Home Important ಹೊನ್ನಾವರಕ್ಕೆ ಆಗಮಿಸಿದ ಅನಂತ್ ಕುಮಾರ್ ಹೆಗಡೆ!

ಹೊನ್ನಾವರಕ್ಕೆ ಆಗಮಿಸಿದ ಅನಂತ್ ಕುಮಾರ್ ಹೆಗಡೆ!

SHARE

ಹೊನ್ನಾವರ : ನಿನ್ನೆಯ ಕೋಮು ಗಲಾಟೆಯಲ್ಲಿ ನಾಪತ್ತೆಯಾಗಿ ಇಂದು ಶವವಾಗಿ ಪತ್ತೆಯಾಗಿದ್ದ ಪರೇಶ ಮೇಸ್ತಾ ಪಾರ್ಥೀವ ಶರೀರಕ್ಕೆ ಅನಂತ್ ಕುಮಾರ್ ಹೆಗಡೆ ಅಂತಿಮ ನಮನ ಸಲ್ಲಿಸಿದರು .

ಇಂದು ಸಾಯಂಕಾಲ ಹೊನ್ನಾವರಕ್ಕೆ ಆಗಮಿಸಿದ ಅವರು ಪರೇಶ್ ಮೇಸ್ತ ಅವರಿಗೆ ಅಂತಿಮ ನಮನ ಸಲ್ಲಿಸಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಕೆಲ ಕಾಲ ಮೆರವಣಿಗೆಯಲ್ಲಿ ಭಾಗವಹಿಸಿದ ಇವರು ನಂತರ ಪರೇಶ್ ಮೇಸ್ತ ಸಂಗಡಿಗರಿಗೆ ಹಾಗೂ ಕುಟುಂಬದವರಿಗೆ ಸಾಂತ್ವನ ಹೇಳಿದರು .

ಈ ಸಂದರ್ಭದಲ್ಲಿ ಪರೇಶ ಮೇಸ್ತಾ ಸಂಗಡಿಗರು ಹಾಗೂ ಕುಟುಂಬದವರು ಹಾಗೂ ಬಿಜೆಪಿ ಮುಖಂಡರಾದ ಶೋಭಾ ಕರಂದ್ಲಾಜೆ ,ವಿಶ್ವೇಶ್ವರ ಹೆಗಡೆ ಕಾಗೇರಿ ,ದಿನಕರ ಶೆಟ್ಟಿ ,ನಾಗರಾಜ ನಾಯಕ ತೊರ್ಕೆ, ಸೂರಜ್ ನಾಯ್ಕ ಸೋನಿ, ಸುನಿಲ್ ನಾಯ್ಕ ಗೋವಿಂದ ನಾಯ್ಕ, ವೆಂಕಟರಮಣ ಹೆಗಡೆ ವಿಶ್ವೇಶ್ವರ ಹೆಗಡೆ ಕಾಗೇರಿ ರೂಪಾಲಿ ನಾಯ್ಕ ಇನ್ನಿತರರು ಹಾಜರಿದ್ದರು.