Home Important ಕುಡಿತದ ವಯೋಮಿತಿ 23ಕ್ಕೆ ಏರಿಕೆ!

ಕುಡಿತದ ವಯೋಮಿತಿ 23ಕ್ಕೆ ಏರಿಕೆ!

SHARE

18 ವರ್ಷ ಮೇಲ್ಪಟ್ಟವರು ಬಿಡಿ, ಸಿಗರೇಟು ಜೊತೆಗೆ ಎಣ್ಣೆ ಕೂಡ ಹೊಡೆಯಬಹುದು ಎಂದುಕೊಂಡು ಇನ್ನುಮುಂದೆ ಎಣ್ಣೆ ಹೊಡೆಯೋಕೆ ಹೋಗೋಕೆ ಮುಂಚೆ ಈ ಸುದ್ದಿಯನ್ನು ಒಮ್ಮೆ ಓದಿ.

ಇನ್ನು ಮುಂದೆ ಎಣ್ಣೆ ಹೊಡಿಬೇಕು ಅಂದ್ರೆ ಅವರ ವಯೋಮಿತಿ 21-23 ಆಗಿರಬೇಕು. ಇಂತಹದೊಂದು ಅಬಕಾರಿ ನಿಯಮವನ್ನು ಜಾರಿಗೆ ತರಲು ಕೇರಳ ಸರ್ಕಾರ ಮುಂದಾಗಿದೆ.

ಕೇರಳದಲ್ಲಿ ಸಿಪಿಎಂ ಪಕ್ಷ ಆಡಳಿತದ ಚುಕ್ಕಾಣಿ ಹಿಡಿದ ಬಳಿಕ ಅಬಕಾರಿ ನಿಯಮದಲ್ಲಿ ಸಾಕಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಲಾರಂಭಿಸಿದೆ.

ಈ ಮುಂಚೆ ಕೇರಳದಲ್ಲಿ ಬಾರ್ ಗಳಿಗೆ ನಿಷೇಧ ಹೇರಲಾಗಿತ್ತು. ನಂತರ ಸ್ಟಾರ್ ಹೋಟೆಲ್ ಗಳಲ್ಲಿ ಮತ್ತು ರೆಸ್ಟೊರೆಂಟ್ ಗಳಲ್ಲಿ ಬಾರ್ ಗಳಲ್ಲಿ ಮಾತ್ರ ಮದ್ಯ ಸರಬರಾಜು ಮಾಡಲು ಅನುವು ಮಾಡಿಕೊಡಲಾಗಿತ್ತು.

ಇದೀಗ ಕುಡಿಯುವವರ ವಯೋಮಿತಿಯನ್ನು ಹೆಚ್ಚಿಸಲು ಹೊರಟಿರುವುದರಿಂದ ಎಣ್ಣೆ ಮಾರಾಟಗಾರರಿಗೆ ಕೊಂಚ ಹೊಡೆತ ಬೀಳುವ ಸಾಧ್ಯತೆ ದಟ್ಟವಾಗಿದೆ.