Home Local ಉತ್ತರಕನ್ನಡ ಜಿಲ್ಲೆಯ ಹೆಸರಿನಲ್ಲಿಯೇ ಅಪಾರ ಶ್ರೀಮಂತ ಸಂಪತಭರಿತವಾದ ಕನ್ನಡ ಭಾಷೆ ಅಡಗಿದೆ: ನಾಡೋಜ ಜೋಶಿ

ಉತ್ತರಕನ್ನಡ ಜಿಲ್ಲೆಯ ಹೆಸರಿನಲ್ಲಿಯೇ ಅಪಾರ ಶ್ರೀಮಂತ ಸಂಪತಭರಿತವಾದ ಕನ್ನಡ ಭಾಷೆ ಅಡಗಿದೆ: ನಾಡೋಜ ಜೋಶಿ

SHARE

ಮುಂಡಗೋಡ: ಉತ್ತರಕನ್ನಡ ಜಿಲ್ಲೆಯ ಹೆಸರಿನಲ್ಲಿಯೇ ಅಪಾರ ಶ್ರೀಮಂತ ಸಂಪತಭರಿತವಾದ ಕನ್ನಡ ಭಾಷೆ ಅಡಗಿದೆ, ಅದರ ಉಳಿವಿಗಾಗಿ ಎಲ್ಲರೂ ಕನ್ನಡ ಬಳಸಲು ಕಂಕಣಬದ್ಧರಾಗಿ,ನಮ್ಮ ಭಾಷೆಯ ಮಹತ್ವವನ್ನು ಅರಿತು ತಮ್ಮ ಮುಂದಿನ ಪೀಳಿಗೆಗೆ ಕನ್ನಡದ ಕಸ್ತೂರಿಯ ಕಂಪನ್ನು ಬುಡಮಟ್ಟದಿಂದಲೇ ತಿಳಿಸಿ ಗಟ್ಟಿಗೊಳಿಸಬೇಕೆಂದು ಬೆಂಗಳೂರ ಚಂದನ ದೂರದರ್ಶನ ಕೇಂದ್ರದ ನಿವೃತ್ತ ಮಹಾ ನಿರ್ದೇಶಕ, ನಾಡೋಜ ಡಾ.ಮಹೇಶ ಜೋಶಿ ಹೇಳಿದರು.

ಅವರು ಮುಂಡಗೋಡದ ವಿವೇಕಾನಂದ ಬಯಲುರಂಗ ಮಂಟಪದಲ್ಲಿ ನಿರ್ಮಿಸಿದ ಸಂತ ಶಿಶುನಾಳ ಶರೀಫರ ವೇದಿಕೆಯಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆಯ ಉತ್ತರಕನ್ನಡ ಜಿಲ್ಲಾ ಪ್ರಥಮ ಸಾಹಿತ್ಯ ಸಮ್ಮೇಳನವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.

ಕಸ್ತೂರಿ ಸಿರಿಗನ್ನಡ ವೇದಿಕೆಯ ಉತ್ತರಕನ್ನಡ ಜಿಲ್ಲಾ ಪ್ರಥಮ ಸಾಹಿತ್ಯ ಸಮ್ಮೇಳನದ ಮಹಾದ್ವಾರದ ಉದ್ಘಾಟನೆಯನ್ನು ತಾಲೂಕಾ ದಂಡಾಧಿಕಾರಿ ಅಶೋಕ ಗುರಾಣಿ ನೆರವೇರಿಸಿದರು.

ಕನ್ನಡ ಧ್ವಜಾರೋಹಣವನ್ನು ಕಸ್ತೂರಿ ಸಿರಿಗನ್ನಡ ವೇದಿಕೆಯ ರಾಜ್ಯಾಧ್ಯಕ್ಷ ಪೋತೇರ ಮಹಾದೇವು ನೇರವೇರಿಸಿ, ಮಾತನಾಡುತ್ತಾ ಕನ್ನಡದ ನೆಲದಲ್ಲಿ ವಾಸಿಸುವ ನಾವುಗಳು ನಮಗೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಈ ಭೂಮಿಯಿಂದ,ಈ ಭಾಷೆಯಿಂದಲೇ ಪಡೆದ ಕೃತಜ್ಞತೆಗಾದರೂ ರಾಜ್ಯದ ಸ್ಥಳೀಯ ಭಾಷೆಯ ಬಗ್ಗೆ ಗೌರವ,ಕಾಳಜಿ ಮಾಡುವದು ನಮ್ಮೆಲ್ಲರ ಜವಾಬ್ದಾರಿಯಷ್ಟೇ ಅಲ್ಲ, ಕರ್ತವ್ಯ ಕೂಡ ಎಂದರು.

ಕಸ್ತೂರಿ ಸಿರಿಗನ್ನಡ ವೇದಿಕೆಯ ಉತ್ತರಕನ್ನಡ ಜಿಲ್ಲಾ ಪ್ರಥಮ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಸಹದೇವ ನಡಗೇರ ಮುಖ್ಯದ್ವಾರ ಉದ್ಘಾಟಿಸುತ್ತಾ ಮಾತನಾಡಿ, ಕನ್ನಡವನ್ನು ಉಳಿಸಿ ಬೆಳೆಸಬೇಕಾಗಿದ್ದು ಪ್ರತಿಯೊಬ್ಬರ ಕರ್ತವ್ಯವಾಗಿದೆಯೆಂದು ಕರೆ ನೀಡಿದರು.ವೇದಿಕೆ,ಮುಖ್ಯದ್ವಾರ,ಮಹಾದ್ವಾರಗಳ ಪರಿಚಯವನ್ನು ಬಿ.ಆರ್.ಪಿ. ಸುರೇಶ ಪೂಜಾರ ಮಾಡಿಕೊಟ್ಟರು.

ಜಿಲ್ಲಾ ಪಂಚಾಯತನ ಶಿಕ್ಷಣ ಮತ್ತುಆರೋಗ್ಯ ಸ್ಥಾಯಿಸಮಿತಿ ಅಧ್ಯಕ್ಷ ಎಲ್.ಟಿ.ಪಾಟೀಲ್, ಎಸ್.ಫಕ್ಕೀರಪ್ಪ, ಚಿದಾನಂದ ಹರಿಜನ, ತಾಲೂಕಾ ಪಂಚಾಯತ ಅಧ್ಯಕ್ಷೆ ದಾಕ್ಷಯಣಿ ಸುರಗೀಮಠ,ಜಿ.ಪಂ.ಸದಸ್ಯೆ ಜಯಮ್ಮ ಹಿರೇಹಳ್ಳಿ,ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಎಂ.ಬಸವರಾಜಪ್ಪ, ಸೇರಿದಂತೆ ಮುಂತಾದವರು ವೇದಿಕೆ ಮೇಲಿದ್ದರು.
ಆರಂಭದಲ್ಲಿ ಕರಗಿನಕೊಪ್ಪದ ಮುರಾರ್ಜಿ ಶಾಲೆಯ ಮಕ್ಕಳಿಂದ ಪ್ರಾರ್ಥನೆ ಗೀತೆ, ನಾಡಗೀತೆ,ರೈತಗೀತೆಗಳನ್ನು ಹಾಡಲಾಯಿತು. ಕಸ್ತೂರಿ ಸಿರಿಗನ್ನಡ ವೇದಿಕೆಯ ಜಿಲ್ಲಾಧ್ಯಕ್ಷ ಎಸ್.ಡಿ.ಮುಡೆಣ್ಣವರ ಸ್ವಾಗತಿಸಿದರು. ವಿನಾಯಕ ಶೇಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದಿನೇಶ ವೆರ್ಣೇಕರ,ಬಾಲಚಂದ್ರ ಹೆಗಡೆ,ಸುರೇಶ ಪೂಜಾರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಇದೇ ಸಮಯದಲ್ಲಿ ವಿನಾಯಕ ಶೇಟ್ ಬರೆದ “ಚಿತ್ತ ಮಯೂರಿ”, ನಾಗರಾಜ ಅರ್ಕಸಾಲಿ ರಚಿಸಿದ “ಯನದ ಭಾವಗಳು” ಸಂತೋಷ ತಳವಾರ ಬರೆದ ಶ್ರೀ ಬಾಣಂತಿ ದೇವಿಯ ಚರಿತ್ರೆ, ಎಂಬ ಕವನ ಸಂಕಲನವನ್ನು ವೇದಿಕೆಯ ಮೇಲೆ ಬಿಡುಗಡೆ ಮಾಡಿದರು.
ಸಂತ ಶಿಶುನಾಳ ಶರೀಫರ ವೇದಿಕೆಯಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆಯ ಉತ್ತರಕನ್ನಡ ಜಿಲ್ಲಾ ಪ್ರಥಮ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷ ಪಿ.ಪಿ.ಛಬ್ಬಿ ಅವರ ಮೆರವಣಿಗೆಯು ಅದ್ಧೂರಿಯಿಂದ ನಡೆಯಿತು.

ಮುಂಡಗೋಡ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ ಬೆಂಗಳೂರ ಚಂದನ ದೂರದರ್ಶನ ಕೇಂದ್ರದ ನಿವೃತ್ತ ಮಹಾ ನಿರ್ದೇಶಕ ನಾಡೋಜ ಡಾ. ಮಹೇಶ ಜೋಶಿ ಕಸ್ತೂರಿ ಸಿರಿಗನ್ನಡ ವೇದಿಕೆಯ ಜಿಲ್ಲಾ ಪ್ರಥಮ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿದರು.

ಸಮ್ಮೇಳನಾಧ್ಯಕ್ಷ ಪಿ.ಪಿ.ಛಬ್ಬಿ ಅವರ ಮೆರವಣಿಗೆಯು ಮುಂಡಗೋಡ ಲೋಕೋಪಯೋಗಿ ಪ್ರವಾಸಿಮಂದಿರದಿಂದ ಆರಂಭವಾಗಿ ಪಟ್ಟಣದ ಶಿವಾಜಿ ಸರ್ಕಲ್‍ದಿಂದ ದಿ.ಎ.ಎಚ್.ದೊಡ್ಮನಿ ಮುಖ್ಯದ್ವಾರದ ಮೂಲಕ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಶ್ರೀ ಸಹದೇವಪ್ಪ ನಡಗೇರಿ ಮಹಾದ್ವಾರದ ಮೂಲಕ ಸಮ್ಮೇಳನ ನಡೆಯುವ ಸ್ಥಳಕ್ಕೆ ಕರೆ ತರಲಾಯಿತು. ಈ ಮೆರವಣಿಗೆಯಲ್ಲಿ ಕನ್ನಡಾಭಿಮಾನಿಗಳು,ತಾಲೂಕಿನ ಗೌಳಿ ಸಮೂದಾಯದ ನೃತ್ಯಗಳು,ವಾದ್ಯ ಮೇಳಗಳು ಆಕರ್ಷಕವಾಗಿತ್ತು.
ಈ ಮೆರವಣಿಗೆಯಲ್ಲಿ ಮಾಜಿ ಶಾಸಕ ವಿ.ಎಸ್.ಪಾಟೀಲ.ಪಟ್ಟಣ ಪಂಚಾಯತ ಅಧ್ಯಕ್ಷ ರಫೀಕ ಇನಾಂದಾರ, ತಾಲೂಕಾ ಕಸ್ತೂರಿ ಸಿರಿಗನ್ನಡ ವೇದಿಕೆಯ ಅಧ್ಯಕ್ಷೆ ರಾಧಾಬಾಯಿ ಶಿರಾಲಿ, ಹಳಿಯಾಳ ಕ.ಸಾ.ಪ.ದ ಮಾಜಿ ಅಧ್ಯಕ್ಷ ಬಿ.ಎನ್.ವಾಸರೆ, ಸೇರಿದಂತೆ ತಾಲೂಕಾ ಹಾಗೂ ಜಿಲ್ಲಾ ಕಸ್ತೂರಿ ಸಿರಿಗನ್ನಡ ವೇದಿಕೆಯ ಪದಾಧಿಕಾರಿಗಳು ಸದಸ್ಯರು, ಹಾಗೂ ಊರ ನಾಗರಿಕರು ಪಾಲ್ಗೊಂಡಿದ್ದರು.

ಕನ್ನಡ ಭಾಷೆ, ಕನ್ನಡ ಜನ, ಕನ್ನಡ ಸಂಘ, ಸಂಸ್ಥೆಗಳು, ಕನ್ನಡ ಆತ್ಮಬಲ ಹೊಂದಿದ ಜನತೆಗೆ ಉಳಿದಿರುವ ಏಕೈಕ ಮಾರ್ಗವೆಂದರೆ ಕರ್ನಾಟಕ ರಾಜ್ಯ ಭಾಷೆಯ ಕುರಿತು ರಚನಾತ್ಮಕವಾಗಿ, ಕ್ರಿಯಾತ್ಮಕವಾಗಿ, ಸೃಜನಾತ್ಮಕವಾಗಿ, ಸಂಘಟನಾತ್ಮಕವಾಗಿ ನಾಡಿನಾಧ್ಯಂತ ನಾಡ ನುಡಿಯನ್ನು ಉಳಿಸಿ, ಬೆಳೆಸಲು ಶ್ರಮಿಸುವದು ಅವಶ್ಯವಾಗಿದೆ. ಹಾಗೂ ಕನ್ನಡವೆಂಬುವದು ಒಂದು ಆಲದ ಮರ! ಇದರ ಬೇರು ಪಾತಾಳ ಕಂಡರೆ ಚಿಗುರು ಬೇರುಗಳು ಪುನಃ ಭೂಮಿಗೆ ಇಳಿದು ಮರವನ್ನು ಮತ್ತಷ್ಟು ಗಟ್ಟಿಗೊಳಿಸುವಂತೆ ನಮ್ಮ ಕನ್ನಡ ನುಡಿ,ಭಾಷೆ, ಸಾಹಿತ್ಯಗಳು ಮನೆ-ಮನೆಮಾತಾಗಬೇಕು ಎಂದು ಕಸ್ತೂರಿ ಸಿರಿಗನ್ನಡ ವೇದಿಕೆಯ ಜಿಲ್ಲಾ ಪ್ರಥಮ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷ ಪಿ.ಪಿ.ಛಬ್ಬಿ ಹೇಳಿದರು.