Home Local ನಾಳೆ ನಡೆಯಲಿದೆ ಅಭಯ ಗೋ ಯಾತ್ರೆ.

ನಾಳೆ ನಡೆಯಲಿದೆ ಅಭಯ ಗೋ ಯಾತ್ರೆ.

SHARE

ಕುಮಟಾ : ದಿನಾಂಕ 03-12-2017 ರಂದು ಅಭಯ ಗೋಯಾತ್ರೆಯ ಉದ್ಘಾಟನಾ ಸಮಾರಂಭ ನಡೆಯಲಿದೆ.

ಮಧ್ಯಾಹ್ನ 3:30 ಕ್ಕೆ ಸರಿಯಾಗಿ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದಿಂದ ಮೆರವಣಿಗೆ ಶ್ರೀ ಪಾಂಡುರಂಗ ಮಹಾರಾಜ ಗಂವ್ಹಾರ ಮಠ ಇವರ ದಿವ್ಯ ಉಪಸ್ಥಿತಿ ಹಾಗೂ ವಿವಿಧ ಸಂತರುಗಳ ದಿವ್ಯ ಉಪಸ್ಥಿತಿಯಲ್ಲಿ ಚಾಲನೆಗೊಳ್ಳುವುದು.

ಕುಮಟಾ ಪಟ್ಟಣದಲ್ಲಿ ಶೋಭಾಯಾತ್ರೆ ಸಂಚರಿಸಿ ಅಪರಾಹ್ನ 5:00 ಗಂಟೆಗೆ ಕೊಂಕಣ ಎಜ್ಯುಕೇಶನ್ ಟ್ರಸ್ಟ ಮೈದಾನದಲ್ಲಿ ಸಮಾವೇಶಗೊಳ್ಳುವುದು.

ಸಭಾ ಕಾರ್ಯಕ್ರಮವು ಪರಮಪೂಜ್ಯ ಶ್ರೀಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ಹಾಗೂ ನಾಡಿನ ಇತರ ಪ್ರಮುಖ ಸಂತರ ದಿವ್ಯ ಉಪಸ್ಥಿತಿಯಲ್ಲಿ ಉದ್ಘಾಟನೆಗೊಳ್ಳುವುದು.

ಈ ಕಾರ್ಯಕ್ರಮಕ್ಕೆ ಭಾರತೀಯ ಗೋ ಪರಿವಾರ ಕರ್ನಾಟಕ ರಾಜ್ಯ ಮತ್ತು ಉತ್ತರ ಕನ್ನಡ ,ಹವ್ಯಕ ಮಹಾಮಂಡಲ, ಕುಮಟಾ ಹೊನ್ನಾವರ ಮಂಡಲ ಮತ್ತು ಸ್ವಾಗತ ಸಮಿತಿ ಅಭಯ ಗೋ ಯಾತ್ರೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸರ್ವರನ್ನೂ ಸ್ವಾಗತಿಸಿದ್ದಾರೆ.