Home Local ಸಿದ್ದರಾಮಯ್ಯರಿಂದ ಗುದ್ದಲಿ ಪೂಜೆ ನಾಟಕ; ಪ್ರದೀಪ ನಾಯಕ್

ಸಿದ್ದರಾಮಯ್ಯರಿಂದ ಗುದ್ದಲಿ ಪೂಜೆ ನಾಟಕ; ಪ್ರದೀಪ ನಾಯಕ್

SHARE

ಕುಮುಟಾ: ಸರ್ಕಾರದ ಅವಧಿ 4 ತಿಂಗಳಿರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಗುದ್ದಲಿ ಪೂಜೆ ಮಾಡುವ ಮೂಲಕ ನಾಟಕವಾಡುತ್ತಿದ್ದಾರೆ ಎಂದು ಜೆ ಡಿ ಎಸ್ ಮುಖಂಡ ಪ್ರದೀಪ ನಾಯಕ ಆರೋಪಿಸಿದರು.

ತಾಲೂಕಿನ ಬರ್ಗಿ ಗ್ರಾಮದಲ್ಲಿ, ಪಂಚಾಯತ ಮಟ್ಟದಲ್ಲಿ ಆಯೋಜಿಸಲಾದ ಜೆ ಡಿ ಎಸ್ ಪಕ್ಷದ ಪಂಚಾಯತ್ ವ್ಯಾಪ್ತಿಯ ಸಭೆಯನ್ನು ಉದ್ಘಾಟಿಸಿ ಮಾತನಡಿದ ಅವರು, ಮುಂರುವ ಚುನಾವಣೆಯಲ್ಲಿ ಎರಡು ರಾಷ್ಟೀಯ ಪಕ್ಷಗಳನ್ನು ಬಿಟ್ಟು, ಜನರು ಪ್ರಾದೇಶಿಕ ಪಕ್ಷವಾದ ಜೆ ಡಿ ಎಸ್ ಗೆ ಅವಕಾಶ ನೀಡಬೇಕೆಂದು ಜನ ತೀರ್ಮಾನಿಸಿದ್ದಾರೆ ಎಂದು ಆಭಿಪ್ರಾಯ ಪಟ್ಟರು. ಪಕ್ಷದ ಮುಖಂಡರು ಕಾರ್ಯಕರ್ತರು ಇನ್ನು ಹೆಚ್ಚಿನ ಕೆಲಸ ಜನಸಾಮಾನ್ಯರ ಪರವಾಗಿ ಮಾಡಬೇಕೆಂದು ಕರೆನೀಡಿದರು.

ಜೆ ಡಿ ಎಸ್ ಪಕ್ಷದ ಪ್ರಣಾಳಿಕೆಗಳು ಉತ್ತಮವಾಗಿದ್ದು, ಮಹಿಳೆಯರ, ಕೃಷಿಕರ, ಕಾರ್ಮಿಕರ, ಜನಪರವಾಗಿವೆ. ಕುಮಾರಸ್ವಾಮಿ ಸಿ.ಎಂ ಆದರೆ ಮಾತ್ರ ಈ ಎಲ್ಲಾ ಪ್ರಣಾಳಿಕೆಗಳು ಜಾರಿಗೆ ಬರಲು ಸಾಧ್ಯ ಎಂದರು.

ತಾ.ಪಂ ಸದಸ್ಯ ಈಶ್ವರ್ ನಾಯ್ಕ್ ಹಾಗೂ ಗಜು ನಾಯಕ್ ಮಾತನಾಡಿ, ಪ್ರದೀಪ ನಾಯಕ್ ಅವರನ್ನ ಶಾಸಕರನ್ನಾಗಿಸುವುದೇ ನಮ್ಮ ಮುಂದಿರುವ ಮುಖ್ಯ ಗುರಿ ಎಂದು ಹೇಳಿದರು.