Home Local ಗೋಕರ್ಣ ಪಂಚಾಯತಿ ವತಿಯಿಂದ ಪ್ರಾರಂಭಗೊಂಡಿದೆ ತೆರವುಕಾರ್ಯ.

ಗೋಕರ್ಣ ಪಂಚಾಯತಿ ವತಿಯಿಂದ ಪ್ರಾರಂಭಗೊಂಡಿದೆ ತೆರವುಕಾರ್ಯ.

SHARE

ಗೋಕರ್ಣ:ಪಂಚಾಯತಿ ವತಿಯಿಂದ ಇಲ್ಲಿನ ಮುಖ್ಯ ರಸ್ತೆಯ ಗಟಾರದ ಮೇಲಿನ ಅತಿಕ್ರಮಣಗಳನ್ನು ಗುರುವಾರದಿಂದ ತೆರವುಕಾರ್ಯ ಪ್ರಾರಂಭಗೊಂಡಿದೆ. ಮೇಲಿನ ಕೇರಿಯಿಂದ ರಥಬೀದಿ ವರೆಗೆ ತೆರವು ಕಾರ್ಯ ಮುಗಿದಿದ್ದು . ಇನ್ನು ಕೆಲವು ದಿನ ನಡೆಯಲಿದೆ ಎಂದು ತಿಳಿದುಬಂದಿದೆ. ಕಾರ್ಯಾಚರಣೆ ಸುದ್ದಿ ತಿಳಿಯುತ್ತಿದ್ದಂತೆಕೆಲ ಅಂಗಡಿಕಾರರು ಸ್ವತಃ ಗಟಾರ ಮೇಲಿನ ಜಾಗೆಯನ್ನು ಖುಲ್ಲಾಪಡಿಸಿದರು.ಕೆಲವರು ಗಟಾರದ ಮೇಲೆ ನಿರ್ಮಿಸಿಕೊಂಡ ಕಟ್ಟೆ, ಮೆಟ್ಟಿಲು ಮುಂತಾದವುಗಳನ್ನು ಪಂಚಾಯತಿ ಸಿಬ್ಬಂದಿ ಒಡೆದು ಹಾಕಿದರು. ಲೋಕೋಪಯೋಗಿ ಇಲಾಖೆ ಊರ ಪ್ರವೇಶ ದ್ವಾರದಿಂದ ಸಮುದ್ರದ ವರೆಗೆ ಹೊಸದಾಗಿ ರಸ್ತೆ ನಿರ್ಮಿಸಲಿದ್ದು ಅದಕ್ಕೆ ಅನುಕೂಲವಾಗಲು ಈ ತೆರವು ಕಾರ್ಯ ನಡೆಸಲಾಗುತ್ತಿದೆ.

ರಥಬೀದಿಯಲ್ಲಿ ಮಹಾರಥ ಸಂಚಾರಕ್ಕೆ ಅನುಕೂಲವಾಗುವಂತೆ ಭದ್ರವಾದ ಸಿಮೆಂಟ್ ರಸ್ತೆಗೆ ಯೋಜನೆ ರೂಪಿಸಲಾಗಿದೆ. ಉಳಿದ ಕಡೆ ಡಾಂಬರೀಕರಣ ಮತ್ತು ಗಟಾರವನ್ನು ಯಾರೂ ಮತ್ತೆ ಅತಿಕ್ರಮಿಸದಂತೆ ತಡೆಯಲು ಮೇಲ್ಭಾಗಕ್ಕೆ ಬ್ಲಾಕ್‍ಗಳನ್ನು ಅಳವಡಿಸಲಾಗುವುದು. ಇದರ ನಂತರ ಏಕಮುಖ ಸಂಚಾರ ರಸ್ತೆಯಲ್ಲಿಯೂ ಇದೇ ರೀತಿಯ ಕಾರ್ಯಾಚರಣೆ ಕೈಗೊಂಡು ರಸ್ತೆಯ ಎರಡೂ ಕಡೆ ಬ್ಲಾಕ್ ಹಾಕಲಾಗುವುದಾಗಿ ಪಂಚಾಯತಿ ವತಿಯಿಂದ ತಿಳಿದು ಬಂದಿದೆ. ಇದರ ಸಂಗಡ ಬಂಗ್ಲೆಗುಡ್ಡದ ಜನತಾ ಪ್ಲಾಟ್‍ನಲ್ಲಿರುವ ಕುಡಿಯುವ ನೀರು ಯೋಜನೆಗೆ ಮೀಸಲಿಟ್ಟ ಜಾಗೆಯಲ್ಲಿ ಅನಧಿಕೃತವಾಗಿ ಕಟ್ಟಲಾಗುತ್ತಿದ್ದ ಅಂಗಡಿಯನ್ನು ಕೂಡ ಖುಲ್ಲಾ ಪಡಿಸಲಾಯಿತು.

ಈ ಬಗ್ಗೆ ಸ್ಥಳೀಯ ಕೆಲವರನ್ನು ಮಾತನಾಡಿಸಿದಾಗ ರಸ್ತೆ ಗಟಾರದ ಮೇಲೆ ತೆರವುಗೊಳಿಸದಂತೆ ರಸ್ತೆಂiÀಮೇಲೆ ನಿಲ್ಲುವ ಟಾಕ್ಸಿ ಸ್ಟಾಂಡ, ಮತ್ತು ರಿಕ್ಷಾ ಸ್ಟಾಂಡಗಳನ್ನು ತೆರವುಗಳಿಸಬೇಕು ಎಂದರು . ಅಲ್ಲದೆ ಇಲ್ಲನ ಬಹುತೇಕ ವಸತಿಗೃಹಗಳಿಗೆ ಪಾರ್ಕಿಂಗ ಸ್ಥಳಾವಕಾಶವಿಲ್ಲ,ಆದರೂ ಪರವಾನಿಗೆ ನೀಡಿದ್ದು ಇದರಿಂದ ರಸ್ತೆಯ ಮೇಲೆ ವಾಹನ ನಿಲ್ಲುತ್ತದೆ ಇಂತಹ ವಸತಿಗೃಹಗಳ ವಿರುದ್ದ ಕ್ರಮ ಕೈಗೊಳ್ಳಬೇಕು , ಅನೇಕ ಪರವಾನಿಗೆ ರಹಿತವಾಗಿ ಬಹುಮಹಡಿ ಕಟ್ಟಡ ರಸ್ತೆ ಬದಿಯಲ್ಲೆ ಕಟ್ಟಿದ್ದಾರೆ ಇಂತವರ ವಿರುದ್ದ ಯಾಕೆ ಕ್ರಮ ತೆಗೆದು ಕೊಳ್ಳದೆ ಪ್ರಶ್ನಿಸಿದ್ದಾರೆ. ಬಡವರಿಗೊಂದು ನ್ಯಾಯ ಶ್ರೀಮಂತರಿಗೊಂದ ನ್ಯಾಯವೇ ಎಂಬ ಸಂದೇಹ ಜನರಲ್ಲಿ ಮೂಡಿದೆ.