Home Important ಜಾಹಿರಾತಿಗಾಗಿ ಕೇಂದ್ರ ಸರಕಾರ ಮಾಡಿದ ಖರ್ಚು ಎಷ್ಟು ಗೊತ್ತಾ?

ಜಾಹಿರಾತಿಗಾಗಿ ಕೇಂದ್ರ ಸರಕಾರ ಮಾಡಿದ ಖರ್ಚು ಎಷ್ಟು ಗೊತ್ತಾ?

SHARE

ಈ ವರ್ಷದ ಅಕ್ಟೋಬರ್ ವರೆಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮೂರೂವರೆ ವರ್ಷದ ಅವಧಿಯಲ್ಲಿ 3755 ಕೋಟಿ ರುಪಾಯಿ ಖರ್ಚು ಮಾಡಿದೆ ಎಂಬ ಸಂಗತಿ ಶುಕ್ರವಾರ ಮಾಹಿತಿ ಹಕ್ಕು ಕಾಯ್ದೆ ಅಡಿ ಹಾಕಿದ ಅರ್ಜಿಯೊಂದಕ್ಕೆ ನೀಡಿದ ಉತ್ತರದಿಂದ ಬಯಲಾಗಿದೆ.

ಏಪ್ರಿಲ್ 2014ರಿಂದ ಅಕ್ಟೋಬರ್ 2017ರವರೆಗೆ ವಿದ್ಯುನ್ಮಾನ ಮಾಧ್ಯಮ, ಮುದ್ರಣ ಮಾಧ್ಯಮ ಹಾಗೂ ಪ್ರಚಾರಕ್ಕಾಗಿ 37 ಕೋಟಿ ರುಪಾಯಿ ಖರ್ಚು ಮಾಡಲಾಗಿದೆ ಎಂದು ಮಾಹಿತಿ ಹಾಗೂ ಪ್ರಸಾರ ಸಚಿವಾಲಯವು ಮಾಹಿತಿ ಹಕ್ಕು ಕಾಯ್ದೆ ಅಡಿ ಕೇಳಿದ ಪ್ರಶ್ನೆಗೆ ಉತ್ತರಿಸಲಾಗಿದೆ.

ಗ್ರೇಟರ್ ನೋಯ್ಡಾ ಮೂಲದ ಸಾಮಾಜಿಕ ಕಾರ್ಯಕರ್ತ ರಾಮ್ ವೀರ್ ತನ್ವರ್ ಮಾಹಿತಿ ಹಕ್ಕು ಕಾಯ್ದೆ ಅಡಿ ಅನ್ವಯ ಹಾಕಿದ್ದ ಅರ್ಜಿಗೆ ಉತ್ತರ ನೀಡಲಾಗಿದೆ. ಮಾಹಿತಿ ಅನ್ವಯ, ಎಲೆಕ್ಟ್ರಾನಿಕ್ ಮಾಧ್ಯಮದ ಜಾಹೀರಾತು- ಸಮುದಾಯ ರೇಡಿಯೋ, ಡಿಜಿಟಲ್ ಸಿನಿಮಾ, ದೂರದರ್ಶನ, ಇಂಟರ್ ನೆಟ್, ಎಸ್ಸೆಮ್ಮೆಸ್ ಮತ್ತು ಟಿ.ವಿಯಲ್ಲಿನದು ಎಲ್ಲ ಸೇರಿ 1656 ಕೋಟಿ ರುಪಾಯಿಯನ್ನು ಕೇಂದ್ರ ಸರಕಾರ ಖರ್ಚು ಮಾಡಿದೆ.

ಮುದ್ರಣ ಮಾಧ್ಯಮದ ಜಾಹೀರಾತಿಗಾಗಿ ಕೇಂದ್ರ ಸರಕಾರ 1698 ಕೋಟಿ ವೆಚ್ಚ ಮಾಡಿದೆ. ಹೋರ್ಡಿಂಗ್, ಪೋಸ್ಟರ್, ಬುಕ್ ಲೆಟ್ ಮತ್ತು ಕ್ಯಾಲೆಂಡರ್ ಸೇರಿ ಹೊರಾಂಗಣ ಜಾಹೀರಾತುಗಳಿಗಾಗಿ ಕೇಂದ್ರ ಸರಕಾರ 399 ಕೋಟಿ ರುಪಾಯಿಯನ್ನು ವೆಚ್ಚ ಮಾಡಿರುವುದಾಗಿ ಆರ್ ಟಿಐ ಬಯಲು ಮಾಡಿದೆ.