Home Local ಸಿ.ಎಂ ಸ್ವಾಗತಕ್ಕೆ ಸಜ್ಜುಗೊಂಡಿದೆ ಉತ್ತರಕನ್ನಡ.

ಸಿ.ಎಂ ಸ್ವಾಗತಕ್ಕೆ ಸಜ್ಜುಗೊಂಡಿದೆ ಉತ್ತರಕನ್ನಡ.

SHARE

ಭಟ್ಕಳ: ಡಿಸೆಂಬರ್ 6 ರಂದು ಸರ್ಕಾರಿ ಕಾರ್ಯಕ್ರಮವಾದ ತಾಲೂಕಿನ 1214.35 ಕೋಟಿ ರೂ.ಗಳ ಕಾಮಗಾರಿ ಉದ್ಘಾಟನೆ ಮತ್ತು ಅಡಿಗಲ್ಲು ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಭಟ್ಕಳಕ್ಕೆ ಆಗಮಿಸಲಿದ್ದು, ಈ ಹಿನ್ನೆಲೆಯಲ್ಲಿ ತಾಲುಕಾಡಳಿತದಿಂದ ಸಕಲ ಸಿದ್ಧತೆಗಳು ತಯಾರಾಗುತ್ತಿದೆ.

ರಾಜ್ಯ ಸರಕಾರದ 5 ವರ್ಷದ ಅವಧಿ ಪೂರ್ಣಗೊಳ್ಳುವುದು ಸಮೀಪಿಸುತ್ತಿದ್ದು, ಮುಖ್ಯಮಂತ್ರಿ ಸರಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ರಾಜ್ಯ ಪ್ರವಾಸದತ್ತ ತೆರಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಗೆ ಆಗಮಿಸಿಲಿದ್ದು, ಡಿಸೆಂಬರ್ 6 ರಂದು ಬೆಳಿಗ್ಗೆ 9.45ಕ್ಕೆ ಬೆಂಗಳೂರಿನಿಂದ ಎಚ್.ಎ.ಎಲ್. ವಿಮಾಣ ನಿಲ್ದಾಣದಿಂದ ಮಂಗಳೂರಿಗೆ 10.35ಕ್ಕೆ ಬಂದು ಅಲ್ಲಿಂದ ಹೆಲಿಕ್ಯಾಪ್ಟರ್ ಮೂಲಕ 11.25ಕ್ಕೆ ತಾಲುಕಿನ ಅಂಜುಮಾನ್ ಗ್ರೌಂಡನಲ್ಲಿ ಹೆಲಿಕ್ಯಾಪ್ಟರನಲ್ಲಿ ಬಂದು ಇಳಿಯಲಿದ್ದು, ಈಗಾಗಲೇ ವಿಮಾನ ಇಳಿಯಲು ಬೇಕಾದ ಎಲ್ಲಾ ರೀತಿಯ ಹೆಲಿಪ್ಯಾಡ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ಪೋಲೀಸ್ ಪೇರೆಡ್ ಗ್ರೌಂಡ್‍ಗೆ ಬರಲಿದ್ದು, ಮುಖ್ಯಮಂತ್ರಿಗಳ ಕಾರು ಬರಲೆಂದೇ ವಿಶೇಷವಾದ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ. ಈಗಾಗಲೇ ಮುಖ್ಯಮಂತ್ರಿಗಳು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲು ಭಾರಿ ದೊಡ್ಡ ವೇದಿಕೆ ತಯಾರಾಗುತ್ತಿದ್ದು, 40*60 ವಿಸ್ತೀರಣದ ಎಲ್.ಇ.ಡಿ. ದೊಡ್ಡ ವೇದಿಕೆಯೂ ನಿರ್ಮಾಣವಾಗುತ್ತಿದೆ. ಉದ್ಘಾಟನಾ ಕಾರ್ಯಕ್ರಮವನ್ನು ಡಿಜಿಟಲ್ ಮಾದರಿಯಲ್ಲಿ ನಡೆಯಲಿದ್ದು, ವೇದಿಕೆಯ ಮುಂದುಗಡೆ ಮಾಧ್ಯಮದವರಿಗೆ ಸೇರಿದಂತೆ ಕೆಲವು ಗಣ್ಯರಿಗೆ ಆಸನ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರಿಗಾಗಿ 25,000 ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದೆ. ವೇದಿಕೆಯ ಪಕ್ಕದಲ್ಲಿ ಬರುವ ಎಲ್ಲಾ ಗಣ್ಯರಿಗೂ ವಾಹನ ವ್ಯವಸ್ಥೆ ಮಾಡಲಾಗಿದೆ. ಇನ್ನು ವೇದಿಕೆಯ ಹಿಂಬದಿಯಲ್ಲಿ ಗಣ್ಯರ ವಾಹನ ತೆರಳಲು ತುರ್ತು ರಸ್ತೆ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ದಾನಿಗಳು ಊಟದ ವ್ಯವಸ್ಥೆ ಮಾಡಿದ್ದಾರೆ.

ಇನ್ನು ಈಗಾಗಲೇ ಟೆಂಡರ್ ಆಗಿರುವ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಮುಗಿದಿರುವ ಕಾಮಗಾರಿಗಳ ಉದ್ಘಾಟನೆಯನ್ನು ಮುಖ್ಯಮಂತ್ರಿಗಳು ನೆರವೇರಿಸಲಿದ್ದು, ತಾಲುಕಿನ ಜನತೆಯನ್ನುದ್ದೇಶಿಸಿ ರಾಜ್ಯ ಸರಕಾರದ ಹಾಗೂ ವಿಶೇಷವಾಗಿ ತಾಲುಕಿನ ಶಾಸಕರ 1000 ಕೋಟಿ ರೂ.ಗಳ ಸವಿವರ ನೀಡಲಿದ್ದಾರೆಂಬ ಮಾಹಿತಿ ಸಹ ತಿಳಿದು ಬಂದಿದೆ.
ಮುಖ್ಯಮಂತ್ರಿಗಳು ಭಟ್ಕಳಕ್ಕೆ ಬರುವ ಹಿನ್ನೆಲೆಯಲ್ಲಿ ಭಟ್ಕಳದಲ್ಲಿ ಕೈಪಡೆಯಿಂದ ಸಾಕಷ್ಟು ತಯಾರಿ ನಡೆದಿದ್ದು, ಈ ಪೈಕಿ ಪೋಲೀಸ್ ಪೆರೇಡ್ ಮೈದಾನದಲ್ಲಿ ನಿರ್ಮಾಣವಾಗುತ್ತಿರುವ ವೇದಿಕೆಗೆ ತೆರಳಲು ಸಿದ್ದರಾಮಯ್ಯನವರು ಎರಡು ಮಾರ್ಗದಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದೆ.

ಮುಖ್ಯಮಂತ್ರಿಗಳು ಭಟ್ಕಳಕ್ಕೆ ಬರುವ ಹಿನ್ನೆಲೆಯಲ್ಲಿ ಬಿಗಿ ಪೋಲೀಸ್ ಬಂದೋಬಸ್ತ ವ್ಯವಸ್ಥೆ ಮಾಡಲಾಗಿದ್ದು, ಭಟ್ಕಳದ ಎಲ್ಲಾ ಕಡೆ ಪೋಲೀಸ್ ಸರ್ಪಗಾವಲು ಹಾಕಲಾಗಿದೆ.
ಮುಖ್ಯಮಂತ್ರಿಗಳು ಭಟ್ಕಳದಲ್ಲಿ 1 ಗಂಟೆಗೆ ಕಾರ್ಯಕ್ರಮವನ್ನು ಮುಗಿಸಿ 1.20ಕ್ಕೆ ಹೆಲಿಕ್ಯಾಪ್ಟರ್ ಮೂಲಕ ಕುಮಟಾ, 5.ಗಂಟೆಗೆ ಕಾರವಾರಕ್ಕೆ ಆಗಮಿಸಲಿದ್ದಾರೆ. ಮಾರನೇ ದಿನ ಗುರುವಾರ ಡಿಸೆಂಬರ್ 7ರಂದು ಬೆಳಿಗ್ಗೆ 10 ಗಂಟೆಗೆ ಹೆಲಿಕ್ಯಾಪ್ಟರ್ ಕಾರವಾರದಿಂದ ಶಿರಸಿಗೆ ಪ್ರಯಾಣ, 10.25ಕ್ಕೆ ಶಿರಸಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ, 12.50ಕ್ಕೆ ಮುಂಡಗೋಡಿನಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಸಾರ್ವಜನಿಕ ಸಭೆ, 4 ಗಂಟೆಗೆ ಹಳಿಯಾಳಕ್ಕೆ ತೆರಳಿ ಅಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಹಾಗೂ ಸಾರ್ವಜನಿಕ ಸಭೆ, ಹಳಿಯಾಳದಿಂದ ರಸ್ತೆಯ ಮೂಲಕ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿ ಅಲ್ಲಿ ವಿಶೇಷ ವಿಮಾನದಲ್ಲಿ ಬೆಂಗಳುರಿಗೆ ಪ್ರಯಾಣ ಬೆಳೆಸಲಿದ್ದಾರೆ.