನ್ನ ಬಿಟ್ಟು ಮತ್ತೋಬ್ಬರ ಪ್ರತಿಭೆ ಕಂಡು ಹೊಟ್ಟೆಕಿಚ್ಚು ಪಡಬಾರದು,ಹತಾತೆ,ನಿರಾಶೆ,ಕುಗ್ಗುವಿಕೆ ಹೊಂದಬಾರದು ,ನಮ್ಮ ಪ್ರತಿಭೆಯನ್ನು ಗುರುತಿಸಿ ಬೆಳೆಸಿ ಪೋಷಿಬೇಕು ಎಂದು ನಿವೃತ್ತ ಪ್ರಾಚಾರ್ಯರಾದ ಡಾ|| ವಿ.ಕೆ ಹಂಪಿಹೋಳಿಯವರು ಹೇಳಿದರು.

ಅವರು ಕುಮಟಾ ಹನುಮಂತ ಬೆಣ್ಣ್ಣೆ ಸರಕಾರಿ ಪದವಿ ಪೂರ್ವ ಕಾಲೆಜು ನೆಲ್ಲಿಕೇರಿಯಲ್ಲಿ ನಡೆದ “ಗೀತಾಜಯಂತಿ” ಯ ನಿಮಿತ್ತ ಭಗವದ್ಗೀತೆಯ 6ನೇ ಅಧ್ಯಾಯವಾದ ಆತ್ಮಸಂಯಮ ಯೋಗದ “ಉದ್ದರೇತ್ ಆತ್ಮನಾಆತ್ಮಾನಂ ಆತ್ಮಾನಂ ಅವಸಾದಯೇತ್ ಎನ್ನುವ ಶ್ಲೋಕದ ಮೇಲೆ ಉಪನ್ಯಾಸ ಗೈಯುತ್ತಾ ನಮ್ಮ ಉದ್ಧಾರವನ್ನು ನಾನೇ ಮಾಡಿಕೊಳ್ಳಬೇಕು ,ಸ್ವತಃ ತಾನು ಪ್ರಯತ್ನ ಪಟ್ಟರೆ ಮಾತ್ರ ಏಳ್ಗೆ ಹೊಂದುತ್ತಾರೆ ಬೇರೆಯವರು ಎಷ್ಟೇ ದೂಡಿದರೂ ಅದು ಪ್ರಯೋಜನವಿಲ್ಲ. ನಾವು ಪ್ರಯತ್ನ ಶೀಲರಾಗಬೇಕು ನಾವು ಕ್ರಮಿಸಬೇಕು ಆಗ ಮಾತ್ರ ನಮಗೆ ಜಯಸಿಗಲು ಸಾಧ್ಯ.ಈ ಎಲ್ಲಾ ವಿಷಯಗಳನ್ನು ಹೇಳಿದ ಶ್ರಿ ಕೃಷ್ಣ ಶೇಷ್ಠ ಮನಃಶಾಸ್ತ್ರಜ್ಞ ಎಂದು ಸೂಕ್ತ ಉದಾಹಣೆಯೊಂದಿಗೆ ಹೇಳಿದರು.
ಕಾರ್ಯಕ್ರಮದ ಅಧಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸತೀಶ ಬಿ ನಾಯ್ಕ ವಹಿಸಿ,ಭಗವದ್ಗೀತೆ ವೈಜ್ಞಾನಿಕ ತಳಹದಿಯನ್ನು ಹೊಂದಿದ್ದು,ಉತ್ತಮ ಮನಃಶಾಸ್ತ್ರವಾಗಿದೆ.ನಮ್ಮಲ್ಲಿಯ ಸಮಸ್ಯೆಗಳಿಗೆ ಭಗವದ್ಗೀತೆಯಲ್ಲಿ ಪರಿಹಾರವಿದೆ ಎಂದರು.

ಕಾಲೇಜಿನ ರಸಾಯನ ಶಾಸ್ತ್ರ ಹಿರಿಯ ಉಪನ್ಯಾಸಕರಾದ ಶ್ರೀ ಆರ್.ಟಿ.ನಾಯಕ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ರಸಾಯನ ಶಾಸ್ತ್ರ ಉಪನ್ಯಾಸಕ ಶ್ರೀ ಆನಂದ ವಾಯ್ ನಾಯ್ಕ ಸ್ವಾಗತಿಸಿದರು,ಕನ್ನಡ ಉಪನ್ಯಾಸಕಿ ಶ್ರೀಮತಿ ಲತಾ ಎನ್ ನಾಯ್ಕ ಧನ್ಯವಾದ ಸಮರ್ಪಿಸಿದರು.ಸಂಸ್ಕøತ ಉಪನ್ಯಾಸಕ ಶ್ರೀ ಗಣೇಶ ಭಟ್ಟ ಕಾರ್ಯಕ್ರಮ ನಿರೂಪಿಸಿದರು.