Home Local ಚರ್ಚಿತವಾಯ್ತು “ಮೊಬೈಲ್ ಬಳಕೆ ವಿದ್ಯಾರ್ಥಿಗಳಿಗೆ ಅನಿವಾರ್ಯವಲ್ಲ” ವಿಷಯ.

ಚರ್ಚಿತವಾಯ್ತು “ಮೊಬೈಲ್ ಬಳಕೆ ವಿದ್ಯಾರ್ಥಿಗಳಿಗೆ ಅನಿವಾರ್ಯವಲ್ಲ” ವಿಷಯ.

SHARE

ಕುಮಟಾ : ತಾಲೂಕಿನ ಹಿರೇಗುತ್ತಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶ್ರೀ ಯಶೋಧರ ನಾಯ್ಕ ಟ್ರಸ್ಟ್ ವತಿಯಿಂದ “ಮೊಬೈಲ್ ಬಳಕೆ ವಿದ್ಯಾರ್ಥಿಗಳಿಗೆ ಅನಿವಾರ್ಯವಲ್ಲ” ಎಂಬ ವಿಷಯದ ಕುರಿತು ಚರ್ಚಾ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಕಾಲೇಜಿನ ಪ್ರಾಚಾರ್ಯರಾದ ಪ್ರೇಮಾನಂದ ಗಾಂವಕರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ವಾಸುದೇವ ನಾಯಕ ಅವರು ಅಧ್ಯಕ್ಷತೆಯನ್ನು ವಹಿಸಿದರು. ಟ್ರಸ್ಟ್ ನ ಯೋಜನಾಧಿಕಾರಿ ದಿವಾಕರ ಅಘನಾಶಿನಿ ಅವರು ಮೊಬೈಲ ಬಳಕೆಯ ಬಗ್ಗೆ ಮಾತನಾಡಿದರು. ಪೂಜಾ ನಾಯಕ ಪ್ರಥಮ,ಸುಭಾಷಿಣಿ ನಾಯಕ ದ್ವಿತೀಯ, ಅಮೃತಾ ರಾಯ್ಕರ ತೃತೀಯ ಬಹುಮಾನವನ್ನು ಪಡೆದುಕೊಂಡರು. ಉಪನ್ಯಾಸಕರಾದ ಅರುಣ ಹೆಗಡೆ ಸ್ವಾಗತಿಸಿದರು.

ಎನ್.ಎಲ್.ಹೆಗಡೆ ಉಪನ್ಯಾಸಕರು ವಂದಿಸಿದರು. ಟ್ರಸ್ಟ್ ನ ಮೇಲ್ವಿಚಾರಕರಾದ ವಸಂತ ಗೌಡ ಅವರು ಪ್ರಾಸ್ತಾವಿಕ ಮಾತನಾಡಿದರು. ಟ್ರಸ್ಟ್ ನ ಸಿಬ್ಬಂದಿಗಳಾದ ಸುಮನಾ ನಾಯ್ಕ, ದೀಪಾ ನಾಯಕ ಹಾಗೂ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.